ಕಾಳಗಿ: ಸುಕ್ಷೇತ್ರ ರೇವಗ್ಗಿ (ರಟಕಲ್) ಗುಡ್ಡದ ರೇವಣಸಿದ್ಧೇಶ್ವರ ದೇಗುಲದ ಜಮೀನಿನಲ್ಲಿ ನಿರ್ಮಿಸಲಾಗಿರುವ ಗೋಶಾಲೆ, ಶುದ್ಧ ವಿಭೂತಿ ತಯಾರಿ ಕೇಂದ್ರವನ್ನು ಶಾಸಕ ಡಾ| ಅವಿನಾಶ ಜಾಧವ ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಅವರು, ಗೋವಿನ ಸಗಣಿ, ಗೋಮೂತ್ರದಿಂದ ವಿಭೂತಿ ತಯಾರಿಸುವ ಕೇಂದ್ರ ಹಾಗೂ ಗೋಶಾಲೆ ಸ್ಥಾಪಿಸಿರುವ ದೇಗುಲದ ಆಡಳಿತ ಮಂಡಳಿ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಗೋಶಾಲೆ ಹಾಗೂ ವಿಭೂತಿ ಕೇಂದ್ರ ಒಂದಕ್ಕೊಂದು ಪೂರಕವಾಗಿವೆ. ಈ ಕೇಂದ್ರವನ್ನು ಉತ್ತಮವಾಗಿ ನಡೆಸಿಕೊಂಡು ಹೋಗಲು ದೇಗುಲದ ಆಡಳಿತ ಮಂಡಳಿ ಶ್ರಮಿಸಬೇಕು ಎಂದರು.
ಚಂಡಿಕಾ ಯಾಗ: ಧರ್ಮಪತ್ನಿ ಸಮೇತ ಆಗಮಿಸಿದ್ದ ಶಾಸಕರು ಲೋಕಕಲ್ಯಾಣಕ್ಕಾಗಿ ನಡೆದ ಚಂಡಿಕಾ ಹೋಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಕ್ಷೇತ್ರದ ಜನರಿಗೆ ಉತ್ತಮ ಆರೋಗ್ಯ, ಸುಖ, ಸಮೃದ್ಧಿ ದೊರೆಯಲೆಂದು ಪ್ರಾರ್ಥಿಸಿದರು.
ಹೊನ್ನಕಿರಣಗಿಯ ಪೂಜ್ಯ ಚಂದ್ರಗುಂಡ ಶಿವಾಚಾರ್ಯರು, ರಟಕಲ್‌ನ ಶ್ರೀ ರೇವಣಸಿದ್ಧ ಶಿವಾಚಾರ್ಯರು, ಶ್ರೀ ಸಿದ್ಧರಾಮ ದೇವರು, ಚಂದನಕೇರಾದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಸುಗೂರನ ಶ್ರೀ ಚೆನ್ನರುದ್ರಮುನಿ ಶಿವಾಚಾರ್ಯರು, ಸೇಡಂ ಸಹಾಯಕ ಆಯುಕ್ತ ರಮೇಶ ಕೋಲಾರ, ಕಾಳಗಿ ತಹಶೀಲ್ದಾರ್ ನಾಗನಾಥ ತರಗೆ, ಚಿಂಚೋಳಿ ತಹಶೀಲ್ದಾರ್ ಅರುಣ ಕುಲಕರ್ಣಿ, ಚಿತ್ತಾಪುರ ತಹಶೀಲ್ದಾರ್ ಉಮಾಕಾಂತ ಹಳ್ಳೆ, ದೇವಸ್ಥಾನ ಸಮಿತಿ ಕಾರ್ಯದರ್ಶಿ ಮಂಜುನಾಥ ನಾವಿ, ಅರ್ಚಕ ಚೆನ್ನಬಸಪ್ಪ ದೇವರಮನಿ, ಶಿವಪುತ್ರಯ್ಯ ಸ್ವಾಮಿ, ಪ್ರಮುಖರಾದ ದತ್ತಾತ್ರೇಯ ರಾಯಗೋಳ, ನಾಗೇಶ ಬಿರೇದಾರ, ಸಿದ್ಧಯ್ಯ ಸ್ವಾಮಿ, ಸುರೇಶ ಪೆದ್ದಿ, ಶಾಂತಪ್ಪ ರೇವಗ್ಗಿ, ಅಣ್ಣಾರಾವ್ ಜನಕೊಂಡ, ಗಂಗಾಧರ ಸ್ವಾಮಿ, ರಾಮು ರಾಠೊಡ, ಸಿದ್ಧಯ್ಯಸ್ವಾಮಿ ಮಠಪತಿ, ಪರಮೇಶ್ವರ ಸದಲಾಪುರ, ಕಮಲಾಕರ ಕಡಗರ ಇದ್ದರು.