Advertisement

ವೈದ್ಯ, ದಂತ ವೈದ್ಯ ಕಾಲೇಜು ಆರಂಭಕ್ಕೆ ಅನುಮತಿ

03:21 AM Jul 17, 2021 | Team Udayavani |

ಬೆಂಗಳೂರು: ರಾಜ್ಯ ಸರಕಾರವು ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್‌ ಮತ್ತು ಅರೆ ವೈದ್ಯಕೀಯ ಕೋರ್ಸ್‌ಗಳ ಭೌತಿಕ ತರಗತಿ ನಡೆಸಲು ಅನುಮತಿ ನೀಡಿದೆ.

Advertisement

ಈ ಶಿಕ್ಷಣ ಸಂಸ್ಥೆಗಳ ಬಹುತೇಕ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬಂದಿ ಈಗಾಗಲೇ ಲಸಿಕೆಯ ಮೊದಲ ಡೋಸ್‌ ಪಡೆದಿರುವ ಹಿನ್ನೆಲೆಯಲ್ಲಿ ತರಗತಿ ನಡೆಸಲು ಷರತ್ತು ಬದ್ಧ ಅನುಮತಿ ನೀಡಲಾಗಿದೆ.

ಸೋಮವಾರದಿಂದ ರಾಜ್ಯದ ಈ ಶಿಕ್ಷಣ ಸಂಸ್ಥೆಗಳು ಭೌತಿಕ ತರಗತಿ ನಡೆಸಲಿವೆ. ಈ ಬಗ್ಗೆ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ.ಯಿಂದ ಕಾಲೇಜುಗಳಿಗೆ ಅಧಿಕೃತ ಸೂಚನೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಕನಿಷ್ಠ ಒಂದು ಡೋಸ್‌ ಪಡೆ ದಿರುವ ವಿದ್ಯಾರ್ಥಿಗಳು, ಬೋಧಕ, ಸಿಬಂದಿ ಮಾತ್ರ ವೈದ್ಯಕೀಯ ಶಿಕ್ಷಣ ಸಂಸ್ಥೆ ಅಥವಾ ಕಾಲೇಜಿಗೆ ಬರಲು ಅವಕಾಶವಿದೆ. ಕೊರೊನಾ ತಡೆ ಮಾರ್ಗಸೂಚಿ, ಎಸ್‌ಒಪಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next