Advertisement
ಚಿಕಿತ್ಸೆಗಾಗಿ ಸಿಂಗಾಪುರವೇ ಆಯ್ಕೆಪುಟ್ಟ ದೇಶವಾದ ಸಿಂಗಾಪುರದ ಜತೆಗೆ ರಾಜಪಕ್ಸ ಕುಟುಂಬಕ್ಕೆ ಭಾರೀ ನಂಟಿದೆ. ಆಗಾಗ್ಗೆ ರಾಜಪಕ್ಸ ಕುಟುಂಬ ಸದಸ್ಯರು ಸಿಂಗಾಪುರಕ್ಕೆ ಚಿಕಿತ್ಸೆಗಾಗಿ ಹೋಗುತ್ತಿ ರುತ್ತಾರೆ. ಮೂಲಗಳ ಪ್ರಕಾರ, ಇಲ್ಲಿ ರಾಜಪಕ್ಸ ಕುಟುಂಬದ ಒಂದು ನಿವಾಸವೂ ಇದೆ. ಹೀಗಾಗಿ ಸೇಫ್ ಎಂದೇ ಅಲ್ಲಿಗೆ ಹೋಗಿದ್ದಾರೆ.
ಎರಡು ಮೂರು ದಿನಗಳ ಹಿಂದಷ್ಟೇ ಗೋಟಬಯ ರಾಜಪಕ್ಸ ಅವರು ಶ್ರೀಲಂಕಾದಿಂದ ಮಾಲ್ಡೀವ್ಸ್‌ಗೆ ತೆರಳಿದ್ದರು. ಅಲ್ಲಿ ಉತ್ತಮ ಸ್ವಾಗತ ಸಿಕ್ಕಿತ್ತು. ಆದರೆ ಅಲ್ಲಿದ್ದರೆ ಕ್ಷೇಮವಲ್ಲ ಎಂಬ ಕಾರಣದಿಂದ ಮಾಲ್ಡೀವ್ಸ್‌ನಿಂದ ಸಿಂಗಾಪುರಕ್ಕೆ ಓಡಿಹೋಗಿದ್ದಾರೆ. ಈಗ ಗೋಟಬಯ ಕುಟುಂಬಸ್ಥರಾದ ಮಹೀಂದಾ ರಾಜಪಕ್ಸ ಮತ್ತು
ಬಸಿಲ್ ರಾಜಪಕ್ಸ ಅವರಿಗೆ ದೇಶದಿಂದ ಹೊರಹೋಗದಂತೆ ನಿರ್ಬಂಧ ಹೇರಲಾಗಿದೆ. ಹೃದಯ
ಶಸ್ತ್ರಚಿಕಿತ್ಸೆ
2019ರಲ್ಲಿ ಗೋಟಬಯ ರಾಜಪಕ್ಸ ಅವರು,ಸಿಂಗಾಪುರಕ್ಕೆ ತೆರಳಿ ಬೈಪಾಸ್ ಸರ್ಜರಿ ಮಾಡಿಸಿಕೊಂಡಿದ್ದರು. ಅಲ್ಲದೇ, ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯರೂ ತಮಿಳಿನವರೇ ಆಗಿದ್ದರು. ಜತೆಗೆ ಮಹೀಂದಾ ರಾಜಪಕ್ಸ ಕೂಡ ಇಲ್ಲಿಯೇ ಚಿಕಿತ್ಸೆ ಪಡೆದಿದ್ದಾರೆ.
Related Articles
ಅಂದ ಹಾಗೆ, ಸಿಂಗಾಪುರದಲ್ಲಿ ತಮಿಳಿನವರು ಹೆಚ್ಚಾಗಿದ್ದಾರೆ. ಹೀಗಾಗಿಯೇ ಇಲ್ಲೊಂದು ಪ್ರದೇಶಕ್ಕೆ ಲಿಟಲ್ ತಮಿಳುನಾಡು ಎಂದೇ ಕರೆಯಲಾಗುತ್ತದೆ. ಸುಮಾರು 2 ಲಕ್ಷ ಮಂದಿ ತಮಿಳು ಮಂದಿ ಇಲ್ಲಿ ವಾಸ ಮಾಡುತ್ತಿದ್ದಾರೆ.
Advertisement