Advertisement
ಗ್ರಾಮಾಂತರ ಜಿಲ್ಲೆಯಾಗಿ ರೂಪು ಗೊಳ್ಳುವ ಅವಕಾಶ ಇರುವ ಹಿನ್ನೆಲೆಯಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯನ್ನು 100 ಬೆಡ್‌ನಿಂದ 300 ಬೆಡ್‌ಗೆ ಏರಿಸಿ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಶಾಸಕರ ನೇತೃತ್ವದಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಶೀಘ್ರ ಅನುಮೋದನೆಯ ನಿರೀಕ್ಷೆ ಹೊಂದಲಾಗಿದೆ.
ಶಾಸಕರ ಪ್ರಸ್ತಾವನೆಯನ್ನು ಐಪಿಎಚ್‌ಎಸ್ ಮಾರ್ಗಸೂಚಿ ಅನ್ವಯ ಪರಿಶೀಲಿಸಿ ತಗಲುವ ವೆಚ್ಚದ ಮಾಹಿತಿಯನ್ನು ಸಲ್ಲಿಸು ವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಎಂಜಿನಿಯರ್ ಘಟಕಕ್ಕೆ ಮನವಿ ಸಲ್ಲಿಸಿತ್ತು. ಮೈಸೂರು ಕಾರ್ಯ ಪಾಲಕ ಎಂಜಿನಿಯರ್ ವಿಭಾಗವು ಮಲ್ಟಿ ಆಸ್ಪತ್ರೆ ಯನ್ನಾಗಿ ಮೇಲ್ದರ್ಜೆ ಗೇರಿ ಸುವ ಮತ್ತು ಇತರ ಸೌಲಭ್ಯ ಗಳನ್ನು ಒಳ ಗೊಂಡಂತೆ ಆಸ್ಪತ್ರೆ ಕಟ್ಟಡ, ವೈದ್ಯರು, ದಾದಿಯರು, ಗ್ರೂಪ್ ಡಿ ನೌಕರರು, ಸಿಬಂದಿ ವಸತಿ ಗೃಹ ಹಾಗೂ ಇತರ ಮೂಲ ಸೌಲಭ್ಯಗಳನ್ನು ಒದಗಿಸಲು ಕಾಮಗಾರಿ ಸ್ಥಳದ ಮಣ್ಣಿನ ಪರೀಕ್ಷೆ ವರದಿಯಂತೆ ನೀಲ ನಕಾಶೆ ಅಂದಾಜು ಪಟ್ಟಿ ತಯಾರಿಸಿ 189 ಕೋ.ರೂ. ಮೊತ್ತದ ರೇಖಾ ಪಟ್ಟಿ ಯನ್ನು ಅನು ಮೋದನೆಗಾಗಿ ಸರಕಾರಕ್ಕೆ ಸಲ್ಲಿಸಲಾಗಿದೆ. ಸೋರುತ್ತಿದೆ ಕಟ್ಟಡ
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ 1962ರಲ್ಲಿ ಹೆಂಚಿನ ಛಾವಣಿಯ ಕಟ್ಟಡ ನಿರ್ಮಿಸಿದ್ದು, ಮಳೆಗಾಲದಲ್ಲಿ ಸೋರುತ್ತಿರುವ ಕಾರಣ ರೋಗಿಗಳಿಗೆ, ವೈದ್ಯರಿಗೆ, ಸಿಬಂದಿಗೆ ತೊಂದರೆ ಉಂಟಾ ಗುತ್ತಿದೆ. ವೈದ್ಯರು ಹಾಗೂ ಸಿಬಂದಿಯ ವಸತಿಗೃಹ ಕೂಡ ಶಿಥಿಲಾವಸ್ಥೆಯಲ್ಲಿದೆ. ಹಾಗಾಗಿ ಈಗ ಇರುವ ಆಸ್ಪತ್ರೆ ಕಟ್ಟಡ, ರಕ್ತನಿಧಿ ಬ್ಲಾಕ್, ಶವಾಗಾರ, ವಸತಿಗೃಹ, ಹಳೆಯ ಕಟ್ಟಡಗಳನ್ನು ಕೆಡವಿ ಹೊಸದಾಗಿ 300 ಹಾಸಿಗೆಗಳ ಕಟ್ಟಡ ನಿರ್ಮಿಸುವುದು ತುರ್ತು ಅಗತ್ಯವೂ ಆಗಿದೆ.
Related Articles
Advertisement
ಸ್ಪಂದನೆಯ ಭರವಸೆಪುತ್ತೂರು ಗ್ರಾಮಾಂತರ ಜಿಲ್ಲೆಯಾಗಲು ಇರುವ ಅವಕಾಶ, ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಆಗಬೇಕು ಎಂಬ ಹಿನ್ನೆಲೆಯಲ್ಲಿ 100 ಬೆಡ್‌ನಿಂದ 300 ಬೆಡ್‌ಗೆ ಏರಿಸಬೇಕು ಎಂದು 189 ಕೋ.ರೂ.ಯೋಜನೆಯ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಆರೋಗ್ಯ ಸಚಿವರು ಸ್ಪಂದಿಸುವ ನಿರೀಕ್ಷೆ ಇದೆ.
-ಸಂಜೀವ ಮಠಂದೂರು, ಶಾಸಕರು ಗರಿಷ್ಠ ಮಂದಿ ಭೇಟಿ
ನಾಲ್ಕು ತಾಲೂಕುಗಳಿಗೆ ಕೇಂದ್ರ ಸ್ಥಾನದಲ್ಲಿರುವ ಪುತ್ತೂರು ಸರಕಾರಿ ಆಸ್ಪತ್ರೆ ಪ್ರಸ್ತುತ 100 ಬೆಡ್ ಸಾಮರ್ಥ್ಯ ಹೊಂದಿದೆ. ದಿನಂಪ್ರತಿ 400ರಿಂದ 500ಕ್ಕೂ ಮಿಕ್ಕಿ ಹೊರ ರೋಗಿಗಳು, 60ರಿಂದ 70ರಷ್ಟು ಒಳ ರೋಗಿಗಳು ದಾಖಲಾಗುತ್ತಿದ್ದಾರೆ. ದಿನಂಪ್ರತಿ 15ರಿಂದ 20 ಸಿಜೇರಿಯನ್ ಹೆರಿಗೆ, 70ರಿಂದ 80 ಸಹಜ ಹೆರಿಗೆ ಸೇರಿ ಹತ್ತಾರು ವಿಭಾಗಗಳಲ್ಲಿ ಸೇವೆ ನೀಡುತ್ತಿದೆ. ಸರಕಾರ ಮತ್ತು ದಾನಿಗಳ ನೆರವಿನಿಂದ 5 ಡಯಾಲಿಸಿಸ್ ಯಂತ್ರಗಳಿದ್ದು, ದಿನದಲ್ಲಿ 25 ಮಂದಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ.