Advertisement

ಪೌರ ಕಾರ್ಮಿಕರಿಗೆ ದೊರೆಯಲಿ ಸರ್ಕಾರಿ ಸೌಲಭ್ಯ: ಶಿವಣ್ಣ

01:46 PM Sep 19, 2021 | Team Udayavani |

ಚಿತ್ರದುರ್ಗ: ಪೌರಕಾರ್ಮಿಕರನ್ನು ಮಾನವೀಯತೆಯಿಂದ ಕಾಣಬೇಕು ಮತ್ತು ಅವರಿಗೆಸರ್ಕಾರದ ಸೌಲಭ್ಯ ಒದಗಿಸಬೇಕು ಎಂದುಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷಎಂ. ಶಿವಣ್ಣ ಕೋಟೆ ಹೇಳಿದರು.ಜಿಪಂ ಸಂಭಾಗಣದಲ್ಲಿ ಶನಿವಾರ ನಡೆದ ಮ್ಯಾನ್ಯುಯಲ್‌ ಸ್ಕಾÂವೆಂಜಿಂಗ್‌ ನಿಷೇಧ ಹಾಗೂ ಪರಿಹಾರ ಕಾಯ್ದೆ ನಿಯಮಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಗ್ರಾಮ ಪಂಚಾಯಿತಿ,ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂನಗರಸಭೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವಪೌರಕಾರ್ಮಿಕರ ಸಮಸ್ಯೆಗಳನ್ನು ಅಧಿ ಕಾರಿಗಳುಎಷ್ಟರ ಮಟ್ಟಿಗೆ ನಿವಾರಣೆ ಮಾಡಿದ್ದಾರೆಎನ್ನುವುದನ್ನು ಅರಿಯಲು ಈ ಕಾರ್ಯಾಗಾರಆಯೋಜಿಸಲಾಗಿದೆ ಎಂದರು. ದೇಶದಲ್ಲಿ ಮ್ಯಾನ್ಯುಯಲ್‌ ಸ್ಕಾÂವೆಂಜಿಂಗ್‌ ಪದ್ದತಿಯನ್ನುಸಂಪೂರ್ಣವಾಗಿ ನಿರ್ಮೂಲನೆಗೊಳಿಸಿಅತ್ಯಾಧುನಿಕ ಯಂತ್ರಗಳನ್ನು ಬಳಸಲು 15ಖಾಸಗಿ ಕಂಪನಿಗಳು ಹೊಸ ಅವಿಷ್ಕಾರಗಳನ್ನುಅಭಿವೃದ್ಧಿಪಡಿಸಿವೆ.

ಪೌರಕಾರ್ಮಿಕರಿಗೆನಮಗಾಗಿಯೇ ಒಂದು ಆಯೋಗವಿದೆಎಂದು ಭಾವನೆ ಬರಬೇಕು, ಅವರ ಮಕ್ಕಳುವಿದ್ಯಾವಂತರಾಗಬೇಕು ವಂಶಪಾರಂಪರ್ಯದಿಂದಬಂದಿರುವ ಕೆಲಸವನ್ನು ಬಿಟ್ಟು ಮಕ್ಕಳನ್ನುಓದಿಸಿ ವಿದ್ಯಾವಂತರಾಗಿ ಮಾಡಬೇಕು.ಪೌರಕಾರ್ಮಿಕರ ಮಕ್ಕಳಿಗಾಗಿ ಕೌಶಲ್ಯಾಭಿವೃದ್ಧಿಮತ್ತು ಬೇರೆ ಬೇರೆ ಉದ್ಯೋಗದಲ್ಲಿಅವಕಾಶ ಮತ್ತು ನೇರ ಸಾಲ ನೀಡುವಂತಹನೀಡಲಾಗುವು¨ದು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಚಿತ್ರದುರ್ಗ ಜಿಲ್ಲೆಯಲ್ಲಿಪೌರಕಾರ್ಮಿಕರಿಗೆ ಯಾವುದೇ ಸೌಲಭ್ಯದೊರತ್ತಿಲ್ಲ. ಇಲ್ಲಿಯೂ ಸಹ ಅವರಿಗೆ ಬೇಕಾದಅವಶ್ಯಕತೆಗಳನ್ನು ಪೂರೈಸಬೇಕೆಂದರು. ಆಯೋಗದ ಕಾರ್ಯದರ್ಶಿ ಆರ್‌. ರಮಾಮಾತನಾಡಿ, ಪೌರಕಾರ್ಮಿಕರಿಗೆ ಸಂಬಂಸಿದಂತೆ 2013 ರ ಕಲಂ ಬಂದರೂ ಕೂಡರಾಜ್ಯದಲ್ಲಿ ಸುಮಾರು 78 ಪ್ರಕರಣಗಳು ದಾಖಲಾಗಿವೆ. ಜೊತೆಗೆ ಈ ವರ್ಷದಲ್ಲಿಯೇ 21 ಪ್ರಕರಣಗಳು ದಾಖಲಾಗಿವೆ, ಕಾರಣಈ ಕಲಂ ಅ ಧಿಕಾರಿಗಳಿಗೆ ಸರಿಯಾಗಿ ಅರ್ಥವಾಗಿಲ್ಲ.

ಅದಕ್ಕಾಗಿ ಮ್ಯಾನ್ಯುಯಲ್‌ ಸ್ಕಾÂವೆಂಜರ್‌ಗಳ ನೇಮಕಾತಿ ಮತ್ತು ನಿಷೇಧಮತ್ತು ಅವರ ಪುನರ್ವಸತಿ ಅ ಧಿನಿಯಮ2013ರ ಕಾಯ್ದೆ ಹಾಗೂ ನಿಯಮಗಳಪುಸ್ತಕವನ್ನು ನೀಡಲಾಗುತ್ತಿದೆ ಎಂದರು. ಎಡಿಸಿಈ. ಬಾಲಕೃಷ್ಣ, ಜಿಪಂ ಉಪಕಾರ್ಯದರ್ಶಿರಂಗಸ್ವಾಮಿ, ನಗರಾಭಿವೃದ್ಧಿ ಕೋಶದಯೋಜನಾ ನಿರ್ದೇಶಕ ಸತೀಶ್‌ ರೆಡ್ಡಿ, ಸಮಾಜಕಲ್ಯಾಣಾ ಧಿಕಾರಿ ಪಿ. ಮಮತಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next