Advertisement

ಕೋವಿಡ್‌ ನಿರ್ವಹಣೆಯಲ್ಲಿ ಸರ್ಕಾರ ವಿಫ‌ಲ

11:58 AM Jul 20, 2021 | Team Udayavani |

ದೇವನಹಳ್ಳಿ: ಕೋವಿಡ್‌ನಿಂದ ರಾಜ್ಯದಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದಾ ‌ರೆ. ಆದರೆ, ಸರ್ಕಾರ ಅಂಕಿ ಅಂಶಗಳಲ್ಲಿ ಸರಿ ಮಾಹಿತಿ ನೀಡದೆ ವಿಫ‌ಲವಾಗಿದೆ. ಆರೋಗ್ಯ ಸಚಿವರು ಸರಿಯಾದ ರೀತಿ ಕೋವಿಡ್‌ ವಿಚಾರದಲ್ಲಿ ನಿರ್ವಹಣೆ ಮಾಡುತ್ತಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ನಾರಾಯಣ ಸ್ವಾಮಿ ಆರೋಪಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವತಿಯಿಂದ ನಡೆದಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಸಹಾಯಹಸ್ತಕಾರ್ಯಕ್ರಮದಲ್ಲಿ ಮಾತನಾಡಿ, ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫ‌ಲಗೊಂಡಿದೆ. ಕೊರೊನಾದಿಂದ ಸಾವನ್ನಪ್ಪಿರುವ ಅಂಕಿ-ಅಂಶಗಳನ್ನುಮರೆಮಾಚಿದ್ದು,ಸಾವನ್ನಪ್ಪಿರುವ ಕುಟುಂಬಗಳಿಗೆ ಸಹಾಯಧನ ನೀಡಲು ವಿಫ‌ಲಗೊಂಡಿದೆ. ಸಹಾಯ ಹಸ್ತಕಾರ್ಯಕ್ರಮದಲ್ಲಿ ಕೋವಿಡ್‌ನಿಂದ ಸಾವಪ್ಪಿನ್ನಪಿರುವ ಜನರ ಕುಟುಂಬಕ್ಕೆ ಭೇಟಿ ನೀಡಿ, ಅವರ ಕುಂದುಕೊರತೆ ಮತ್ತು ಸಮಸ್ಯೆ ಆಲಿಸಬೇಕು. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಅಭ್ಯರ್ಥಿ ಗೆಲುವಿಗೆ ಗಮನಹರಿಸಿ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್‌ ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ನಮ್ಮ ಪಕ್ಷದ ಶಾಸಕರನ್ನು ಗೆಲ್ಲಿಸಬೇಕು. ಕಾಂಗ್ರೆಸ್‌ ಪಕ್ಷ ತಳಮಟ್ಟದಿಂದ ಗಟ್ಟಿಯಾಗಿದ್ದು,ಕ್ಷೇತ್ರದಲ್ಲಿ ಜೆಡಿಎಸ್‌ಪಕ್ಷ ನಮ್ಮ ಎದುರಾಳಿಯಾಗಿದೆ. ಪ್ರತಿ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷವನ್ನುಬಲಗೊಳಿಸುವ ನಿಟ್ಟಿನಲ್ಲಿ ಹಾಗೂ ಜಿಪಂ, ತಾಪಂಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನುಗೆಲ್ಲಿಸಿಕೊಳ್ಳುವುದರ ಬಗ್ಗೆ ಹೆಚ್ಚು ಗಮನಹರಿಸಬೇಕಾಗುತ್ತದೆ ಎಂದು ಹೇಳಿದರು.

ಶಾಸಕರು ಅಭಿವೃದ್ಧಿ ಮಾಡಿಲ್ಲ: ಶಾಸಕ ಕೆ. ವೆಂಕಟಸ್ವಾಮಿ ಮಾತನಾಡಿ, ಈಗಾಗಲೇ ಪೂರ್ವಭಾವಿ ಸಭೆಯಲ್ಲಿ ಸಾದಹಳ್ಳಿ ಜಿಪಂ ಸಹಾಯ ಹಸ್ತ ಕಾರ್ಯಕ್ರಮದಲ್ಲಿಯೂ ಸಹ ಕೋವಿಡ್‌ಅಂಕಿ- ಅಂಶ ಕೇಳಲಾಗಿತ್ತು. ಅದರಲ್ಲೂ ಸರ್ಕಾರ ಮರೆಮಾಚಿರುವುದು ಕಂಡುಬಂದಿದೆ. ಕ್ಷೇತ್ರದಜೆಡಿಎಸ್‌ ಶಾಸಕರುಯಾವುದೇಅಭಿವೃದ್ಧಿಮಾಡಿಲ್ಲ. ಶಾಸಕರಾಗಿ ತಾಲೂಕಿನಲ್ಲಿ ಕೋವಿಡ್‌ ನಿರ್ವಹಣೆಯಲ್ಲಿ ಅವರ ಪಾತ್ರ ಶೂನ್ಯವಾಗಿದೆ ಎಂದರು.

ಮಾಜಿ ಲೋಕಸಭಾ ಸದಸ್ಯ ಸಿ. ನಾರಾಯಣ ಸ್ವಾಮಿ, ಮಾಜಿ ಶಾಸಕ ಮುನಿನರಸಿಂಹಯ್ಯ,ಮುಖಂಡರಾದ ಸಿ.ಜಗನ್ನಾಥ್‌, ಚೇತನ್‌ ಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿ.ಪ್ರಸನ್ನ ಕುಮಾರ್‌, ಉಪಾಧ್ಯಕ್ಷ ವಿ.ಶಾಂತಕುಮಾರ್‌, ಪ್ರಧಾನ ಕಾರ್ಯದರ್ಶಿ ಎಸ್‌.ಪಿ.ಮುನಿರಾಜ್‌, ಹೋಬಳಿ ಅಧ್ಯಕ್ಷರಾದ ಕೋದಂಡರಾಮ್‌, ರಾಮಚಂದ್ರಪ್ಪ, ರಂಗಪ್ಪ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷಮುನಿಶಾಮಣ್ಣ, ಶಿವಣ್ಣ, ಕೃಷ್ಣರೆಡ್ಡಿ, ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ರೇವತಿ, ಜಿಪಂ ಮಾಜಿಸದಸ್ಯರಾದ ಅನಂತಕುಮಾರಿ ಚಿನ್ನಪ್ಪ,ಕೆ.ಸಿ.ಮಂಜುನಾಥ್‌, ರಾಧಮ್ಮ ಮುನಿರಾಜು, ಜಿಲ್ಲಾ ಎಸ್‌ಸಿ ಘಟಕದ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್‌, ಲಕ್ಷ್ಮಣ್‌ಗೌಡ, ಲಕ್ಷ್ಮಣ್‌ ಮೂರ್ತಿ, ಡಿ.ಎನ್‌.ವೆಂಕಟೇಶ್‌, ಅಕ್ಕಯ್ಯಮ್ಮ, ಮಂಜುಳಾ, ಲಕ್ಷ್ಮೀ, ನಗರ ಕಾರ್ಯದರ್ಶಿ ಮಂಜು, ಯುವ ಮುಖಂಡರಾದ ಕೆ.ವಿ.ಸ್ವಾಮಿ, ಬಿ.ವಿ.ಸ್ವಾಮಿ, ಮುನಿಕೃಷ್ಣ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next