ಕಾಂಗೋ : 2019ರಲ್ಲಿ ಭಿನ್ನ ವಿಭಿನ್ನ ಫೋಟೋ ಪೋಸ್ ಗಳ ಮೂಲಕ ವಿಶ್ವದಾದ್ಯಂತ ವೈರಲ್ ಆಗಿದ್ದ ಗೊರಿಲ್ಲಾಗಳೆರಡರ ಪೈಕಿ ಒಂದು ಗೊರಿಲ್ಲಾ ಕೊನೆಯುಸಿರೆಳೆದಿದೆ.
ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋದ ವಿರುಂಗಾ ನ್ಯಾಷನಲ್ ಪಾರ್ಕ್ ನಲ್ಲಿ ಸಂರಕ್ಷಣೆಗೊಳಗಾಗಿದ್ದ ”ನಡಕಸಿ” ಎಂಬ ಹೆಸರಿನ ಜನಪ್ರಿಯ ಹೆಣ್ಣು ಗೊರಿಲ್ಲಾ 14 ನೇ ವಯಸ್ಸಿನಲ್ಲಿ ಇಹಲೋಕದ ಯಾತ್ರೆ ಮುಗಿಸಿದೆ.
ನೋವಿನ ವಿಚಾರವನ್ನು ವಿರುಂಗಾ ನ್ಯಾಷನಲ್ ಪಾರ್ಕ್ ಟ್ವೀಟ್ ಮೂಲಕ ಹೊರಹಾಕಿದ್ದು, ವಿಶ್ವಾಧ್ಯಂತ ಪ್ರಾಣಿ ಪ್ರಿಯರು ಕಂಬನಿ ಮಿಡಿದಿದ್ದಾರೆ.
ಭಿನ್ನ ವಿಭಿನ್ನ ಸೆಲ್ಫಿಗಳಿಗೆ ಪೋಸ್ ನೀಡುವ ಮೂಲಕ ಗೊರಿಲ್ಲಾಗಳು ಸುದ್ದಿಯಾಗಿದ್ದವು.
ಕಾಂಗೋದಲ್ಲಿನ ಗೊರಿಲ್ಲಾ ಸಂರಕ್ಷಣೆ ಮಾಡುವ ವಿರುಂಗಾ ನ್ಯಾಷನಲ್ ಪಾರ್ಕ್ ನಲ್ಲಿ ನಡಕಸಿಯನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳಲಾಗುತ್ತಿತ್ತು. ತನ್ನನ್ನು ನೋಡಿಕೊಳ್ಳುತ್ತಿದ್ದ ಅರಣ್ಯ ಸಿಬ್ಬಂದಿಯ ಎದೆಗಪ್ಪಿಕೊಂಡೆ ಪ್ರಾಣ ಬಿಟ್ಟಿರುವ ಫೋಟೋ ಇದೀಗ ಮತ್ತೆ ವೈರಲ್ ಆಗುತ್ತಿದೆ.