Advertisement

ದೇಶ ಪ್ರಗತಿ ಕಂಡಿದೆ, ಅರ್ಥ ವ್ಯವಸ್ಥೆ ತಳಪಾಯ ಭದ್ರ: ಅರುಣ್ ಜೇಟ್ಲಿ

05:41 PM Oct 24, 2017 | Sharanya Alva |

ನವದೆಹಲಿ: ನಮ್ಮ ಅರ್ಥ ವ್ಯವಸ್ಥೆಯ ತಳಹದಿ ಭದ್ರವಾಗಿದೆ. ಈ ವರ್ಷ ಹಣದುಬ್ಬರ ಪ್ರಮಾಣ ಶೇ.4ಕ್ಕಿಂತ ಹೆಚ್ಚು ಏರದು. ಭವಿಷ್ಯದಲ್ಲಿ ಅಭಿವೃದ್ಧಿ ದರದಲ್ಲಿ ಏರಿಕೆ ನಿರೀಕ್ಷಿಸಲಾಗಿದೆ. ಐಎಂಎಫ್ ಪ್ರಕಾರ ಶೇ.8ರಷ್ಟು ಅಭಿವೃದ್ಧಿ ದರ ನಿರೀಕ್ಷೆ ಇದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ವಿಶ್ವಾಸವ್ಯಕ್ತಪಡಿಸಿದರು.

Advertisement

ಮಂಗಳವಾರ ಜಿಎಸ್ ಟಿ ಹಾಗೂ ಆರ್ಥಿಕ ಬೆಳವಣಿಗೆ ಕುರಿತು  ಸಚಿವ ಜೇಟ್ಲಿ ಅವರು ವಿತ್ತ ಸಚಿವಾಲಯದ ಕಾರ್ಯದರ್ಶಿ ಸುಭಾಷ್ ಗಾರ್ಗ್ ಮೂಲಕ ಪವರ್ ಪಾಯಿಂಟ್ ಪ್ರಸೆಂಟೇಶನ್ ನಲ್ಲಿ ವಿವರಣೆ ನೀಡಿದರು.

ಭಾರತ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆ ಹೊಂದಿದೆ. ದೇಶದಲ್ಲಿ ದೊಡ್ಡ ಬದಲಾವಣೆಗೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ.  ಅರ್ಥ ವ್ಯವಸ್ಥೆ ಬಗ್ಗೆ ಸರ್ಕಾರ ಸಮೀಕ್ಷೆ ನಡೆಸಿದೆ. ಆರ್ಥಿಕ ಸವಾಲು ಎದುರಿಸಲು ಸರ್ಕಾರ ಸಿದ್ಧವಾಗಿದೆ ಎಂದು ವಿವರಿಸಿದರು.

 ಕಳೆದ 3 ವರ್ಷಗಳಲ್ಲಿ ದೇಶ ಸಾಕಷ್ಟು ಪ್ರಗತಿ ಕಂಡಿದೆ. ಆರ್ಥಿಕ ಸವಾಲು ಎದುರಿಸಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next