ಕಲಬುರಗಿ: ವೃಂದ ಹಾಗೂ ನೇಮಕಾತಿ ನಿಯಮಗಳ ಅಂತಿಮ ಅಧಿಸೂಚನೆ ಜಾರಿ ಮತ್ತು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ಕಳೆದ ನಾಲ್ಕು ದಿನಗಳಿಂದ ಪಶು ವೈದ್ಯರು ಹಾಗೂ ಪಶು ವೈದ್ಯಕೀಯ ಇಲಾಖೆ ನೌಕರರು ನಡೆಯುತ್ತಿದ್ದ ಅನಿರ್ಧಿಷ್ಟ ಸತ್ಯಾಗ್ರಹ ಸರಕಾರ ನೀಡಿದ ಭರವಸೆ ಹಿನ್ನೆಲೆಯಲ್ಲಿ ಶನಿವಾರ ಕೊನೆಗೊಂಡಿದೆ.
ಆದರೆ, ಸರಕಾರ ಮಾತು ಕೊಟ್ಟಿರುವಂತೆ ಜೂ.4ರೊಳಗಾಗಿ ಅಧಿಸೂಚನೆ ಹೊರಡಿಸದೇ ಇದ್ದರೆ 5ರಿಂದ ಬೆಂಗಳೂರಿನ μÅàಡ್‌ಂ ಪಾರ್ಕ್ ನಲ್ಲಿ ರಾಜ್ಯದ ಎಲ್ಲ ಸಿಬ್ಬಂದಿ ಪುನಃ ಅನಿರ್ಧಿಷ್ಟ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ನಾಲ್ಕು ದಿನಗಳಿಂದ ನಡೆಯುತ್ತಿದ್ದ ಧರಣಿಗೆ ಮಣಿದು ಮಾತುಕತೆಗೆ ಆಹ್ವಾನಿಸಿದ್ದ ಸರಕಾರ ಕೂಡಲೇ ನೇಮಕಾತಿ ಕುರಿತು ಅಧಿಸೂಚನೆ ಹೊರಡಿಸುವ ಭರವಸೆ ನೀಡಿದೆ. ಈ ನಿಟ್ಟಿನಲ್ಲಿ ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಕತ್ರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಧರಣಿ ಕೈಬಿಡಲಾಗಿದೆ.
ನಗರದ ಪಶು ಸಂಗೋಪನಾ ಇಲಾಖೆ ಕಚೇರಿ ಎದುರು ನಿತ್ಯ 200-250 ಜನ ಸಿಬ್ಬಂದಿ ಧರಣಿಯಲ್ಲಿ ಭಾಗವಹಿಸುತ್ತಿದ್ದರು. ಧರಣಿಯಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜು ಲೇಂಗಟಿ, ರೈತ ಕೃಷಿ ಕಾರ್ಮಿಕ ಸಂಘಟನೆಯ ಭೀಮಾಶಂಕರ ಪಾಣೆಗಾಂವ, ವಿಶ್ವನಾಥ ಭೀಮಳ್ಳಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ
-ಪಶು ವೈದ್ಯರು ಹಾಗೂ ಪಶು ವೈದ್ಯಕೀಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ನಿಜಲಿಂಗಪ್ಪ ಕೊರಳ್ಳಿ, ಉಪಾಧ್ಯಕ್ಷೆ ಸುಜಾತಾ ಗೌತಮ್ ಕಾಂಬಳೆ, ಕಾರ್ಯಾಧ್ಯಕ್ಷ ಅಬ್ದುಲ್ ರಜಾಕ್, ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಮಹಾಗಾಂವ, ಶಂಕರ ದೊಡ್ಡಮನಿ, ಸಂಗಮನಾಥ, ಬಸಲಿಂಗಪ್ಪ ಜಮಾದಾರ, ಅಂಜುಬಾಯಿ ಜಾಲವಾದಿ, ಮಲ್ಲಿನಾಥ, ನೀಲಪ್ಪ ಚಿಂಚೂರೆ ಭಾಗವಹಿಸಿದ್ದರು.