Advertisement

“ಬರಗಾಲ ನಿಭಾಯಿಸಲು ಸರಕಾರ ವಿಫ‌ಲ’

02:13 AM May 10, 2019 | Team Udayavani |

ಉಡುಪಿ: ರಾಜ್ಯ ದಲ್ಲಿ ಸೃಷ್ಟಿಯಾಗಿರುವ ಭೀಕರ ಬರಗಾಲವನ್ನು ನಿಭಾಯಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫ‌ಲವಾಗಿದೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ
ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

Advertisement

ಬರ ಪರಿಹಾರಕ್ಕೆ ಕ್ರಮ ಕೈಗೊಳ್ಳು ವಂತೆ ಹೈಕೋರ್ಟ್‌ ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ. ಆದರೂ ಸರಕಾರ ನಿರ್ಲಕ್ಷ್ಯ ತೋರುತ್ತಿದೆ. ಇಂತಹ ಕೆಟ್ಟ ಸರಕಾರವನ್ನು ಈ ಹಿಂದೆ ನೋಡಿರ ಲಿಲ್ಲ. ರಾಜ್ಯದ ಜನತೆ ಕಂಗೆಟ್ಟಿದ್ದಾರೆ. ಉಡುಪಿ ಸೇರಿದಂತೆ ರಾಜ್ಯದಲ್ಲಿ ಜಿಲ್ಲಾ ಡಳಿತಗಳು ಸ್ಥಗಿತವಾಗಿವೆ ಎಂದರು.

ಆಯೋಗ ಅಡ್ಡಿಯಲ್ಲ
ಬರನಿರ್ವಹಣೆ, ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಚುನಾ ವಣ ಆಯೋಗ ಅನುಮತಿ ನೀಡಿದೆ. ವಿವಿಧ ನಿಗಮ, ಮಂಡಳಿ, ಸಮಿತಿ ಹಾಗೂ ಸ್ಥಳೀಯ ಸಂಸ್ಥೆಗಳು ಸಭೆಗಳನ್ನು ನಡೆಸುವುದಕ್ಕೂ ಒಪ್ಪಿಗೆ ನೀಡಿದೆ. ಆದರೆ ಕುಡಿಯುವ ನೀರು, ಮಳೆಗಾಲ ಮುನ್ನೆಚ್ಚರಿಕೆ ಕ್ರಮ ಮೊದಲಾದ ಉದ್ದೇಶಗಳಿಗೂ ಗ್ರಾ.ಪಂ.ಗಳಲ್ಲಿ ಸಭೆ ನಡೆಸಲು ಸರಕಾರ ಕ್ರಮ ಕೈಗೊಂಡಿಲ್ಲ ಎಂದು ಪೂಜಾರಿ ಆರೋಪಿಸಿದರು.

ಅಧಿಕಾರವಿಲ್ಲದ 8 ತಿಂಗಳುಗಳು
ಅಧ್ಯಕ್ಷ ಸ್ಥಾನ ಜೆಡಿಎಸ್‌/ಕಾಂಗ್ರೆಸ್‌ಗೆ ಸಿಗಬೇಕೆಂಬ ಉದ್ದೇಶದಿಂದ ಮೀಸಲಾತಿ ಪಟ್ಟಿಯನ್ನು ಬದಲಾಯಿಸಿ ನ್ಯಾಯಾಲಯಕ್ಕೆ ಅಫಿದವಿತ್‌ ಸಲ್ಲಿಸಿದ ಪರಿಣಾಮ ಉಡುಪಿ ನಗರಸಭೆ ಸೇರಿದಂತೆ ರಾಜ್ಯದ ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆದು 8 ತಿಂಗಳಾದರೂ ಜನರಿಂದ ಆಯ್ಕೆಯಾದ ಪ್ರತಿನಿಧಿಗಳಿಗೆ ಅಧಿಕಾರ ಸಿಕ್ಕಿಲ್ಲ. ಇದರಿಂದಾಗಿ ಆಡಳಿತ ಸಮರ್ಪಕವಾಗಿ ನಡೆಯದೆ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ ಎಂದು ಶ್ರೀನಿವಾಸ ಪೂಜಾರಿ ದೂರಿದರು.

ಪಂಚಕರ್ಮ, ಪಂಚತಂತ್ರದ ಜತೆಗೆ…
“ನೀವು ಆರೋಗ್ಯ ಸುಧಾರಣೆಗೆ ಪಂಚಕರ್ಮ ಚಿಕಿತ್ಸೆ ಮಾಡಿ. ಸರಕಾರ ಉಳಿಸಲು ಪಂಚತಂತ್ರಗಳನ್ನು ಮಾಡಿ. ಆದರೆ ಅದರೊಂದಿಗೆ ಬರ ನಿರ್ವಹಣೆಗೆ ಸಮರೋಪಾದಿ ಕೆಲಸ ಕೂಡ ಮಾಡಿ’ ಎಂದು ಮುಖ್ಯಮಂತ್ರಿಯವರಿಗೆ ಶ್ರೀನಿವಾಸ ಪೂಜಾರಿ ಅವರು ಸಲಹೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next