Advertisement

ಸರ್ಕಾರಿ ಉದ್ಯೋಗಿಗಳ ಸಂಖ್ಯೆ ಶೀಘ್ರವೇ ಹೆಚ್ಚಳ; ದೇಶದಲ್ಲಿ ಉದ್ಯೋಗ ಪರ್ವ ಆರಂಭ: ಮೋದಿ

08:45 PM Oct 29, 2022 | Team Udayavani |

ಗಾಂಧಿನಗರ: “ನಮ್ಮ ಸರ್ಕಾರವು 10 ಲಕ್ಷ ಉದ್ಯೋಗ ಸೃಷ್ಟಿಗೆ ಪ್ರಯತ್ನಿಸುತ್ತಿದೆ. ದೇಶದಲ್ಲೀಗ ಉದ್ಯೋಗ ಪರ್ವ ಆರಂಭವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಶನಿವಾರ ಗುಜರಾತ್‌ ಸರ್ಕಾರ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಉದ್ದೇಶಿಸಿ ವರ್ಚುವಲ್‌ ಆಗಿ ಮಾತನಾಡಿದ ಅವರು, “ಸದ್ಯದಲ್ಲೇ ಸರ್ಕಾರಿ ಉದ್ಯೋಗದಲ್ಲಿರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಹಲವಾರು ಉದ್ಯೋಗ ಮೇಳಗಳನ್ನು ನಡೆಸಲಾಗುತ್ತದೆ. ದೇಶಾದ್ಯಂತ 10 ಲಕ್ಷ ಉದ್ಯೋಗ ಸೃಷ್ಟಿಯೇ ನಮ್ಮ ಗುರಿ’ ಎಂದು ಹೇಳಿದ್ದಾರೆ.

ಇದೇ ವೇಳೆ, ಸಾವಿರಾರು ಉದ್ಯೋಗಾವಕಾಶ ಸೃಷ್ಟಿ ಮಾಡುವಂಥ ಹೊಸ ಕೈಗಾರಿಕಾ ನೀತಿಯನ್ನು ಜಾರಿ ಮಾಡಿದ ಗುಜರಾತ್‌ ಸರ್ಕಾರವನ್ನೂ ಮೋದಿ ಶ್ಲಾ ಸಿದ್ದಾರೆ. 3 ಮತ್ತು 4ನೇ ದರ್ಜೆಯ ಸರ್ಕಾರಿ ಹುದ್ದೆಗಳಿಗೆ ಸಂದರ್ಶನ ನಡೆಸದೇ ಇರುವಂಥ ನಿರ್ಧಾರದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುಜರಾತ್‌ ಪಂಚಾಯತ್‌ ಸೇವಾ ಮಂಡಳಿಯಿಂದ 5 ಸಾವಿರ ಯುವಕರಿಗೆ, ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಮಂಡಳಿ ಮತ್ತು ಲೋಕರಕ್ಷಕ್‌ ನೇಮಕ ಮಂಡಳಿಯಿಂದ 8 ಸಾವಿರ ಮಂದಿಗೆ ಶನಿವಾರ ನೇಮಕಾತಿ ಪತ್ರವನ್ನು ಸಿಎಂ ಭೂಪೇಂದ್ರ ಪಟೇಲ್‌ ವಿತರಣೆ ಮಾಡಿದ್ದಾರೆ. ಜತೆಗೆ, ಪ್ರಸಕ್ತ ವರ್ಷ ಗುಜರಾತ್‌ ಸರ್ಕಾರವು ವರ್ಷಕ್ಕೆ 35 ಸಾವಿರ ಸರ್ಕಾರಿ ಉದ್ಯೋಗ ಒದಗಿಸುವ ಗುರಿಯನ್ನು ಸಾಧಿಸಿರುವುದಾಗಿ ಪಟೇಲ್‌ ಅವರು ಪ್ರಧಾನಿ ಮೋದಿಗೆ ಮಾಹಿತಿ ನೀಡಿದ್ದಾರೆ.

ಇನ್ನು, ಸೋಮವಾರ ಮೋದಿ ಅವರು ಸದ್ಯದಲ್ಲೇ ಚುನಾವಣೆ ಎದುರಿಸಲಿರುವ ಗುಜರಾತ್‌ನಲ್ಲಿ 2 ಪ್ರಮುಖ ರೈಲ್ವೆ ಲೈನ್‌ಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

Advertisement

ಕಪ್ಪು ಬಾವುಟದ ಸ್ವಾಗತ:
ಈ ನಡುವೆ, ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿ ನಡೆಸಲೆಂದು ಶನಿವಾರ ಆಗಮಿಸಿದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಮತ್ತು ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಸಿಂಗ್‌ ಮಾನ್‌ ಅವರಿಗೆ ಬಿಜೆಪಿ ಕಾರ್ಯಕರ್ತರು ಕಪ್ಪುಬಾವುಟ ಪ್ರದರ್ಶಿಸಿದ್ದಾರೆ. ಜತೆಗೆ, “ಮೋದಿ, ಮೋದಿ’ ಎಂಬ ಘೋಷಣೆಗಳನ್ನೂ ಕೂಗಿದ್ದಾರೆ. ರ್ಯಾಲಿ ವೇಳೆ ಈ ಬಗ್ಗೆ ಪ್ರಸ್ತಾಪಿಸಿದ ಕೇಜ್ರಿವಾಲ್‌, “ನನಗೆ ಕಪ್ಪುಬಾವುಟ ಪ್ರದರ್ಶಿಸಿದವರನ್ನು ನಾನು ನನ್ನ ಸಹೋದರರು ಎಂದು ಭಾವಿಸುತ್ತೇನೆ. ಒಂದಲ್ಲ ಒಂದು ದಿನ ಅವರ ಹೃದಯವನ್ನು ನಾನು ಗೆಲ್ಲುತ್ತೇನೆ ಮತ್ತು ಅವರೇ ನಮ್ಮ ಪಕ್ಷಕ್ಕೆ ಬರುವಂತೆ ಮಾಡುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ : ಎಸ್ಸೆಸ್ಸೆಲ್ಸಿ: ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

Advertisement

Udayavani is now on Telegram. Click here to join our channel and stay updated with the latest news.

Next