Advertisement

ಸರಕಾರಿ ಸಿಟಿ ಬಸ್‌ ಸೇವೆ ಆರಂಭ: ಬಹಳ ಕಾಲದ ಬೇಡಿಕೆ ಈಡೇರಿಕೆ

08:39 PM Sep 27, 2021 | Team Udayavani |

ಮಹಾನಗರ: ಜಿಲ್ಲಾಡಳಿತ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಬೊಕ್ಕಪಟ್ಣ ಬೋಳೂರಿನಿಂದ ಅಮೃತ ವಿದ್ಯಾಲಯದ ಮೂಲಕವಾಗಿ ಮಂಗಳೂರು ಜಂಕ್ಷನ್‌ (ಕಂಕನಾಡಿ) ರೈಲು ನಿಲ್ದಾಣದವರೆಗೆ ಸರಕಾರಿ ಸಿಟಿ ಬಸ್‌ ಸೌಲಭ್ಯ ಸೋಮವಾರ ಉದ್ಘಾಟನೆಗೊಂಡಿತು.

Advertisement

ಶಾಸಕ ವೇದವ್ಯಾಸ ಕಾಮತ್‌ ನೂತನ ಸಾರಿಗೆ ಸೌಲಭ್ಯವನ್ನು ಉದ್ಘಾಟಿಸಿದರು. ಸ್ಥಳೀಯ ಸಾರ್ವಜನಿಕರು ಬಹಳ ಕಾಲದಿಂದಲೂ ಇಲ್ಲಿ ಸರಕಾರಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆಯನ್ನು ಸಲ್ಲಿಸುತ್ತಿದ್ದರು. ಇಲ್ಲಿನ ಜನರ ಭಾವನೆಗಳಿಗನುಗುಣವಾಗಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಮಂಗಳೂರು ಭೇಟಿಯ ಸಂದರ್ಭ ಅಮ್ಮನವರು ಇಲ್ಲಿ ಸಾರಿಗೆ ಸೌಲಭ್ಯ ಅಭಿವೃದ್ಧಿ ಮಾಡಬೇಕಾಗಿ ತಿಳಿಸಿದ್ದರು. ಅಮ್ಮನವರ ಸಂಕಲ್ಪದಂತೆ ಇಂದು ಅವರ 68 ನೇ ಜನ್ಮದಿನಾಚರಣೆಯಂದು ಈ ಸೇವೆ ಆರಂಭಗೊಳ್ಳುತ್ತಿರುವುದು ವಿಶೇಷ. ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣ ಮೂಲಕ ಆಗಮಿಸುವ ಪ್ರಯಾಣಿಕರಿಗೆ ಇದು ಅನುಕೂಲಕರವಾಗಿದೆ ಎಂದರು.

ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಸ್‌.ಎನ್‌. ಅರುಣ್‌ ಸ್ವಾಗತಿಸಿದರು. ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷ ಡಾ| ವಸಂತ ಕುಮಾರ್‌ ಪೆರ್ಲ ಪ್ರಾಸ್ತಾವನೆಗೈದರು.

ಎಸ್‌.ಸಿ.ಎಸ್‌. ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಜೀವರಾಜ್‌ ಸೊರಕೆ, ಮಾಜಿ ಮೇಯರ್‌ ದಿವಾಕರ್‌, ಸ್ಥಳೀಯ ಕಾರ್ಪೋರೆಟರ್‌ ಜಗದೀಶ್‌ ಶೆಟ್ಟಿ, ಪ್ರಸಾದ್‌ರಾಜ್‌ ಕಾಂಚನ್‌, ಸುರೇಶ್‌ ಅಮೀನ್‌, ಮುರಳೀಧರ್‌ ಶೆಟ್ಟಿ, ಪಂಕಜ್‌ ವಸಾನಿ, ಆರ್‌.ಟಿ.ಒ. ವರ್ಣೇಕರ್‌, ರಾಹುಲ್‌ ಶೆಟ್ಟಿ, ಯೋಗೀಶ್‌ ಆಚಾರ್ಯ, ಬೋಳೂರು ಮೊಗವೀರ ಸಭಾದ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಎರಡು ಗುಂಪುಗಳ ಗಲಾಟೆಯಲ್ಲಿ ʼಬಸವʼ ಬಡವಾಯ್ತು

