Advertisement
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಕಾಲದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳದೇದೇಶದ ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ.
Related Articles
Advertisement
ಮೋದಿಯಿಂದ ಏನನ್ನು ನಿರೀಕ್ಷಿಸಲು ಸಾಧ್ಯ: ದೇಶದ ಜನತೆಗೆ 30 ಸಾವಿರ ಕೋಟಿ ರೂ.ವ್ಯಯಿಸಿ ಲಸಿಕೆ ನೀಡುವ ಕಾರ್ಯಕ್ರಮವನ್ನುಜಾರಿಗೊಳಿಸಲಾಗದ ಮೋದಿ ಅವರಿಂದದೇಶದ ಜನತೆ ಏನನ್ನೂ ತಾನೇ ನಿರೀಕ್ಷಿಸಲು ಸಾಧ್ಯ?. ರಾಜ್ಯದಲ್ಲಿ ಪ್ರತಿದಿನ ಕೋವಿಡ್‌ಪ್ರಕರಣಗಳು ವೃದ್ದಿಯಾಗುತ್ತಿರುವುದು ರಾಜ್ಯ ಸರ್ಕಾರದ ವೈಫಲ್ಯಕ್ಕೆ ಉತ್ತಮ ಉದಾಹರಣೆಯಾಗಿದ್ದು, ಈ ಸಂಬಂಧ ಕೇಂದ್ರದ ಮೇಲೆಒತ್ತಡ ತಂದು ಸಾಂದರ್ಭಿಕ ವೈದ್ಯಕೀಯ ಪರಿಕರಗಳನ್ನು ಒದಗಿಸುವಲ್ಲಿ ರಾಜ್ಯದ ಸಂಸದರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
3ನೇ ಅಲೆ ಮೆಟ್ಟಿ ನಿಲ್ಲಲು ಸೂಕ್ತ ಮಾರ್ಗಬೇಕು: 2ನೇ ಅಲೆಗೆ ರಾಜ್ಯದ ಜನತೆ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಮೂರನೇ ಅಲೆ ಆರಂಭವಾದರೆ, ಯಾವ ವಿಷಮ ಪರಿಸ್ಥಿತಿ ಉಂಟಾಗಲಿದೆ ಎಂಬುದನ್ನು ರಾಜ್ಯ ಸರ್ಕಾರ ಹಾಗೂ ಅಧಿಕಾರಿ ವರ್ಗ ಅರಿತುಕೊಳ Ûಬೇಕು. ಮುಂದಿನ ಸವಾಲುಗಳನ್ನು ಮೆಟ್ಟಿನಿಲ್ಲಲು ಸೂಕ್ತ ಮಾರ್ಗೋಪಾಯ ಕಂಡುಕೊಂಡು, ಆಕ್ಸಿಜನ್ ಉತ್ಪಾದನೆ, ತೀವ್ರ ನಿಗಾ ಘಟಕ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಬೇಕು. ಸಿಎಂತುರ್ತು ಅಗತ್ಯತೆಗೆ ಹಣ ವ್ಯಯಿಸಬೇಕು ಎಂದರು.
ಮಾಜಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ, ಯುವ ಮುಖಂಡ ಗಣಿಗ ರವಿಕುಮಾರ್, ಪಕ್ಷದ ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ್, ಎಸ್.ಡಿ.ಜಯರಾಂ, ರುದ್ರಪ್ಪ, ಸಿ.ಎಂ.ದ್ಯಾವಪ್ಪ ಇತರರಿದ್ದರು.
ಆಡಳಿತ ವ್ಯವಸ್ಥೆಕ್ರಿಯಾಶೀಲವಾಗಿಲ್ಲ :
ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಕ್ರಿಯಾಶೀಲತೆ ಕಂಡು ಬರುತ್ತಿಲ್ಲ. ಸಿಎಂಗಿಂತ ಸಂಪುಟದ ಸಚಿವರುಗಳು ಕ್ರಿಯಾಶೀಲತೆಯಿಂದ ಏಕಧ್ವನಿಯಲ್ಲಿ ಕೆಲಸ ಮಾಡಲು ಮುಂದಾಗುತ್ತಿಲ್ಲ. ಸಚಿವರುಗಳ ನಿರ್ಲಿಪ್ತತೆ ಎದ್ದು ಕಾಣುತ್ತಿದೆ ಎಂದು ಎನ್.ಚಲುವರಾಯಸ್ವಾಮಿ ದೂರಿದರು. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮಧ್ಯೆ ಪ್ರವೇಶಿಸಿ ಸರ್ಕಾರಗಳಿಗೆ ನಿರ್ದೇಶನ ನೀಡಿದರೂ, ವಸ್ತುಸ್ಥಿತಿಯನ್ನು ಸರಿದಾರಿಗೆ ತರುವಲ್ಲಿ ಆಡಳಿತ ವ್ಯವಸ್ಥೆ
ವಿಫಲವಾಗಿದೆ. ಕೇಂದ್ರ ಸಚಿವ ಸದಾನಂದಗೌಡ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅವರ ಸಿ.ಟಿ.ರವಿ ಕುಹುಕದ ಮಾತುಗಳು ಸರಿಯಲ್ಲ. ರಾಜ್ಯದ ಮುಖ್ಯಕಾರ್ಯದರ್ಶಿಗಳು ಅಸಹಾಯಕತೆ ವ್ಯಕ್ತಪಡಿಸುವ ಬದಲು ರಾಜ್ಯಾಂಗದತ್ತ ಅಧಿಕಾರವನ್ನು ಬಳಸಿಕೊಂಡು ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಮಾರ್ಗಸೂಚಿ ಹಾಗೂ ಪರಿಹಾರಕಂಡುಹಿಡಿಯಲು ಮುಂದಾಗಬೇಕು ಎಂದು ಒತ್ತಾಯಿಸಿದರು.