ಅರಸೀಕೆರೆ: ದೇಶದ ಜನರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಗಳು ಅನಿವಾರ್ಯವಾಗಿ ಕೆಲವು ಕಠಿಣ ಕ್ರಮಗಳನ್ನು ಕೈಗೊಂಡು ಕೊರೊನಾ ನಿಯಂತ್ರಿಸಲು ಲಸಿಕೆ ಆಂದೋಲನ ಯಶಸ್ವಿಗೊಳಿಸ ಬೇಕಿತ್ತು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೊರೊನಾ ಸೋಂಕು ನಿಯಂತ್ರಿಸಲು ಕೇಂದ್ರ ಸರ್ಕಾರ ಕೊ ವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎಂಬ ಎರಡು ಕಂಪನಿಗಳ ಲಸಿಕೆಯನ್ನು ದೇಶದ ನಾಗರೀಕರಿಗೆ ಉಚಿತವಾಗಿ ನೀಡಲು ಕಳೆದ 5 ತಿಂಗಳ ಹಿಂದೆ ಚಾಲನೆ ನೀಡಲಾಗಿತ್ತು. ಆದರೆ ಮೊದಲನೇ ಕೊರೊನಾ ಸೋಂಕಿನಿಂದ ಭಯಭೀತರಾಗಿದ್ದ ದೇಶದ ಜನತೆ ದೇಶಿಯ ಲಸಿಕೆಗಳಿಂದ ಅಡ್ಡ ಪರಿಣಾಮ ಉಂಟಾಗುತ್ತವೆ ಎಂಬ ಊಹಾಪೋಹದ ಸುದ್ದಿಗೆ ಅಂಜಿ ಬಹುತೇಕ ಮಂದಿ ಲಸಿಕೆ ಹಾಕಿಸಿಕೊಳ್ಳಲು ಹೆಚ್ಚಿನ ಆಸಕ್ತಿ ವಹಿಸದ ಪರಿಣಾಮ ಸರ್ಕಾರದ ಲಸಿಕಾ ಆಂದೋಲನ ಯಶಸ್ವಿ ಯಾಗಲು ಸಾಧ್ಯವಾಗಲಿಲ್ಲ. ಬದಲಾಗಿ ನಮ್ಮ ದೇಶಿಯ ಕಂಪನಿಗಳ ಲಸಿಕೆ ವಿದೇಶಗಳಿಗೆ ಮಾರಾಟವಾಗಿದ್ದರಿಂದ ಇಂದು ನಮ್ಮ ದೇಶದ ಜನರಿಗೆ ಅವಶ್ಯಕವಾದ ಲಸಿಕೆ ಸಕಾಲದಲ್ಲಿ ಲಭ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಜನ ತತ್ತರಿಸುತ್ತಿದ್ದಾರೆ:ಸರ್ಕಾರ ಕೊರೊನಾ ಲಸಿಕೆ ಬಿಡುಗಡೆ ಆದ ಸಂದರ್ಭದಲ್ಲಿ ಈ ಮಾರ ಣಾಂತಿಕ ಸೋಂಕನ್ನು ಹೋಗಲಾಡಿಸಲು ಕಡ್ಡಾಯವಾಗಿ ಪ್ರತಿ ಯೊಬ್ಬರೂ ಲಸಿಕೆ ತೆಗೆದುಕೊಳ್ಳಬೇಕು ಎಂಬ ನಿಯಮವನ್ನು ಮಾಡ ಬೇಕಿತ್ತು. ಆದರೆ ಆ ರೀತಿ ಯಾವ ಕಠಿಣ ನಿಯಮಗಳನ್ನೂ ಸರ್ಕಾರ ಮಾಡದ ಕಾರಣ ಕೆಲವರು ಲಸಿಕೆ ಪಡೆದರೆ ಇನ್ನೂ ಅನೇಕರು ಲಸಿಕೆ ಪಡೆಯದೆ ಇದ್ದರಿಂದ ಲಸಿಕೆ ಅಭಿಯಾನ ಪೂರ್ಣವಾಗಿಲ್ಲ. ಈಗ ಜನ ಲಸಿಕೆ ಹಾಕಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ. ಆದರೆ, ಸರ್ಕಾರದ ಬಳಿ ಅಗತ್ಯವಿರುವಷ್ಟು ಲಸಿಕೆ ಇಲ್ಲದೆ ಪ್ರಾಣ ಭಯದಿಂದ ತತ್ತರಿಸುತ್ತಿದ್ದಾರೆ ಎಂದು ದೂರಿದರು. ತಾಲೂಕಿನಲ್ಲಿ 4800 ಮಂದಿ ಕೊ ವ್ಯಾಕ್ಸಿನ್ ಲಸಿಕೆ ತೆಗೆದುಕೊಂಡಿ ದ್ದಾರೆ.