Advertisement

ಬಜಾಲ್‌ಪಡ್ಪು -ಲ್ಯಾಂಡ್‌ಲಿಂಕ್ಸ್‌ಗೆ ಬಸ್‌ಸಂಚಾರ
ಬಜಾಲ್‌ಪಡ್ಪು ನಿಂದ ದೇರೆಬೈಲ್‌ ಕೊಂಚಾಡಿಯ ಲ್ಯಾಂಡ್‌ಲಿಂಕ್ಸ್‌ಗೆ ಸರಕಾರಿ ಬಸ್‌ ಸಂಚಾರ ಸೌಲಭ್ಯ ಸೆ. 28ರಿಂದ ಪ್ರಾರಂಭ ವಾಗಲಿದೆ. ಬಸ್‌ ಬಜಾಲ್‌ಪಡು³- ಪಲ್ಲಕೆರೆ, ಬಜಾಲ್‌ ಕ್ರಾಸ್‌, ಪಂಪ್‌ವೆಲ್‌, ಕಂಕನಾಡಿ, ಅಂಬೇಡ್ಕರ್‌ ವೃತ್ತ (ಜ್ಯೋತಿ), ಪಿವಿಎಸ್‌, ಕೆಎಸ್‌ಆರ್‌ಟಿಸಿ- ಕುಂಟಿಕಾನ-ಕೊಂಚಾಡಿ ಮೂಲಕ ಲ್ಯಾಂಡ್‌ಲಿಂಕ್ಸ್‌ ಗೆ ಸಂಚರಿಸಲಿದೆ. ಸಂಚಾರ ಸಮಯ-ಲ್ಯಾಂಡ್‌ಲಿಂಕ್ಸ್‌ನಿಂದ- ಬೆಳಗ್ಗೆ 8.00, 8.45, 9.30, 10.15, 11.00, 11.45. 1.05, 1.50 , 2.35, 3.20, 4.15, 5.00, 5.45 ಹಾಗೂ 6.45. ಬಜಾಲ್‌ಪಡಿ³ನಿಂದ  8.00, 8.45, 9.30, 10.15, 11.00, 11.45, 1.05, 1.50, 2.35, 3.20, 4.15, 5.00 ಹಾಗೂ 5.45.

ವೇಳಾಪಟ್ಟಿ
ಸಂಚಾರಮಾರ್ಗ: ಅಮೃತಾನಂದಮಯಿಮಠ ಬೋಳೂರು – ಲೇಡಿಹಿಲ್‌- ಪಿವಿಎಸ್‌- ಅಂಬೇಡ್ಕರ್‌ ವೃತ್ತ (ಜ್ಯೋತಿ)- ಕಂಕನಾಡಿ- ಪಂಪ್‌ವೆಲ್‌- ಬಜಾಲ್‌ ಕ್ರಾಸ್‌- ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣ.

ಬೊಕ್ಕಪಟ್ಣದಿಂದ (ಅಮೃತಾನಂದಮಯಿ ಮಠ) ಬಸ್‌ ಹೊರಡುವ ಸಮಯ: ಬೆಳಗೆ 8.00, 9.30, 11.00, 12.30, 2.35, 4.15 ಹಾಗೂ 5.45. ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದಿಂದ ಬೆಳಗ್ಗೆ 8.45, 10.15, 11.45, 1.30, 3.20, 5.00 ಹಾಗೂ 6.30

ಉದಯವಾಣಿ ವರದಿ ಫಲಶ್ರುತಿ
ಮಂಗಳೂರು ನಗರದ ಪ್ರಮುಖ ರೈಲು ನಿಲ್ದಾಣಗಳೊಲ್ಲಂ ದಾಗಿರುವ ಮಂಗಳೂರು ಜಂಕ್ಷನ್‌ನಿಂದ ನಗರಕ್ಕೆ ಸೂಕ್ತ ಬಸ್‌ ಸೌಕರ್ಯವಿಲ್ಲದೆ ಪ್ರಯಾಣಿಕರು ಎದುರಿ ಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಹಾಗೂ ಇಲ್ಲಿಗೆ ರಾಜ್ಯ ರಸ್ತೆಸಾರಿಗೆ ಬಸ್‌ ಸೌಲಭ್ಯಕಲ್ಪಿಸಬೇಕು ಬೇಡಿಕೆ ಬಗೆ ಉದಯವಾಣಿ ಸುದಿನದಲ್ಲಿ ಜು. 13ರಂದು ವಿಶೇಷ ವರದಿ ಪ್ರಕಟಗೊಂಡಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next