Advertisement

Thirthahalli ಶಿಕ್ಷಣ ಸಚಿವರ ಜಿಲ್ಲೆಯಲ್ಲಿ ಪಾಠ ಮಾಡುವ ಶಿಕ್ಷಕರೇ ಲಂಚ ಕೇಳಿದ್ರಾ?

08:57 PM Aug 29, 2023 | Shreeram Nayak |

ತೀರ್ಥಹಳ್ಳಿ : ಮಕ್ಕಳಿಗೆ ಗುರುವೇ ದೇವರು ಎನ್ನುತ್ತಾರೆ ಆದರೆ ಅಂತಹ ಗುರುಗಳೇ ಮಕ್ಕಳ ಬಳಿ ಲಂಚವನ್ನು ಕೇಳಿದರೆ ಹೇಗೆ? ವಿದ್ಯಾರ್ಥಿಯೊಬ್ಬನ ದೃಡೀಕರಣ ಪತ್ರಕ್ಕೆ ಸಹಿ ಹಾಕಲು ಲಂಚವನ್ನು ಕೇಳಿದ್ದಾರೆ ಎಂದು ವಿದ್ಯಾರ್ಥಿ ಪೋಷಕರು ಆರೋಪಿಸಿರುವ ಘಟನೆ ತೀರ್ಥಹಳ್ಳಿಯಲ್ಲಿ ನೆಡೆದಿದೆ.

Advertisement

ತಾಲೂಕಿನ ಯು ಆರ್ ಅನಂತಮೂರ್ತಿ ಪ್ರೌಢಶಾಲೆಯಲ್ಲಿ ಉಪಪ್ರಾಂಶುಪಾಲರು ಅನೀಶ್ ಎಂಬ ವಿದ್ಯಾರ್ಥಿಯೊಬ್ಬನ ಬಳಿ ಅಂಕ ಪ್ರತಿಗಳ ದೃಡೀಕರಣಕ್ಕಾಗಿ ಸಹಿ ಮಾಡಲು ಕೇಳಿದಾಗ 500 ರೂ ಗಳನ್ನು ಕೊಡಬೇಕು ಎಂದು ತಿಳಿಸಿದ್ದಾರೆ. ಆಗ ವಿದ್ಯಾರ್ಥಿ ನಮ್ಮ ಬಳಿ ಅಷ್ಟೊಂದು ಹಣವಿಲ್ಲ ಎಂದು 100 ರೂ ಕೊಡಲು ಹೋದಾಗ ಸಹಿ ಮಾಡಲಾಗುವುದಿಲ್ಲ ಹಣವಿಲ್ಲದಿದ್ದರೆ ಬರಬೇಡ ಎಂದು ದರ್ಪದಿಂದ ಹೇಳಿದರು ಎಂದು ಆರೋಪಿಸಿದ್ದಾರೆ.

ಸಹಿಯ ಅಗತ್ಯತೆ ಇದ್ದ ವಿದ್ಯಾರ್ಥಿ 350 ರೂ ನೀಡಿದ್ದಾನೆ. ಹಾಗೂ ಅದೇ ದಿನ ಇನ್ನಿಬ್ಬರ ಬಳಿಯೂ ಹಣವನ್ನು ಕೇಳುತ್ತಿದ್ದರು. ಹೆಸರಾಂತ ಶಾಲೆಗೆ ಕಳಂಕ ತರುವ ಕೆಲಸವನ್ನು ಉಪಪ್ರಾಂಶುಪಾಲರು ಮಾಡುತ್ತಿದ್ದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶಿಕ್ಷಣಾಧಿಕಾರಿಗಳಿಗೆ ಪೋಷಕರು ದೂರು ನೀಡಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿದ ಶಿಕ್ಷಣಾಧಿಕಾರಿಗಳು ಇಬ್ಬರ ಬಳಿಯೂ ಮಾತನಾಡಿದ್ದೇವೆ. ಇಬ್ಬರ ಬಳಿಯೂ ಲಿಖಿತ ಹೇಳಿಕೆ ಪಡೆದಿದ್ದೇವೆ. ಎಸ್ ಡಿಎಂಸಿ ಅನುಮತಿ ಇಲ್ಲದೆ ಉಪ ಪ್ರಾಂಶುಪಾಲರು ಶಾಲೆಯ ಪೀಠೋಪಕರಣ ಮಾರಿದ್ದಾರೆ ಎಂಬ ದೂರು ಕೂಡ ಇದೆ. ವಿದ್ಯಾರ್ಥಿ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತೀರುವುದರಿಂದ ಅವರ ಬಳಿ ದೂರವಾಣಿ ಮೂಲಕ ಮಾತನಾಡಿದ್ದೇವೆ. ಹಣ ನೀಡಿರುವುದು ಸತ್ಯ ಎಂದು ತಿಳಿಸಿದ್ದಾರೆ. ಆರೋಪ ಸಾಭೀತಾದರೆ ವಿಚಾರಣೆ ನಂತರದಲ್ಲಿ ಇಲಾಖೆ ತೀರ್ಮಾನ ಕೈಗೊಳ್ಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next