Advertisement

ಮರುವಸತಿ ಕಲ್ಪಿಸಲು ಸರ್ಕಾರ ಬದ್ಧ

02:02 PM Dec 14, 2019 | Team Udayavani |

ಬ್ಯಾಡಗಿ: ಅತಿವೃಷ್ಟಿಯಿಂದ ರಾಜ್ಯದ ಜನರು ಕಂಗಾಲಾಗಿದ್ದು, ಮರುವಸತಿ ಕಲ್ಪಿಸಲು ಬದ್ಧವಾಗಿದ್ದೇವೆ. ಮುಂದಿನ ಮೂರುವರೆ ವರ್ಷಗಳ ಅವ ಧಿಯಲ್ಲಿ ಬಿಎಸ್‌ವೈ ನೇತೃತ್ವದ ಸರ್ಕಾರ ರಾಜ್ಯದ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ‌ನಯಡಲಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭರವಸೆ ನೀಡಿದರು.

Advertisement

ಪಟ್ಟಣದ ಜನಸಂಪರ್ಕ ಕಾರ್ಯಾಲಯದಲ್ಲಿ ದೀರ್ಘ‌ ಕಾಲದಿಂದ ಅನಾರೋಗ್ಯ ಪೀಡಿತ ಫಲಾನುಭವಿ ಗಳ ಚಿಕಿತ್ಸೆಗಾಗಿ ಮುಖ್ಯ ಮಂತ್ರಿಗಳ ಪರಿಹಾರ ನಿ ಧಿಯಿಂದ ಬಿಡುಗಡೆಗೊಳಿಸಿದ ಅನುದಾನದ ಚೆಕ್‌ ವಿತರಿಸಿ ಅವರು ಮಾತನಾಡಿದರು.

ಬಡವರಿಗೂ ಆರೋಗ್ಯ ಹಾಗೂ ಚಿಕಿತ್ಸೆ ಬಹಳಷ್ಟು ದುಬಾರಿ ಎನಿಸುತ್ತಿದೆ ವೈದ್ಯಕೀಯ ವೆಚ್ಚಕ್ಕೆ ಹಣವಿಲ್ಲದೇ ಸಾಕಷ್ಟು ಜನರು ತಮ್ಮ ಜೀವಗಳನ್ನು ಕಳೆದುಕೊಂಡ ಉದಾಹರಣೆಗಳಿವೆ. ಅಂತಹವರ ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬರಲಿದ್ದು, ಯಾವುದೇ ಸಂಕೋಚಪಡದೇ ಮುಕ್ತವಾಗಿ ಬಂದು ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದರು.

ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದ ಅತ್ಯುತ್ತಮ ಆರೋಗ್ಯ ಕೇಂದ್ರಗಳಲ್ಲಿ ಹತ್ತನೇ ಸ್ಥಾನ ಪಡೆದಿದೆ. ವೈದ್ಯಕೀಯ ಸಿಬ್ಬಂದಿ ಕೂಡ ಸಾರ್ವಜನಿಕರ ಆರೋಗ್ಯಕ್ಕೆ ಸ್ಪಂದಿಸುತ್ತಿದೆ. ಮಧುಮೇಹ, ರಕ್ತದೊತ್ತಡ, ರಕ್ತತಪಾಸಣೆ ಸೇರಿದಂತೆ ಡಯಾಲಿಸಿಸ್‌ ಇನ್ನಿತರ ಹತ್ತು ಹಲವು ಸೌಲಭ್ಯಗಳು ಲಭ್ಯವಿದೆ. ಬಡವ ಶ್ರೀಮಂತರೆನ್ನದೇ ಎಲ್ಲರೂ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು. ತಹಶೀಲ್ದಾರ್‌ ಶರಣಮ್ಮ ಕಾರಿ, ಸುರೇಶ ಅಸಾದಿ, ಶಂಕ್ರಣ್ಣ ಮಾತನನವರ, ಶಿವರಾಜ್‌ ಅಂಗಡಿ, ಸಂಜೀವ ಮಡಿವಾಳರ, ಬಸವರಾಜ ಹಲಗೇರಿ, ಸಂತೋಷ ಮೂಲಿಮನಿ ವೀರೇಂದ್ರ ಶೆಟ್ಟರ, ವಿದ್ಯಾಶೆಟ್ಟಿ, ವಿಷ್ಣುಕಾಂತ್‌ ಬೆನ್ನೂರ, ಜಿತೇಂದ್ರ ಸುಣಗಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next