Advertisement

ಆದರ್ಶ ವಿವಾಹಕ್ಕೆ ಸರಕಾರದ ಪ್ರೋತ್ಸಾಹ

03:20 PM Mar 05, 2018 | Harsha Rao |

ಪುಂಜಾಲಕಟ್ಟೆ: ಇಲ್ಲಿನ ಸ್ವಸ್ತಿಕ್‌ ಫ್ರೆಂಡ್ಸ್‌ ಕ್ಲಬ್‌ನ 34ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಬಂಗ್ಲೆ ಮೈದಾನದಲ್ಲಿ ರವಿವಾರ ಜರಗಿದ 10ನೇ ವರ್ಷದ ಉಚಿತ ಸಾಮೂಹಿಕ ವಿವಾಹದಲ್ಲಿ 21 ಜೋಡಿಗಳು ಗೃಹಸ್ಥಾಶ್ರಮಕ್ಕೆ ಕಾಲಿರಿಸಿದವು. ಕೃಷ್ಣ ಭಟ್‌ ಪೌರೋಹಿತ್ಯ ವಹಿಸಿದ್ದರು.

Advertisement

ಆ ಬಳಿಕ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದ.ಕ.ಜಿ.ಪಂ.ಸಿಇಒ ಡಾ|ಎಂ.ಆರ್‌.ರವಿ ಅವರು ಉದ್ಘಾಟಿಸಿ ಮಾತನಾಡಿ, ಸಾಮೂಹಿಕ ವಿವಾಹಗಳಿಂದ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗುತ್ತದೆ, ಸರಕಾರವೂ ಸರಳ ಮದುವೆ, ಆದರ್ಶ ವಿವಾಹ, ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದರು.

ಪ್ರಗತಿಪರ ಕೃಷಿಕ ರಾಜೇಶ್‌ ನಾೖಕ್‌ ಉಳಿಪಾಡಿಗುತ್ತು ಮುಖ್ಯ ಅತಿಥಿಯಾಗಿದ್ದರು. ರಾಜ್ಯ ಬಿಜೆಪಿ ವಕ್ತಾರೆ ಸುಲೋಚನಾ ಜಿ.ಕೆ. ಭಟ್‌,ಉದ್ಯಮಿಗಳಾದ ಸುರೇಶ್‌ ಶೆಟ್ಟಿ ಮಿಜಾರು,ಜಿತೇಂದ್ರ ಕೊಟ್ಟಾರಿ, ಪ್ರವೀಣ್‌ ಕುಮಾರ್‌ ಬಂಗೇರ, ನಿತ್ಯಾನಂದ ಪೂಜಾರಿ ಕೆಂತಲೆ, ಸುಂದರ್‌ ರಾಜ್‌ ಹೆಗ್ಡೆ, ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ, ಜಗನ್ನಾಥ ಶೆಟ್ಟಿ ಕೆದ್ದಳಿಕೆ, ಓಂ ಪ್ರಸಾದ್‌ ಬಿ.ಸಿ.ರೋಡ್‌,ಮುರಳಿ ಶೆಟ್ಟಿ ಮುಂಬಯಿ,ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ಲೋಕೇಶ್‌ ಆಚಾರ್ಯ,ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.

ಕ್ಲಬ್‌ನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಪ್ರಸ್ತಾವಿಸಿದರು.ಅಧ್ಯಕ್ಷ ಪ್ರಶಾಂತ್‌ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ.,ಪದಾಧಿಕಾರಿಗಳಾದ ಮಾಧವ ಬಂಗೇರ, ಜಯರಾಜ ಅತ್ತಾಜೆ,ರಾಜೇಶ್‌ ಪಿ.ಬಂಗೇರ, ಅಬ್ದುಲ್‌ ಹಮೀದ್‌ ಮತ್ತಿತರರು ಉಪಸ್ಥಿತರಿದ್ದರು.

ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ
ಈ ಸಂದರ್ಭದಲ್ಲಿ ಡಾ|ಎಂ.ಜೆ.ಪ್ರವೀಣ್‌ ಭಟ್‌ (ಧಾರ್ಮಿಕ),ಡಾ| ಸುರೇಂದ್ರನಾಥ ನಾಯಕ್‌(ವೈದ್ಯಕೀಯ),ವಿಶ್ವೇಶ್ವರ ಭಟ್‌ ಸುಣ್ಣಂಬಳ(ಯಕ್ಷಗಾನ ಕ್ಷೇತ್ರ),ವಸಂತ್‌ ಶೆಟ್ಟಿ (ಉದ್ಯಮ), ನಿತಿನ್‌ ಪೂಜಾರಿ (ಕ್ರೀಡೆ) ಅವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಹಾಗೂ ಹರೀಂದ್ರ ಪೈ (ಉದ್ಯಮ), ಮೌನೇಶ್‌ ವಿಶ್ವಕರ್ಮ(ಪತ್ರಿಕೋದ್ಯಮ), ನಾರಾಯಣ ನಾಯಕ್‌ ಕಪೆì (ಸಮಾಜ ಸೇವೆ),ಎಂ.ಕ್ರಿಶ್‌ ಕುಮಾರ್‌ (ಕಲೆ),ರಮ್ಯಶ್ರೀ ಜೈನ್‌ (ಕ್ರೀಡೆ), ಶಬನಾ ಬಾನು (ಶಿಕ್ಷಣ) ಪ್ರದೀಪ್‌ ನಾಯಕ್‌(ಸಮಾಜ ಸೇವೆ) ಅವರಿಗೆ ಸ್ವಸ್ತಿಕ್‌ ಸಂಭ್ರಮ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕ್ಲಬ್‌ನ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ.ಸ್ವಾಗತಿಸಿದರು. ಶಿಕ್ಷಕ ರಾಮಚಂದ್ರ ರಾವ್‌ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next