Advertisement

ಖಾದ್ಯತೈಲ: ತೂಕ ನಮೂದಿಸಲು ಸಲಹೆ 

11:36 PM Aug 25, 2022 | Team Udayavani |

ಹೊಸದಿಲ್ಲಿ: ಖಾದ್ಯ ತೈಲಗಳ ಪೊಟ್ಟಣಗಳ ಮೇಲೆ ಅವುಗಳ ಸರಿಯಾದ ಪರಿಣಾಮ (ಲೀಟರ್‌,ಮಿ.ಲೀ.) ವನ್ನು ಎಷ್ಟು ಉಷ್ಣತೆಯಲ್ಲಿ ಎಂದು ಸೂಚಿಸದೆ ಅವುಗಳ ತೂಕವನ್ನು ನಿಖರವಾಗಿ ಮುದ್ರಿಸುವಂತೆ ಖಾದ್ಯ ತೈಲಗಳ ಉತ್ಪಾದಕರು, ಪ್ಯಾಕರ್‌ಗಳು ಮತ್ತು ಆಮದುಗಾರರಿಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸೂಚಿಸಿದೆ.

Advertisement

2023ರ ಜನವರಿ 15ರ ಒಳಗೆ ಇದನ್ನು ಕಡ್ಡಾಯವಾಗಿ ಪಾಲಿಸುವಂತೆ ಹೇಳಿದೆ.  ಪ್ರಸ್ತುತ ಖಾದ್ಯ ತೈಲಗಳನ್ನು ಮಿಲಿಲೀಟರ್‌, ಲೀಟರ್‌ ಇತ್ಯಾದಿ ಅಳತೆ ಗಳಲ್ಲಿ ಪೊಟ್ಟಣ ಮಾಡಲಾಗುತ್ತಿದ್ದು,ಅದು ಎಷ್ಟು ಉಷ್ಣತೆಯಲ್ಲಿ ಎಂಬ ವಿವರ ನೀಡಲಾಗುತ್ತಿದೆ. ಆದರೆ ಉಷ್ಣತೆಯನ್ನು ಆಧರಿಸಿ ಅವುಗಳ ತೂಕದಲ್ಲಿ ಹೆಚ್ಚು -ಕಡಿಮೆ ಆಗುತ್ತದೆ. ಉದಾಹರಣೆಗೆ ಸೋಯಾಬೀನ್‌ ಎಣ್ಣೆಯ ತೂಕ ಬೇರೆ ಬೇರೆ ಉಷ್ಣತೆಗಳಲ್ಲಿ ಭಿನ್ನವಾಗಿರುತ್ತದೆ. ಇದು ಗ್ರಾಹಕರಿಗೆ ಅನನುಕೂಲ ಉಂಟು ಮಾಡಬಹುದು. ಹೀಗಾಗಿ ತೂಕ ನಮೂದಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next