Advertisement
ವಿದ್ಯುತ್ ಸಬ್ಸಿಡಿ ಹೊರೆ ತಗ್ಗಿಸುವ ಸಂಬಂಧ ಯಾವೆಲ್ಲ ಕ್ರಮ ಕೈಗೊಳ್ಳಬಹುದು ಎಂಬ ಕುರಿತು ಮತ್ತು ಅದರ ಸಾಧಕ-ಬಾಧಕಗಳ ಬಗ್ಗೆ ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
Related Articles
ಮೊದಲ ಹೆಜ್ಜೆಯಾಗಿ ಪ್ರತೀ ವರ್ಷ 10 ಸಾವಿರ ಸೋಲಾರ್ ಕೃಷಿ ಪಂಪ್‌ಸೆಟ್ ಅಳವಡಿಕೆಗೆ ನಿರ್ಧ ರಿಸಿದೆ. ಪ್ರಸ್ತುತ ರಾಜ್ಯದಲ್ಲಿ 34 ಲಕ್ಷ ವಿದ್ಯುತ್ ಚಾಲಿತ ಕೃಷಿ ಪಂಪ್‌ಸೆಟ್‌ಗಳಿದ್ದು, 8 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಇವುಗಳನ್ನು ವಿಲೇವಾರಿ ಮಾಡಿದರೆ ವಿದ್ಯುತ್ ಸಬ್ಸಿಡಿ ಮೊತ್ತ ಇನ್ನೂ ಹೆಚ್ಚಲಿದೆ. ಹೀಗಾಗಿ ಹೊಸದಾಗಿ ಪಂಪ್‌ಸೆಟ್ ಬಯಸುವವರಿಗೆ ಏಳು ಎಚ್‌ಪಿಗಳ ವರೆಗೆ ಸೋಲಾರ್ ಪಂಪ್‌ಸೆಟ್ ಅಳವಡಿಕೆಗೆ ಉತ್ತೇಜನ ನೀಡಲು ಇಂಧನ ಇಲಾಖೆ ಕಾರ್ಯಕ್ರಮ ರೂಪಿ ಸಿದೆ. ಸಾಮಾನ್ಯ ವರ್ಗದ ರೈತರಿಂದ 1.50 ಲಕ್ಷ ರೂ. ಎಸ್‌ಸಿ-ಎಸ್‌ಟಿ ವರ್ಗದ
Advertisement
ರೈತರಿಂದ 80 ಸಾವಿರರೂ. ಪಡೆದು ಉಳಿದ 3.50 ಲಕ್ಷ ರೂ.ಗಳನ್ನು ಸರಕಾರ ಭರಿಸಿ ಸೋಲಾರ್ ಪಂಪ್‌ಸೆಟ್ ಅಳವಡಿಸ ಲಾಗುತ್ತಿದೆ. ಮುಂದಿನ ಪ್ರತಿಕ್ರಿಯೆ ನೋಡಿಕೊಂಡು ವಾರ್ಷಿಕ ಸೋಲಾರ್ ಪಂಪ್‌ಸೆಟ್ ಅಳವಡಿಕೆ ಸಂಖ್ಯೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾರ್ಷಿಕ 15 ಸಾವಿರ ಕೋಟಿ ರೂ. ವಿದ್ಯುತ್ ಸಬ್ಸಿಡಿ ಹೊರೆಯಾಗಿದೆ ನಿಜ. ಹಾಗೆಂದು ರೈತರಿಗೆ ನಾವು ಸಹಾಯ ಮಾಡಲೇಬೇಕಿದೆ. ಹೀಗಾಗಿ ಹೊಸ ಮಾರ್ಗೋಪಾಯ ಹುಡುಕಿ ಹೊರೆ ಕಡಿಮೆ ಮಾಡಿ ಕೊಳ್ಳಲು ನಿರ್ಧರಿಸಲಾಗಿದೆ. ಅದರಲ್ಲಿ ಸೋಲಾರ್ ಪಂಪ್‌ಸೆಟ್ ಅಳವಡಿಕೆಯೂ ಒಂದು.
-ವಿ. ಸುನಿಲ್ ಕುಮಾರ್, ಇಂಧನ ಸಚಿವ - ಎಸ್. ಲಕ್ಷ್ಮೀನಾರಾಯಣ