Advertisement

ಆಫೀಸಲ್ಲಿ ಗಾಸಿಪ್ಪಾ!? ಹೆಲೋ, ಒಂದ್‌ ಬ್ರೇಕಿಂಗ್‌ ನ್ಯೂಸ್‌ ಉಂಟ್ರೀ…

12:36 PM May 31, 2017 | Harsha Rao |

ಹೆಣ್ಮಕ್ಕಳಿಗೆ “ಗಾಸಿಪ್‌ ಕ್ವೀನ್‌’ ಎಂಬ ಪಟ್ಟ ಬಹುಬೇಗನೆ ಒಲಿಯುತ್ತೆ. ಔದ್ಯೋಗಿಕ ವಲಯದಲ್ಲಿ ಈ ಅಪಾಯ ಇನ್ನೂ ಹೆಚ್ಚು. ಏಕೆ ಮಹಿಳೆಯರಿಗೇ ಈ ಪಟ್ಟ? ಪುರುಷರು ಗಾಸಿಪ್‌ ಹಬ್ಬಿಸೋದಿಲ್ವಾ? ಗಾಳಿಸುದ್ದಿ ಅಂದ್ರೆ ಸ್ತ್ರೀಗೆ ಅಷ್ಟು ಪ್ರಿಯವೇ? 

Advertisement

ಹೆಣ್‌ಮಕ್ಳು ಕೆಲ್ಸಕ್‌ ಹೋಗ್ಬೇಕಾ, ಬೇಡ್ವಾ ಅನ್ನೋದು, ಗಂಡನ ಆರ್ಥಿಕ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಅನ್ನುವುದು ಮುಕ್ಕಾಲು ಪಾಲು ಜನರ ಅಭಿಪ್ರಾಯವಾದ್ರೆ, ಅದನ್ನೂ ಮೀರಿ ಕೆಲಸಕ್ಕೆ ಹೊರಟ ಹೆಣ್‌ಮಕಿÛಗೆ “ಗಾಸಿಪ್‌ ಕ್ವೀನ್‌’ ಎಂಬ ಕಿರೀಟ! “ಹೇ ಅವ್‌Å ಮನೇಲಿ ಎಲ್ಲಾ ಅನುಕೂಲ ಇದೆ… ಸುಮ್ನೆ ಗಾಸಿಪ್‌ ಗೀಸಿಪ್‌ ಮಾಡ್ಕೊಂಡ್‌ ಟೈಮ…ಪಾಸ್‌ ಮಾಡೋಕೆ ಕೆಲ್ಸಕ್‌ ಬರ್ತಾರೆ ಮಗ’ ಅಂತ ಗಂಡು ಕಲೀಗ್ಸ್‌ ಗೂಬೆ ಕೂರಿಸ್ತಾರೆ. ಗಂಡ್‌ ಮಕಾÛಗ್ಲಿ, ಹೆಣ್‌ ಮಕಾÛಗ್ಲಿ… ಒಂದ್‌ ವಿಷ್ಯದ ಬಗ್ಗೆ ಅವ್ರಿಗಿರೋ ಕೆಟ… ಕುತೂಹಲ, ಹಲವು ಬಾರಿ ಗಾಸಿಪಿಂಗ್‌ಗೆ ಕಾರಣವಾಗುತ್ತದೆ. ಆದ್ರೆ “ಗಾಸಿಪ್‌ ಕ್ವೀನ್‌’ ಅನ್ನುವ ಕಿರೀಟ ಹುಡ್ಗಿàರ್ಗೆ ಮಾತ್ರ ಯಾಕ್‌ ಸಿಕು¤ ಗೊತ್ತಾ?
ಹುಡುಗರು ಮಾಡುವ ಗಾಸಿಪ್‌ ಏನಿದ್ರು ಸಂಜೆ ಆದ್ಮೇಲೆ ಬಾರ್‌ ಆಂÂಡ್‌ ರೆಸ್ಟೋರೆಂಟ… ಟೇಬಲ… ಮುಂದೆ ಶುರುವಾಗುತ್ತೆ. ಅಲ್ಲಿಯೇ ಮುಗಿದು ಹೋಗುತ್ತೆ. ಆದ್ರೆ ಹುಡುಗೀರ ಗಾಸಿಪ್ಪು, ಆಫೀಸ್‌ನಲ್ಲಿ ಮಧ್ಯಾಹ್ನ ಲಂಚ್‌ ಬಾಕ್ಸ್‌ ಓಪನ್‌ ಆಗ್ತಾ ಇದ್ದ ಹಾಗೆ ಶುರುವಾಗುತ್ತೆ! ಅದು ಅಲ್ಲೇ ಮುಗಿಯದೇ ಆಫೀಸ್‌ ಕ್ಯಾಬಿನ್‌ವರೆಗೂ ಬಂದು ಹುಡುಗೀರ ಕೆರಿಯರ್‌ಗೆ ಎಫೆಕ್ಟ್ ಮಾಡುತ್ತೆ.

ಈ “ಗಾಸಿಪ್‌ ಕ್ವೀನ್‌’ ಅನ್ನೋ ಕಳಂಕ ಹಚ್ಚಿಕೊಳ್ಳದೆ, ಒಳ್ಳೇ ವರ್ಕರ್‌ ಅನ್ನಿಸಿಕೊಳ್ಬೇಕಂದ್ರೆ ಏನ್‌ ಮಾಡ್ಬೇಕು ಅಂದ್ರೆ…
ಯಾರು, ಯಾವ್‌ ಕಲರ್‌ ಬಿಂದಿ ಇಟ್ರೆ ನಮ್ಗೆàನು? ನಮ… ಕೆರಿಯರ್‌ ಮೇಲೆ ಬ್ಲಾÂಕ್‌ ಬಿಂದಿ ಬೀಳೆªà ಇರೋ ಹಾಗ್‌ ನಾವ್‌ ನೋಡ್ಕೊàಬೇಕು. ಆಫೀಸ್‌ಗೆ ಬಂದಾಕ್ಷಣ ಟೀಮ… ವರ್ಕ್‌ನಲ್ಲಿ ಜೊತೆಯಾಗಿ, ಶ್ರದ್ಧೆಯಿಂದ ಕೆಲಸ ಮಾಡಬೇಕು. ಆದರೆ, ಗುಂಪುಗಾರಿಕೆಯ ವಿಚಾರ ಬಂದಾಗ ಗುಂಪಿನಿಂದ ಹೊರಗೆ ಉಳಿದು ಎಲ್ಲರಿಗಿಂತ ಭಿನ್ನವಾಗಿ ನಿಲ್ಲಬೇಕು. ಕಂಡವರ ವಿಷ್ಯಕ್ಕೆ ರಿಯಾಕr… ಮಾಡೋಕ್‌ ಹೋಗ್ಬಾರ್ದು. ಆಫೀಸ್‌ ಕಟ್ಟಡದಲ್ಲಿ ಸಿಗಬಹುದಾದ ಗಾಸಿಪ್‌ ಎಂಬ ಸಿಲ್ಲಿ ಮನರಂಜನೆ ನಮ್ಮ ಹೆಸರನ್ನು ಹಾಳು ಮಾಡುತ್ತದೆ ಎಂಬುದನ್ನು ಅರಿಯಬೇಕು.

ಮೇಕಪ್‌ ನಮ್ಮ ಹಕ್ಕಾದರೆ… ಕೆಲಸ ನಮ್ಮ ಕರ್ತವ್ಯ ಆಗಿರುತ್ತೆ. ಕರ್ತವ್ಯ ಪಾಲನೆ ಸರಿಯಾಗಿ ನಡೆದರೆ ಹಕ್ಕಿನ ಬಗ್ಗೆ ಯಾರೂ ಪ್ರಶ್ನಿಸಲಾರರು. ಹಾಗಾಗಿ, ಮಾಡಬೇಕಿರುವ ಕೆಲಸವನ್ನು ಪಫೆìಕ್ಟ್ ಆಗಿ ಮಾಡಿ ಮುಗಿಸಿ. “ಮೇಕಪ್‌ ಮಾಡ್ಕೊಂಡ್‌ ಬರೋಕ್‌ ಅಗುತ್ತೆ, ಕೆಲ್ಸ ಸರಿಯಾಗ್‌ ಮಾಡೋಕ್‌ ಆಗಲ್ವಾ?’ ಅನ್ನುವ ಅವಕಾಶವನ್ನು ಬಾಸ್‌ಗೆ ನೀವೇ ಮಾಡಿಕೊಡಬೇಡಿ…

ನಮ… ಜೀವನದಲ್ಲಿ, ಪರ್ಸನಲ… ಲೈಫ್ ಮತ್ತು ಪೊ›ಫೆಷನಲ… ಲೈಫ್… ಎಂಬ ಎರಡು ಪ್ಯಾರಲಲ್‌ ಹಂತಗಳಿವೆ. ಎರಡನ್ನೂ ಒಟ್ಟಿಗೆ ಕ್ರಮಿಸಬೇಕು. ಆದರೆ, ಎರಡನ್ನೂ ಮಿಕ್ಸ್‌ ಮಾಡಬಾರದು! ಆಫೀಸ್‌ ವಿಷ್ಯ ಆಫೀಸ್‌ನಲ್ಲಿ, ಮನೆ ವಿಷ್ಯ ಮನೆಯÇÉೇ ಬಿಟ್ರೆ ಅನುಕೂಲ ಜಾಸ್ತಿ. 

Advertisement

ಹೊಸತರಲ್ಲಿ ಅಗಸ ಬಟ್ಟೇನ ಎತ್ತೆತ್ತಿ ಒಗೆದ ಹಾಗೆ ಕೆಲಸಕ್ಕೆ ಸೇರಿದ ಮೊದಲನೇ ದಿನವೇ ಯರ್ರಾಬಿರ್ರಿ ಸ್ಪೀಡ್‌ನ‌ಲ್ಲಿ ವರ್ಕ್‌ ಮಾಡಿದ್ರೆ…. ಸಹೋದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗ್ತಿàರ. ಅಷ್ಟೇ ಅಲ್ಲದೆ, ಬಾಸ್‌ ಪ್ರತಿದಿನವೂ ನಿಮ್ಮಿಂದ ಅದೇ ಮಟ್ಟದ ಕೆಲಸವನ್ನು ನಿರೀಕ್ಷಿಸುತ್ತಾರೆ. 

ಕೆಲಸ ಮಾಡಲು ಗೊತ್ತಾಗದೆ, ಸಹೋದ್ಯೋಗಿಗಳು ಕಷ್ಟಪಡುತ್ತಿದ್ದರೆ ನಿಮ್ಮ ಬುದ್ಧಿ ಶಕ್ತಿಯನ್ನು ಅವರಿಗೆ ಸಹಾಯ ಮಾಡಲು ಉಪಯೋಗಿಸಿ.. ಅವರ ಬಗ್ಗೆ ಬಾಸ್‌ನ ಬಳಿ ಚಾಡಿ ಹೇಳಲು ಉಪಯೋಗಿಸಬೇಡಿ. ಗಾಸಿಪಿಂಗ್‌ ಬೇಡ. ಆದರೆ, ಸುತ್ತಮುತ್ತ ಏನ್‌ ನಡೀತಿದೆ ಅನ್ನೋ ಅಬ್ಸರ್ವೇಷನ್‌ ಇರ್ಲಿ… ನಿಮ… ಬಾಸ್‌ ನಿಮ್ಮನ್ನ ಹೊಗಳ್ತಾ ಇ¨ªಾರೆ ಅಂದ್ರೆ ಹೆಮ್ಮೆ ಪಡಿ. ಆದ್ರೆ, ಇನ್ನೊಬ್ಬ ಸಹೋದ್ಯೋಗಿಯನ್ನು ತೆಗಳುವ ಮೂಲಕ ನಿಮ್ಮನ್ನು ಹೊಗಳುತ್ತಿ¨ªಾರೆ ಅನ್ನಿಸಿದಾಗ ಮಾತ್ರ ಹುಷಾರಾಗಿರಿ… ಯಾಕೆಂದರೆ, ನಿಮ್ಮ ಸಹೋದ್ಯೋಗಿಯನ್ನು ಮೆಚ್ಚಿಸಲು ಅವರ ಮುಂದೆಯೂ ನಿಮ್ಮ ಬಾಸ್‌ ಇದೇ ಕೆಲ್ಸ ಮಾಡºಹುದು. ಆಗ ನಿಮ್ಮನ್ನು ತೆಗಳಬಹುದು!

ಕಡೆಯದಾಗಿ ಹೇಳಬೇಕಾದ ಒಂದು ಮಾತು: ಕೆಲ್ಸದ ಮೇಲೆ ಶ್ರದ್ಧೆ ಇದ್ದರೆ ಮನಸ್ಸು ಯಾವುದೇ ಮನರಂಜನೆಯನ್ನು ಬಯಸುವುದಿಲ್ಲ!

– ನಂದಿನಿ ನಂಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next