Advertisement

ಬಜೆಟ್‌ ಮರು ಹೊಂದಾಣಿಕೆಗೆ ಸರಕಾರ ಸರ್ಕಸ್‌

01:05 AM May 22, 2020 | Sriram |

ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಉಂಟಾಗಿರುವುದರಿಂದ ಬಜೆಟ್‌ನಲ್ಲಿ ನಿಗದಿಪಡಿಸಿದ್ದ ಇಲಾಖಾವಾರು ಅನುದಾನಕ್ಕೆ ಕತ್ತರಿ ಹಾಕಲು ಸರಕಾರ ಮುಂದಾಗಿದೆ.

Advertisement

ಈಗಾಗಲೇ ಘೋಷಿಸಿರುವ ಪ್ಯಾಕೇಜಿಗೂ ನಿಧಿ ಯನ್ನು ಆಯಾ ಇಲಾಖೆಗಳಲ್ಲಿ ಲಭ್ಯ ಅನು ದಾನ ಮತ್ತು ಯೋಜನೆಗಳಡಿಯೇ ಭರಿ ಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಎಲ್ಲ ಇಲಾಖಾ ಮುಖ್ಯಸ್ಥರಿಗೆ ಮೌಖೀಕ ಸೂಚನೆ ನೀಡಿದ್ದು, ಒಂದೆರಡು ದಿನಗಳಲ್ಲಿ ಸುತ್ತೋಲೆ ಹೊರಡಿಸಲು ಸಿದ್ಧತೆ ನಡೆಸಲಾಗಿದೆ.

ಇದೇ ಕಾರಣಕ್ಕಾಗಿ ಇಲಾಖಾವಾರು ಪ್ರಗತಿ ಪರಿಶೀಲನೆ ಸಭೆಗಳನ್ನು ನಡೆಸಿ ಅನುದಾನ ಮರು ಹೊಂದಾಣಿಕೆ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಬೇಕು, ತೀರಾ ಅನಿವಾರ್ಯ ಹೊರತುಪಡಿಸಿ ಉಳಿದ ಯೋಜನೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸುವ ತೀರ್ಮಾನ ಕೈಗೊಳ್ಳಬೇಕು ಎಂಬುದಾಗಿ ಸಿಎಂ ಯಡಿಯೂರಪ್ಪ ಎಲ್ಲ ಸಚಿವರಿಗೆ ಸೂಚಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಮಿತವ್ಯಯಕ್ಕೆ ನಿರ್ದೇಶನ
ಸಚಿವರು ತಮ್ಮ ಇಲಾಖೆಗಳಲ್ಲಿ ಆರ್ಥಿಕ ಮಿತ ವ್ಯಯ ಜಾರಿ ಬಗ್ಗೆ ನಿಗಾ ವಹಿಸಬೇಕು. ಕೋವಿಡ್ 19 ಹಿನ್ನೆಲೆಯಲ್ಲಿ ಘೋಷಿಸಲಾಗಿರುವ ಪ್ಯಾಕೇಜ್‌ ಸಂಬಂಧಪಟ್ಟ ಇಲಾಖೆಗಳಲ್ಲಿ ಜಾರಿಯಲ್ಲಿರುವ ಯೋಜನೆಗಳಡಿಯೇ ಭರಿಸಬೇಕು. ನಿಯಮಾವಳಿ ಗಳಲ್ಲಿ ಮಾರ್ಪಾಡು ಅಗತ್ಯವಿದ್ದರೆ ಮಾಡಿಕೊಳ್ಳಿ ಎಂದು ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.

ಸಮಾಜ ಕಲ್ಯಾಣ, ಶಿಕ್ಷಣ, ಆರೋಗ್ಯ, ಕೃಷಿ,ತೋಟಗಾರಿಕೆ, ಪಶು ಸಂಗೋಪನೆ, ಸಹಕಾರ, ಗ್ರಾಮೀಣಾಭಿ ವೃದ್ಧಿ, ಪಂ.ರಾಜ್‌ ಇಲಾಖೆ, ಮೂಲಸೌಕರ್ಯ ಹೊರತುಪಡಿಸಿ ಇತರ ಇಲಾಖೆಗಳ ಬಹುತೇಕ ಬಜೆಟ್‌ ಕಾರ್ಯಕ್ರಮಗಳು ಸ್ಥಗಿತಗೊಳ್ಳಲಿವೆ. ಟೆಂಡರ್‌ ಪೂರ್ಣ ಗೊಳಿಸಿ ಕಾಮಗಾರಿ ಆದೇಶ ನೀಡದಿರುವ ಕಾಮಗಾರಿ ಗಳನ್ನು ನಿಲ್ಲಿಸುವಂತೆ ಲೋಕೋಪಯೋಗಿ, ಜಲಸಂಪನ್ಮೂಲ ಇಲಾಖೆಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

Advertisement

ಯಾವ್ಯಾವ ಇಲಾಖೆಗಳ ಅನುದಾನಕ್ಕೆ ಕತ್ತರಿ ?
ಕೋವಿಡ್ 19 ಹಿನ್ನೆಲೆಯಲ್ಲಿ ಪ್ಯಾಕೇಜ್‌ ಮತ್ತು ಇತರ ವೆಚ್ಚಗಳಿಗೆ 7 ಸಾವಿರ ಕೋಟಿ ರೂ. ಅಗತ್ಯವಿದೆ. ಸರಕಾರದ ಆದಾಯ ಕಡಿತವಾಗಿರುವುದರಿಂದ ಇಲಾಖಾವಾರು ಅನುದಾನದಲ್ಲೇ ಪ್ಯಾಕೇಜ್‌ ಭರಿಸುವುದು ಮತ್ತು ಕೆಲವು ಇಲಾಖೆಗಳ ಅನುದಾನ ಕಡಿತಗೊಳಿಸಲು ನಿರ್ಧರಿಸಲಾಗಿದೆ. ಕಾರ್ಮಿಕ ಇಲಾಖೆಯಿಂದಲೇ ಸುಮಾರು
ಸಾವಿರ ಕೋಟಿ ರೂ. ಹೊಂದಾಣಿಕೆ ಮಾಡಲಾ ಗುತ್ತಿದೆ. ಲೋಕೋಪಯೋಗಿ, ಇಂಧನ, ಜಲ ಸಂಪನ್ಮೂಲ, ನಗರಾಭಿವೃದ್ಧಿ, ವಸತಿ ಇಲಾಖೆಗಳ ಸುಮಾರು 10 ಸಾವಿರ ಕೋಟಿ ರೂ. ಅನುದಾನ ಕಡಿತವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next