Advertisement

ಸರ್ಕಾರಿ ಬ್ಯಾಂಕ್‌ಗಳಿಗೆ ಶೀಘ್ರ 83,000 ಕೋಟಿ ರೂ.

06:15 AM Dec 21, 2018 | Team Udayavani |

ಹೊಸದಿಲ್ಲಿ:  ಹಾಲಿ ವಿತ್ತೀಯ ವರ್ಷದಲ್ಲಿಯೇ ಕೇಂದ್ರ ಸರಕಾರ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳಿಗೆ 83 ಸಾವಿರ ಕೋಟಿ ರೂ. ನೀಡಲಿದೆ. ಕೆಲ ತಿಂಗಳೊಳಗಾಗಿಯೇ ಈ ಮೊತ್ತ ಕೊಡಲಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಗುರುವಾರ ಹೇಳಿದ್ದಾರೆ. ಇದೇ ವೇಳೆ ಬ್ಯಾಂಕ್‌ಗಳಿಗೆ ಹೆಚ್ಚುವರಿಯಾಗಿ 41 ಸಾವಿರ ಕೋಟಿ ರೂ. ನೀಡುವುದಕ್ಕೆ ಕೇಂದ್ರ ಸರಕಾರ ಸಂಸತ್‌ನ ಅನುಮತಿ ಕೇಳಿತ್ತು. ಈ ಕ್ರಮದಿಂದಾಗಿ ಬ್ಯಾಂಕ್‌ಗಳಿಗೆ ಮರು ಬಂಡವಾಳ ಹೂಡಿಕೆಯ ಪ್ರಮಾಣವನ್ನು 65 ಸಾವಿರ ಕೋಟಿ ರೂ.ಗಳಿಂದ 1.06 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಿದಂತಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next