Advertisement
ರೋಗ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದರು. ಶನಿವಾರ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸಂಜೆಯಿಂದ ಸೋಮವಾರದವರೆಗೆ ಮೂರು ದಿನ ಆಸ್ಪತ್ರೆ ಪ್ರವೇಶ ನಿಷೇಧಿಸಲಾಗಿದೆ. ಈಗಾಗಲೇ ಸೋಂಕಿತರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆ ಸಂಪೂರ್ಣ ಸ್ಯಾನಿಟೈಸ್‌ಗೊಳಿಸಲಾಗಿದೆ. ಕೋವಿಡ್ ಪಾಸಿಟಿವ್ ಕಂಡುಬಂದಿರುವ ಹಿನ್ನೆಲೆಯಲ್ಲಿ ಇದೀಗ ಆಸ್ಪತ್ರೆಗೆ ಭೇಟಿ ನೀಡಿರುವ ರೋಗಿಗಳಲ್ಲಿ ಆತಂಕ ಎದುರಾಗಿದೆ. ಸೋಂಕು ದೃಢ ಪಟ್ಟಿರುವ ವೈದ್ಯರು ಮಕ್ಕಳ ತಜ್ಞರಾಗಿದ್ದು, ಪ್ರತಿನಿತ್ಯ ಹತ್ತಾರು ಮಂದಿ ತಮ್ಮ ಮಕ್ಕಳ ಆರೋಗ್ಯ ಪರೀಕ್ಷೆಗಾಗಿ ಭೇಟಿ ನೀಡುತ್ತಿದ್ದರು. ಕೋವಿಡ್ ಪಾಸಿಟಿವ್ ಇರುವವರು ಆಸ್ಪತ್ರೆಗೆ ಬಂದು ಹೋಗಿರುವುದರಿಂದಲೇ ವೈದ್ಯ, ಸಿಬ್ಬಂದಿಗೆ ಹರಡಿದೆ ಎನ್ನಲಾಗುತ್ತಿದೆ. ಜತೆಗೆ ವೈದ್ಯರು ಪರೀಕ್ಷೆ ಮಾಡಿರುವ ಮಕ್ಕಳಿಗೂ ಸೋಂಕು ತಗುಲುವ ಆತಂಕ ಎದುರಾಗಿದೆ. Advertisement
ಸರ್ಕಾರಿ ಆಸ್ಪತ್ರೆ ಸೀಲ್‌ಡೌನ್!
10:53 AM Jul 19, 2020 | Suhan S |
Advertisement
Udayavani is now on Telegram. Click here to join our channel and stay updated with the latest news.