Advertisement
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸಂಸ್ಥೆ ಹಾಗೂ ಅಮೆಜಾನ್‌ನೊಂದಿಗೆ ನಡೆದ ಒಡಂಬಡಿಕೆಗೆ ಸಹಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಾತನಾಡಿದರು.
Related Articles
ಈ ಒಪ್ಪಂದದಿಂದ ಬ್ರಾಂಡಿಂಗ್ ಹಾಗೂ ಉತ್ಪನ್ನಗಳ ಸಂಸ್ಕೃತಿಯ ವಿನಿಮಯ ಮಾಡುವ ದೊಡ್ಡ ಹೊಣೆಗಾರಿಕೆ ನಮ್ಮ ಮೇಲಿದೆ. ಪರಿವರ್ತನೆಯನ್ನು ನಾವು ಉಸಿರಾಗಿಸಿಕೊಳ್ಳಬೇಕು. ಉತ್ತಮ ಹಾಗೂ ಸುಸ್ಥಿರ ಮಾರುಕಟ್ಟೆ ಯೊಂದಿಗೆ ಕೌಶಲ್ಯ, ಅರ್ಹತೆ ಹಾಗೂ ಛಲವನ್ನು ಹೊಂದಿರುವ ಗ್ರಾಮೀಣ ಮಹಿಳೆಯರಿಗೆ ಉತ್ತಮವಾದ ಕಾರ್ಯವಿಧಾನದ ಅಗತ್ಯವಿದೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಸಂಜೀವಿನಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕಿದೆ. ಇದರ ಯಶೋಗಾಥೆಯ ಮುಖಾಂತರ ಇತರೆ ಸಣ್ಣ ಉದ್ಯಮ ಹಾಗೂ ಚಟುವಟಿಕೆಗಳಿಗೆ ಇದೇ ಮಾದರಿಯನ್ನು ಅನುಸರಿಸಲು ಸಾಧ್ಯವಾಗಲಿದೆ. ಕರ್ನಾಟಕ ರಾಜ್ಯವು ಪ್ರತಿಭೆ, ಉತ್ಪನ್ನ ಹಾಗೂ ಉದ್ಯಮಗಳಲ್ಲಿ ಪರಿಣಿತಿಯನ್ನು ಹೊಂದಿರುವ ರಾಜ್ಯ ವಾಗಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡುವ ಜನರಿದ್ದಾರೆ. ಕರ್ನಾಟಕ ಸರ್ಕಾರ ಮತ್ತು ಅಮೆಜಾನ್ ಸಂಸ್ಥೆ ಒಟ್ಟಾಗಿ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಬೇಕಿದೆ ಎಂದರು.
Advertisement
ಕೌಶಲ್ಯಾಭಿವೃದ್ಧಿ ಸಚಿವ ಡಾ: ಅಶ್ವಥ್‌ನಾರಾಯಣ್ ಮಾತನಾಡಿ ಸಂಜೀವಿನಿ ಕಾರ್ಯಕ್ರಮದಡಿ ಮಾಡಿಕೊಂಡಿರುವ ಒಪ್ಪಂದ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಿದೆ ಎಂದರು. ಅಮೆಜಾನ್ ಸಂಸ್ಥೆಯ ಮುಖ್ಯಸ್ಥ ಚೇತನ್ ಕೃಷ್ಣಸ್ವಾಮಿ ಮಾತನಾಡಿ ಸಣ್ಣ ಹಾಗೂ ಮಧ್ಯಮ ಉದ್ಯಮಗಳನ್ನು ಬೆಂಬಲಿಸಲು ಅಮೆಜಾನ್ ಬದ್ಧವಾಗಿದೆ. ರಾಜ್ಯದಲ್ಲಿ ಮಹಿಳೆಯರು ತಯಾರಿಸುವ ವಿಶಿಷ್ಟ ಉತ್ಪನ್ನಗಳಿಗೆ ಅತ್ಯುತ್ತಮ ಮಾರುಕಟ್ಟೆ ಒದಗಿಸಲು ಅಮೆಜಾನ್ ನೆರವು ನೀಡಲಿದೆ ಎಂದರು.
ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಮಂಜುಶ್ರೀಉಪಸ್ಥಿತರಿದ್ದರು.
ಒಂದು ಜಿಲ್ಲೆ – ಒಂದು ಉತ್ಪನ್ನಕಾರ್ಯಕ್ರಮದಡಿ ಸ್ಥಳೀಯ ಪ್ರತಿಭೆ ಮತ್ತು ಉತ್ಪನ್ನಗಳನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯಬೇಕಿದೆ ಚನ್ನಪಟ್ಟಣದ ಗೊಂಬೆಗಳು, ಇಳಕಲ್ ಹಾಗೂ, ಮೊಳಕಾಳೂ¾ರು ಸೀರೆಗಳು ಆಹಾರ ಉತ್ಪನ್ನಗಳಿಗೆ ಪೋ›ತ್ಸಾಹ ನೀಡಿ ಆಧುನಿಕತೆಯ ಸ್ಪರ್ಶವನ್ನು ಒದಗಿಸಲು ಇದು ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.