Advertisement

ಪಿಪಿಎಫ್ ಬಡ್ಡಿ ದರ ಏರಿಕೆ

06:00 AM Sep 21, 2018 | Team Udayavani |

ಹೊಸದಿಲ್ಲಿ: ಹಲವು ವರ್ಷಗಳ ನಂತರ ಈಗ ವಿವಿಧ ಸಣ್ಣ ಉಳಿತಾಯ ಸ್ಕೀಮ್‌ಗಳ ಬಡ್ಡಿ ದರವನ್ನು ಏರಿಕೆ ಮಾಡಲಾಗಿದೆ. ಎನ್‌ಎಸ್‌ಸಿ ಹಾಗೂ ಪಿಪಿಎಫ್ ಸೇರಿದಂತೆ ಹಲವು ಸಣ್ಣ ಉಳಿತಾಯ ಸ್ಕೀಮ್‌ಗಳ ಮೇಲಿನ ಬಡ್ಡಿ ಅಕ್ಟೋಬರ್‌-ಡಿಸೆಂಬರ್‌ ತ್ತೈಮಾಸಿಕದಲ್ಲಿ ಏರಿಕೆಯಾಗಲಿದೆ. ಇತ್ತೀಚೆಗೆ ಆರ್‌ಬಿಐ ರೆಪೋ ದರ ಏರಿಕೆ ಮಾಡಿದ್ದಕ್ಕೆ ಅನುಗುಣವಾಗಿ ಈ ಬೆಳವಣಿಗೆಯಾಗಿದೆ. ಹಿರಿಯ ನಾಗರಿಕರು ಮತ್ತು ಹೆಣ್ಣುಮಕ್ಕಳ ಕಲ್ಯಾಣಕ್ಕಾಗಿ ಹೂಡಿಕೆಯನ್ನು ಉತ್ತೇಜಿಸಲು ಈ ನಿರ್ಧಾರ ಮಾಡಲಾಗಿದೆ. ಸಣ್ಣ ಉಳಿತಾಯ ಸ್ಕೀಮ್‌ಗಳ ಬಡ್ಡಿ ದರಗಳನ್ನು ಪ್ರತಿ ತ್ತೈಮಾಸಿಕಕ್ಕೆ ನಿಗದಿಸಲಾಗುತ್ತದೆ.

Advertisement

ಈ ಬಗ್ಗೆ ಟ್ವೀಟ್‌ ಮಾಡಿದ ವಿತ್ತ ಸಚಿವ ಅರುಣ್‌ ಜೇಟ್ಲಿ, ಸಣ್ಣ ಉಳಿತಾಯಗಾರರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಸಣ್ಣ ಉಳಿತಾಯ ಸ್ಕೀಮ್‌ಗಳ ಮೇಲಿನ ಬಡ್ಡಿಯನ್ನು ಶೇ. 0.3 ರಿಂದ ಶೇ. 0.4ರ ವರೆಗೆ ಏರಿಕೆ ಮಾಡಲಾಗಿದೆ ಎಂದಿದ್ದಾರೆ. ಕಳೆದ 2012ರಿಂದಲೂ ಬಹುತೇಕ ಎಲ್ಲ ಸಣ್ಣ ಉಳಿತಾಯ ಸ್ಕೀಮ್‌ಗಳ ದರವೂ ಇಳಿಕೆ ಗತಿಯಲ್ಲಿತ್ತು. 2012ರಲ್ಲಿ ಪಿಪಿಎಫ್ ಬಡ್ಡಿ ದರ ಶೇ.8.8 ರಷ್ಟಿತ್ತು. ಆಗಿನಿಂದಲೂ ಇಳಿಯುತ್ತಿದ್ದ ಬಡ್ಡಿ ದರ ಸದ್ಯ ಶೇ.8ರಷ್ಟಾಗಿದೆ.


 

Advertisement

Udayavani is now on Telegram. Click here to join our channel and stay updated with the latest news.

Next