ಅವರಿಗೆ 40ದಿನಗಳ ನಂತರ 2ನೇ ಲಸಿಕೆ ನೀಡಬೇಕಾಯಿತು. ಈ ಪೈಕಿ 300ಮಂದಿ 2ನೇ ಡೋಸ್ ಲಸಿಕೆ ತೆಗೆದುಕೊಂಡಿದ್ದು ಇನ್ನುಳಿದ 4500 ಮಂದಿಗೆ ಲಸಿಕೆ ಸಿಗದೆ ಪ್ರತಿ ನಿತ್ಯ ಆಸ್ಪತ್ರೆಗೆ ಅಲೆದು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಇದನ್ನು ತಯಾರಿಸಿದ ಇಂಡಿಯನ್ ಬಯೋಟೆಕ್ ಕಂಪನಿ ಲಸಿಕೆಯನ್ನು ಹೊರದೇಶಕ್ಕೆ ಮಾರಾಟ ಮಾಡಿದೆ. 18ವರ್ಷದ ಮೇಲ್ಪಟ್ಟವರಿಗೂ ಲಸಿಕೆ ನೀಡುವುದಾಗಿ ಹೇಳಿದ ಸರ್ಕಾರ ಅದನ್ನು ಹಿಂಪಡೆದಿದೆ. 60 ವರ್ಷದವರಿಗೆ ಲಸಿಕೆ ನೀಡಿ ಈಗ 2ನೇ ಡೋಸ್ ನೀಡದೆ ಆತಂಕಕ್ಕೆ ದೂಡಿರುವ ಕೇಂದ್ರ ಸರ್ಕಾರ ಲಸಿಕೆ ನೀಡಲು ಹಣವಿಲ್ಲದಿದ್ದರೆ ಸಾರ್ವಜನಿಕರಿಗೆ ತಾವೇ ಹಣ ನೀಡಿ ಲಸಿಕೆ ಪಡೆಯುವಂತೆ ತಿಳಿಸಬೇಕಿತ್ತು. ಕೊವ್ಯಾಕ್ಸಿನ್ 2ನೇ ಡೋಸ್‌ನಲ್ಲಿ 4500 ಜನರಿಗೆ ನೀಡಬೇಕಾದ ಲಸಿಕೆ ಯನ್ನು ತಕ್ಷಣ ನೀಡಿ ಮರ್ಯಾದೆ ಉಳಿಸಿಕೊಳ್ಳಲಿ ಮೂರನೇ ಅಲೆ ಪ್ರಾರಂಭವಾಗುವುದಕ್ಕೆ ಮುನ್ನ ಎಲ್ಲರಿಗೂ ಲಸಿಕೆ ನೀಡಬೇಕು. ಇಲ್ಲ ದಿದ್ದರೆ ಈ ಸರ್ಕಾರದ ವಿರುದ್ಧ ಜನತೆ ಪ್ರತಿಭಟನೆಗೆ ಮುಂದಾಗು ತ್ತಾರೆಂದು ತಿಳಿಸಿದರು.