Advertisement
ಕಲ್ಪವೃಕ್ಷ ಬೆಳೆಗಾರರ ಸಂಘದ ವತಿಯಿಂದ ಬೋಳಿಯಾರ್‌ನಲ್ಲಿ ಕೇಂದ್ರ ಸರಕಾರದ ತೆಂಗು ಕೃಷಿ ಮಂಡಳಿಯ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯದಿಂದ ಉಚಿತವಾಗಿ ರೈತರಿಗೆ ಕೊಡಮಾಡುವ ರಸಗೊಬ್ಬರ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಕಲ್ಪವೃಕ್ಷ ಬೆಳೆಗಾರರ ಸಂಘ ಆರಂಭಿಸುವ ಮೂಲಕ ಗ್ರಾಮದ ಕೃಷಿಕರಿಗೆ ಸರಕಾರಿ ಸವಲತ್ತು ದೊರಕುವಂತೆ ಮಾಡಲಾಗುತ್ತಿದ್ದು, ಈ ಬಾರಿ 6.50 ಲಕ್ಷ ರೂ. ಮೌಲ್ಯದ ರಸಗೊಬ್ಬರ ವಿತರಿಸಲಾಗುತ್ತಿದೆ ಎಂದರು.
ಫಲಾನುಭವಿಗಳಿಗೆ ರಸಗೊಬ್ಬರ ವಿತರಿಸಿದ ಬೋಳಿಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಆಚಾರ್ಯ ಮಾತನಾಡಿ, ಎಲ್ಲೆಡೆ ರೈತರು ಸಂಕಷ್ಟದಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಆತ್ಮಹತ್ಯೆ ಪ್ರಕರಣವೂ ನಡೆಯುತ್ತಿದೆ. ಬೋಳಿಯಾರ್ ಗ್ರಾಮದಲ್ಲೂ ಸಾಕಷ್ಟು ರೈತರಿದ್ದು, ಮಾಹಿತಿ ಕೊರತೆಯಿಂದ ಹಿಂದುಳಿದಿದ್ದರು. ಇದೀಗ ಪ್ರಶಾಂತ ಗಟ್ಟಿ ಅವರ ನೇತೃತ್ವದಲ್ಲಿ ಸಂಘದ ಮುಖಾಂತರ ಸರಕಾರಿ ಸವಲತ್ತು ಪಡೆಯುವಂತಾಗಿದೆ ಎಂದರು. ಪ್ರಗತಿಪರ ಕೃಷಿಕ ಜಯರಾಮ ಸಾಂತ ಬೋಳಿಯಾರುಗುತ್ತು ಮಾತನಾಡಿ, ಕೆಲವು ವರ್ಷಗಳಿಂದ ಗ್ರಾಮದ ರೈತರು ವಿವಿಧ ಸಮಸ್ಯೆಯಿಂದಾಗಿ ತೆಂಗು ಬೆಳೆಯಿಂದ ಬೇಸರಗೊಂಡಿದ್ದರು. ಆದರೆ ಸಂಘ ಸ್ಥಾಪನೆ ಬಳಿಕ ರೈತರಲ್ಲಿ ಹೊಸ ಉತ್ಸಾಹ ಮೂಡಿದ್ದು, ರೈತರಲ್ಲಿ ಜಾಗೃತಿ ಮೂಡಿಸಿ ಸವಲತ್ತು ಒದಗಿಸುವಲ್ಲಿ ಸಂಘ ಯಶಸ್ವಿಯಾಗಿದೆ ಎಂದರು. ಗ್ರಾಮ ಪಂಚಾಯತ್ ಸದಸ್ಯ ರೋಹಿನಾಥ್, ಕೃಷಿಕರಾದ ಜೋಕಿಂ ಲೂವೀಸ್ ಧರ್ಮತೋಟ, ಚಂದ್ರಹಾಸ ಅಡಪ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 65 ರೈತರಿಗೆ ರಸಗೊಬ್ಬರ ವಿತರಿಸಲಾಯಿತು
Related Articles
ಸಂಘ ಸ್ಥಾಪನೆ ಬಳಿಕ ಎರಡನೇ ಕಾರ್ಯಕ್ರಮ ಇದಾಗಿದೆ. ಪ್ರತೀ ಗ್ರಾಮದಲ್ಲೂ ಸಂಘ ಸ್ಥಾಪನೆಯಾಬೇಕು. 13 ಸಂಘಗಳು ಸಿಕ್ಕರೆ ಒಂದು ಫೆಡರೇಶನ್ ರೂಪುಗೊಳಿಸಬಹುದಾಗಿದ್ದು, ತೆಂಗು ಬೋರ್ಡ್ ಕಂಪನಿ ಎನ್ನುವ ಮಾನ್ಯತೆ ಸಿಕ್ಕಿ ತೆಂಗು ಬೆಳೆಗಾರರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಪ್ರಶಾಂತ್ ಗಟ್ಟಿ ಹೇಳಿದರು.
Advertisement