Advertisement
ಕೊಪ್ಪಳ ನಗರದ ಬನ್ನಿಕಟ್ಟಿ ಬಳಿಯ ಬಿಸಿಎಂ ಹಾಸ್ಟೆಲ್‌ನಲ್ಲಿ ವಿದ್ಯುತ್ ಅವಘಡ ಸಂಭವಿಸಿ ಐವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಆಧರಿಸಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಶುಕ್ರವಾರ ಹಿರಿಯ ನ್ಯಾ. ರವಿ ಮಳಿಮಠ ಹಾಗೂ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಆಗ, ಸರ್ಕಾರಿ ಹಾಸ್ಟೆಲ್‌ಗಳಲ್ಲಿನ ಮೂಲಸೌಕರ್ಯಗಳು ಹಾಗೂ ಅಲ್ಲಿನ ಸುರಕ್ಷತಾ ವ್ಯವಸ್ಥೆಯ ಬಗ್ಗೆ ಸಮೀಕ್ಷೆ
ನಡೆಸಬೇಕು. ಇದಕ್ಕಾಗಿ ಜಿಲ್ಲಾ ಮಟ್ಟದ ಸಮಿತಿ ರಚಿಸಬೇಕು ಎಂದು ಅ.30ರಂದು ನೀಡಿದ್ದ ಆದೇಶ ಪಾಲನೆ ಮಾಡದಿರುವುದನ್ನು ಗಮನಿಸಿದ ಪೀಠ, ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿತು. ಆದೇಶ ಪಾಲಿಸದಿರುವುದಕ್ಕೆ “ನ್ಯಾಯಾಂಗ ನಿಂದನೆ ಆರೋಪ’ ಪ್ರಕರಣದಡಿ ಏಕೆ ಕ್ರಮ
ಜರುಗಿಸಬಾರದು ಎಂಬುದರ ಕುರಿತು ವಾರದಲ್ಲಿ ಉತ್ತರಿಸುವಂತೆ ಸರ್ಕಾರಕ್ಕೆ ಸೂಚಿಸಿತು.
ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಹಾಸ್ಟೆಲ್ ಪ್ರವೇಶಮಿತಿ, ವಿದ್ಯಾರ್ಥಿಗಳ ಸಂಖ್ಯೆ ಸೇರಿದಂತೆ ಸಮಗ್ರ ಸಮೀಕ್ಷೆ ನಡೆಸಲು ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲಿ ಸಮಿತಿಗಳನ್ನು ರಚಿಸಲು ಸೂಚಿಸಿತ್ತು. ಅಲ್ಲದೇ, ಹಿಂದುಳಿದ ವರ್ಗಗಳ ಇಲಾಖೆ ಅಧೀನದಲ್ಲಿರುವ 2,438 ಹಾಸ್ಟೆಲ್‌ಗಳ ಪೈಕಿ 1,031
ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿ ಇರುವ ಅಂಶವನ್ನು ಗಮನಿಸಿದ್ದ ನ್ಯಾಯಪೀಠ, ಹಾಸ್ಟೆಲ್ ಮಂಜೂರಾತಿ, ಹಾಗೂ ಅದನ್ನು ನಡೆಸಲು ಬಾಡಿಗೆ ಕಟ್ಟಡ ಪಡೆಯಬೇಕಾದರೆ, ಸೌಲಭ್ಯ ಒದಗಿಸಲು, ಸುರಕ್ಷತೆ ಕ್ರಮಕ್ಕೆ ನಿರ್ದಿಷ್ಠ ಮಾನದಂಡಗಳು ಇವೆಯೇ, ಇದ್ದರೆ ಮಾಹಿತಿ ಸಲ್ಲಿಸಲು
ತಿಳಿಸಿತ್ತು. ಅಂಥ ನಿಯಮಗಳಿಲ್ಲದಿದ್ದರೆ ತಿಂಗಳಲ್ಲಿ ಮಾನದಂಡ ಅಥವಾ ನಿಯಮ ರೂಪಿಸಲು ಕ್ರಮ
ಕೈಗೊಳ್ಳುವಂತೆ ಆದೇಶಿಸಿತ್ತು. ಆದರೆ, ಕೋರ್ಟ್ ಆದೇಶ ಪಾಲಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
Related Articles
ಬೆಂಗಳೂರು: ರಾಜ್ಯದ ಅನುದಾನರಹಿತ ಹಾಗೂ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ 2020-21ನೇ ಸಾಲಿನ 1-10ನೇ ತರಗತಿವರೆಗಿನ ಪಠ್ಯಪುಸ್ತಕಗಳನ್ನು ಖರೀದಿಸಲು ಒಟ್ಟು ಮೊತ್ತದ ಶೇ.25 ಮುಂಗಡವಾಗಿ ಕಡ್ಡಾಯ ಪಾವತಿಸಬೇಕೆಂದು ಸೂಚಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಈ ಕುರಿತಂತೆ ರಾಜ್ಯ ಅಲ್ಪ ಸಂಖ್ಯಾತ
ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಸಿ.ಆರ್. ಮೊಹಮ್ಮದ್ ಇಮ್ತಿಯಾಜ್ ಸಲ್ಲಿಸಿದ್ದ ಅರ್ಜಿಯು ನ್ಯಾ. ಎಸ್. ಸುಜಾತ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಆಯುಕ್ತರು ಹಾಗೂ
ಕರ್ನಾಟಕ ರಾಜ್ಯ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆಗಳನ್ನು ಸಲ್ಲಿಸಲು ನಿರ್ದೇಶನ ನೀಡಿತು. ಅಲ್ಲದೆ, ಸುತ್ತೋಲೆ ಬಗ್ಗೆ ಮುಂದಿನ ವಿಚಾರಣೆ ವೇಳೆ ಮಾಹಿತಿ ನೀಡುವಂತೆ ಸೂಚಿಸಿತು.
