Advertisement
ಬಡ ವರ್ಗದ ಬಾಣಂತಿಯರಿಗಾಗಿ ನೀಡಲಾಗುತ್ತಿದ್ದ ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದ ಮಡಿಲು ಕಿಟ್ ಯೋಜನೆಯನ್ನು ರದ್ಧುಗೊಳಿಸಲಾಗಿದೆ. ನಾಲ್ಕು ವರ್ಷಗಳಲ್ಲಿ ಸಂಘ ಪರಿವಾರ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೊಲೆ, ಹಲ್ಲೆಗಳು ನಿರಂತರವಾಗಿ ನಡೆಯುತ್ತಿದೆ. 175 ಕೋ.ರೂ. ಖರ್ಚು ಮಾಡಿ ನಡೆಸಲಾದ ಜಾತಿ ಸಮೀಕ್ಷೆ ವರದಿಯನ್ನು ತಡೆಹಿಡಿಯಲಾಗಿದೆ. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಸುಸೂತ್ರವಾಗಿ ನಡೆಯುತ್ತಿದ್ದ ಪಡಿತರ ವಿತರಣಾ ವ್ಯವಸ್ಥೆ ಇನ್ನಿಲ್ಲದ ಗೊಂದಲದಲ್ಲಿ ಮುಳುಗಿದೆ. ಬಡವರಿಗೆ ಹಕ್ಕು ಪತ್ರ ನೀಡುವ ಕಾರ್ಯಕ್ರಮ ಬಹುತೇಕ ಸ್ಥಗಿತಗೊಂಡಿದೆ. ನಮೂನೆ 50 ಮತ್ತು 53ರಡಿಯಲ್ಲಿ ಅಕ್ರಮ ಸಕ್ರಮಕ್ಕಾಗಿ ಸಲ್ಲಿಸಿದ ಅರ್ಜಿಗಳ ವಿಲೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಕಂದಾಯ ಮೀಸಲು ಸ್ಥಳದಲ್ಲಿ ವಾಸಿಸಿಕೊಂಡಿರುವ ಬಡವರಿಗೆ ಹಕ್ಕು ಪತ್ರ ನೀಡುವ ಬಗ್ಗೆ ಯಾವುದೇ ಕ್ರಮವಹಿಸಿಲ್ಲ. ಶಾಲೆಗಳು ಆರಂಭಗೊಂಡು 2 ತಿಂಗಳಾಗುತ್ತಾ ಬಂದರೂ ಇನ್ನೂ ಪಠ್ಯ ಪುಸ್ತಕಗಳು ಬಂದಿಲ್ಲ. ಮರಳು ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಸಿಆರ್‌ಝಡ್ ಮಿತಿ ಸಡಿಲಗೊಳಿಸುವ ಬಗ್ಗೆ ಕೇಂದ್ರ ಸರಕಾರ ಸಮ್ಮತಿಸಿದ್ದರೂ, ರಾಜ್ಯ ಸರಕಾರ ಈ ಬಗ್ಗೆ ಕಾರ್ಯ ಪ್ರವೃತ್ತವಾಗಿಲ್ಲ. ಹೀಗೆ ಕಾಂಗ್ರೆಸ್ ಸರಕಾರದ ಅನೇಕ ತಪ್ಪು$ನಡೆೆಯಿಂದಾಗಿ ಯಾವುದೇ ಸಂದರ್ಭ ಸರಕಾರ ಪತನಗೊಳ್ಳಬಹುದು ಎಂದು ಜಿಲ್ಲಾ ವಕ್ತಾರ ಕಟಪಾಡಿ ಶಂಕರ ಪೂಜಾರಿ ತಿಳಿಸಿದ್ದಾರೆ. Advertisement
ತಪ್ಪು ನಿರ್ಧಾರದಿಂದ ಸರಕಾರದ ಪತನ: ಬಿಜೆಪಿ
05:25 AM Jul 20, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.