ಕಲಬುರಗಿ: ಇಲ್ಲಿನ ನಗರದ ಜೇವರ್ಗಿ ರಸ್ತೆಯ ಶ್ರೀರಾಮಮಂದಿರ ಹಾಗೂ ನ್ಯೂರಾಘವೇಂದ್ರ ಕಾಲೋನಿಯ ಶ್ರೀ ವೆಂಕಟೇಶ್ವರ ದೇವಸ್ಥಾನಗಳಲ್ಲಿ ಶುಕ್ರವಾರ ಬೆಂಗಳೂರಿನ ಶ್ರೀನಿವಾಸ ಸೇವಾ ಬಳಗದ ನೇತೃತ್ವದಲ್ಲಿ ಶ್ರೀನಿವಾಸ ದೇವರ ಕಲ್ಯಾಣೋತ್ಸವ ವೈಭವವಾಗಿ ನಡೆದವು.
ಪದ್ಮಾವತಿ ಹಾಗೂ ಶ್ರೀನಿವಾಸ ದೇವರ ಕಡೆಯಿಂದ ದಂಪತಿಗಳು ಪುಣ್ಯಾಹವಾಚನಕ್ಕೆ ಕುಳಿತಿದ್ದರು. ಸಂದರ್ಭಕ್ಕೆ ತಕ್ಕಂತೆ ದಾಸರ ಪದಗಳ ಭಕ್ತಿಗೀತೆ ಪ್ರಸ್ತುತ ಪಡಿಸಲಾಯಿತು. ಪಂ| ಪ್ರಸನ್ನಾಚಾರ್ಯರಿಂದ ಶ್ರೀನಿವಾಸ ದೇವರ ಕುರಿತು ಪ್ರಚವನ ನಡೆಯಿತು.
ಶ್ರೀನಿವಾಸ ಸೇವಾ ಬಳಗದ ಟಿ. ವಾದಿರಾಜ, ಶ್ರೀನಿವಾಸಾಚಾರ್ಯ, ವೇಣುಗೋಪಾಲ, ರಘುರಾಮ ಭದ್ರಾವತಿ, ಶ್ರೀನಿವಾಸ, ನವಲಿ ಕೃಷ್ಣಾಚಾರ್ಯ, ಶ್ರೀರಾಮಂದಿರದ ಧರ್ಮದರ್ಶಿ ಸರಸ್ವತಿ ತಂತ್ರಿ, ವಾಸುದೇವರಾವ ಅಗ್ನಿಹೋತ್ರಿ, ವಾಸ್ಯರಾಜ ಸಂತೆಕಲ್ಲೂರ, ಬೆಂಕಿ ಭೀಮಭಟ್ಟರು ಹಾಗೂ ಭಕ್ತರು ಪಾಲ್ಗೊಂಡಿದ್ದರು.
ನ್ಯೂರಾಘವೇಂದ್ರ ಕಾಲೋನಿಯ ಶ್ರೀ ವೆಂಕಟೇಶ್ವರ ದೇವಸ್ಥಾನಗದಲ್ಲಿ ಪಂ. ಗೋಪಾಲಚಾರ್ಯ ಅಕಮಂಚಿ ಪ್ರವಚನ ನೀಡಿ, ಇಂದು ಶ್ರೀನಿವಾಸ ದೇವರ ವಿವಾಹದ ಪುಣ್ಯ ದಿವಸ. ಎಲ್ಲೆಡೆ ಈ ದಿನದಂದು ಶ್ರೀನಿವಾಸ ಕಲ್ಯಾಣೋತ್ಸವ ಆಚರಿಸುವ ಮೂಲಕ ಭಗವಂತನ ಸ್ಮರಣೆ ಮಾಡುತ್ತಾರೆ ಎಂದರು.
ಐದು ದಿನಗಳಿಂದ ನಡೆದ ಪ್ರವಚನ ಮಂಗಳಗೊಂಡಿತು. ಜೈರಾಮಾಚಾರ್ಯ ಅಕಮಂಚಿ, ಟ್ರಸ್ಟಿಗಳಾದ ಪಿ.ಎನ್. ಜೋಷಿ, ಶ್ರೀನಿವಾಸಾಚಾರ್ಯ, ಕೃಷ್ಣಾಚಾರ್ಯ ಜೋಷಿ ನೆಲೋಗಿ, ರಾಮರಾವ ಕುಲ್ಕರ್ಣಿ ಶಾರದಳ್ಳಿ, ಬಾಬಣ್ಣ, ಜಯತೀರ್ಥ ಹಾಗೂ ಭಕ್ತರು ಇದ್ದರು.