Advertisement
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಜಿ.ಆರ್. ಮೋಹನ್, ರಾಜ್ಯದ ಅನುದಾನರಹಿತ ಹಾಗೂಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ 2020-21ನೇ ಸಾಲಿನ 1- 10ನೇ ತರಗತಿವರೆಗಿನ ಪಠ್ಯಪುಸ್ತಕಗಳನ್ನು ಖರೀದಿಸಲು ಒಟ್ಟು ಮೊತ್ತದ ಶೇ.25 ಮುಂಗಡ ಹಣ ಪಾವತಿಸಬೇಕು ಎಂದು ಕರ್ನಾಟಕ ರಾಜ್ಯ ಪಠ್ಯಪುಸ್ತಕ ಸಂಘ 2019ರ ಅ.31ರಂದು ಹೊರಡಿಸಿರುವ ಆದೇಶ ಕಾನೂನು ಬಾಹಿರವಾದುದು ಎಂದರು. ಅದೇ ರೀತಿ ಪುಸಕ್ತಗಳಿಗೆ ಬೇಡಿಕೆ ಸಲ್ಲಿಸುವಾಗಲೇ ಶೇ.10 ಹಣ ಪಾವತಿಸಬೇಕೆಂದು ಸಂಘವು ಎಲ್ಲ ಶಾಲೆಗಳಿಗೂ ಎಸ್‌ಎಂಎಸ್ ಸಂದೇಶ ಕಳುಹಿಸಿದೆ. ಆ ಮೂಲಕ ಪಠ್ಯಪುಸ್ತಕ ಸಂಘವು ಶಾಲೆಗಳ ಮೇಲೆ ಒತ್ತಡ ಹೇರುತ್ತಿದೆ. ಈ ರೀತಿ ಮುಂಗಡ ಹಣ ಪಾವತಿಸಬೇಕಾಗುತ್ತದೆ ಎಂಬ ಬಗ್ಗೆ ಮೊದಲೇ
ಶಾಲೆಗಳ ಜೊತೆ ಚರ್ಚೆ ನಡೆಸಿಲ್ಲ. ಹಾಗಾಗಿ ಸಂಘದ ಕ್ರಮ ನಿಯಮ ಬಾಹಿರ ಎಂದು ಹೇಳಿದ್ದಾರೆ.
ಈವರೆಗೆ ಸರ್ಕಾರ ನಿಗದಿಪಡಿಸಿರುವ ಪಠ್ಯಗಳು ಖಾಸಗಿ ಪುಸ್ತಕ ಮಾರಾಟ ಮಳಿಗೆಗಳಲ್ಲಿ ದೊರಕುತ್ತಿ
ದ್ದವು. ಇದೀಗ ಸಂಘ ಮೊದಲೇ ಬೇಡಿಕೆ ಸಲ್ಲಿಸಿ ಮುಂಗಡ ಹಣ ಪಾವತಿ ಮಾಡದಿದ್ದರೆ ಪುಸಕ್ತಗಳು
ದೊರಕದಂತೆ ಮಾಡುವ ಬೆದರಿಕೆಯೊಡ್ಡುತ್ತಿದೆ. ಮುಂಗಡ ಹಣ ಕೇಳಲು ಸಂಘಟಕಕ್ಕೆ ಅಧಿಕಾರವಿಲ್ಲ.
ಹಾಗಾಗಿ, 2019ರ ಅ.31ರಂದು ಸಂಘವು ಹೊರಡಿಸಿರುವ ಸುತ್ತೋಲೆ ರದ್ದುಗೊಳಿಸಬೇಕು ಎಂದು
ಅರ್ಜಿದಾರರು ಕೋರಿದ್ದಾರೆ.