Advertisement

ಅಭಿವೃದ್ಧಿ ನಿರ್ಲಕ್ಷಿಸಿರುವ ಸರ್ಕಾರ

06:45 AM Jun 16, 2020 | Lakshmi GovindaRaj |

ದೊಡ್ಡಬಳ್ಳಾಪುರ: ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ದಿವ್ಯಾಂಗ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ 22 ಮಂದಿ ದಿವ್ಯಾಂಗರಿಗೆ ಶಾಸಕ  ಟಿ.ವೆಂಕಟರಮಣಯ್ಯ ದ್ವಿಚಕ್ರ ವಾಹನ ವಿತರಿಸಿದರು.

Advertisement

ಬಳಿಕ ಮಾತನಾಡಿ, ದಿವ್ಯಾಂಗರಿಗೆ ತಮ್ಮ ಅನುದಾನದಲ್ಲಿ 2013ರರಿಂದ ವಿವಿಧ ಪರಿಕರ, ದ್ವಿಚಕ್ರವಾಹನ ನೀಡಲಾಗುತ್ತಿದ್ದು, ಈ ಹಿಂದಿದ್ದ ಶಾಸಕರಿಂದ ಈ ರೀತಿ ಸೌಲಭ್ಯಗಳು  ದೊರೆತಿರಲಿಲ್ಲ. ದಿವ್ಯಾಂಗರು ತಮಗಿರುವ ಅವಶ್ಯಕತೆಗಳ ಬಗ್ಗೆ ಅರ್ಜಿ ಸಲ್ಲಿಸಿದರೆ ಜಿಲ್ಲಾಧಿ  ಕಾರಿಗಳ ಗಮನಕ್ಕೆ ತಂದು ಕ್ರಮಕೈಗೊಳ್ಳಲಾಗುವುದು.

ಈ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕಿದೆ. 2013ರಿಂದ ನೀಡಲಾಗಿರುವ  ದ್ವಿಚಕ್ರವಾಹನಗಳು ಮೊದಲಾದ ಪರಿಕರಗಳು ಸದುಪಯೋಗವಾಗುತ್ತಿರುವ ಬಗ್ಗೆ ಅಧಿಕಾರಿ ಗಳು ತನಿಖೆ ನಡೆಸಬೇಕೆಂದು ಸೂಚಿಸಿದರು. ಬಿಜೆಪಿ ಸರ್ಕಾರ ತಾಲೂಕನ್ನು ನಿರ್ಲಕ್ಷಿಸುತ್ತಿದೆ. ಸಾಸಲು ಹೋಬಳಿಯ ಕೊಟ್ಟಿಗೆಮಾಚೇನಹಳ್ಳಿ  ಬಳಿ ಸೇತುವೆ ನಿರ್ಮಿಸಲು 50 ಲಕ್ಷ ರೂ. ಯೋಜನೆ ತಯಾರಿಸಿ ಸಿಎಂ ಗಮನಕ್ಕೆ ತಂದು ಸಚಿವರಿಗೆ ಮನವಿ ಮಾಡಿದ್ದರೂ ಕ್ರಮಕೈಗೊಂಡಿಲ್ಲ.

ತಾಲೂಕಿಗೆ ಮಂಜೂರಾಗಿರುವ 1.5 ಕೋಟಿ ರೂ. ತಡೆ ಹಿಡಿಯಲಾಗಿದೆ ಎಂದು ಆರೋಪಿಸಿದರು. ಜಿಪಂ ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣ್‌, ತಾಪಂ ಅಧ್ಯಕ್ಷ ಡಿ.ಸಿ.ಶಶಿಧರ್‌, ಗ್ರಾಮಾಂತರ ಜಿಲ್ಲಾ ದಿವ್ಯಾಂಗರ ಕಲ್ಯಾಣಾಧಿಕಾರಿ ಎಂ.ನಾಗೇಶ್‌, ಯೋಜನಾ ಸಹಾಯಕ ನಿಖೀಲ್‌ ಎಂ.ಮದಗಟ್ಟಿ , ಕಾಂಗ್ರೆಸ್‌ ತಾಲೂಕು ಬ್ಲಾಕ್‌ ಅಧ್ಯಕ್ಷ  ಬೈರೇಗೌಡ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next