Advertisement

ಗೋರೆಗಾಂವ್‌ ಕರ್ನಾಟಕ ಸಂಘ: ಗ್ರಂಥಾಯಣದ ಉಪನ್ಯಾಸ ಕಾರ್ಯಕ್ರಮ

03:56 PM Sep 01, 2017 | |

ಮುಂಬಯಿ: ಗೋರೆ ಗಾಂವ್‌ ಕರ್ನಾಟಕ ಸಂಘದ ಬಾಕೂìರು ರುಕ್ಮಿಣಿ ಶೆಟ್ಟಿ ಸಭಾ ಗೃಹದಲ್ಲಿ ಆ. 19ರಂದು ಸಂಜೆ 5ರಿಂದ ಮನಮೋಹನ್‌ ಶೆಟ್ಟಿ, ದಿವಂಗತರಾದ ಶಾಂತಾರಾಮರಾವ್‌ ಉದ್ಯಾವರ್‌, ಡಾ| ಸುನೀತಿ ಉದ್ಯಾವರ್‌, ಕವಿತಾ ಕೈಲಾಜೆ ಅವರ ದತ್ತಿನಿಧಿ ಅಂಗವಾಗಿ ಗ್ರಂಥಾಯಣ ವಿಭಾಗದ ವತಿಯಿಂದ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತು.

Advertisement

ಸಂಘದ ಅಧ್ಯಕ್ಷ ರಮೇಶ್‌ ಶೆಟ್ಟಿ ಪಯ್ನಾರ್‌ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಘದ ಜೊತೆ ಕೋಶಾಧಿಕಾರಿ ವಸಂತಿ ಕೋಟೆಕಾರ್‌ ಹಾಗೂ ಗ್ರಂಥಾಯಣ ವಿಭಾಗದ ಸದಸ್ಯೆ ವಿದ್ಯಾ ದೇಶಪಾಂಡೆ ಅವರು ದಿ| ಡಾ| ಸುನೀತಿ ಉದ್ಯಾವರ ಅವರ ಸರಸ್ವತಿ ದೇವಿಯ ರಚನೆಯ ಪ್ರಾರ್ಥನೆಗೈದರು. ಕಳೆದ 19 ವರ್ಷಗಳ ಗ್ರಂಥಾಯಣದ ಸಾಧನೆ ಯನ್ನು ನಿರ್ದೇಶಕಿ ಪದ್ಮಜಾ ಮಣ್ಣೂರ ಅವರು ಸಂಕ್ಷಿಪ್ತವಾಗಿ ವಿವರಿಸಿದರು.

ಸದಸ್ಯೆ ಸುಜಾತಾ ಶೆಟ್ಟಿ ಅವರು ಉಪನ್ಯಾಸಕಾರರಾದ ಶ್ರೀನಿವಾಸ ಜೋಕಟ್ಟೆ ಅವರನ್ನು ಪರಿಚಯಿಸಿದರು. ಸ್ಮರಣಿಕೆ ಹಾಗೂ ಪುಷ್ಪಗುತ್ಛ ನೀಡಿ ಜೋಕಟ್ಟೆ ಅವರನ್ನು ಗೌರವಿಸಲಾಯಿತು.

ಮುಂಬಯಿಯಲ್ಲಿ ಕನ್ನಡ ಪುಸ್ತಕ ಗಳ ಪ್ರಕಟನೆ ಮತ್ತು ಮಾರಾಟ ಎಂಬ
ವಿಷಯದ ಬಗ್ಗೆ‌ ಜೋಕಟ್ಟೆ ಅವರು ವಿಸ್ತಾರವಾಗಿ ಉಪನ್ಯಾಸ ನೀಡಿದರು.
ಮುಂಬಯಿಯಲ್ಲಿ ಕನ್ನಡ ಪುಸ್ತಕ ಗಳ ಮಾರಾಟ ನೋಡಿದರೆ ಅಷ್ಟು ಆಶಾದಾಯಕವಾಗಿಲ್ಲ. ಅಲ್ಲದೆ, ಪರಿಹಾರ ಕಾಣಲು ಕಷ್ಟವಿದೆ. ಕೆಲವು ಪುಸ್ತಕಗಳಿಗೆ ಸಾಹಿತ್ಯದ ರುಚಿ ಇರುವುದಿಲ್ಲ. ಇತ್ತೀಚೆಗೆ ವಾಸ್ತು ಶಾಸ್ತ್ರ, ಅಡಿಗೆ ಪುಸ್ತಕ ಮತ್ತು ಮಧುಮೇಹದ ಮಾಹಿತಿಯ ಬಗೆಗಿನ ಪುಸ್ತಕಗಳಿಗೆ ತುಂಬಾ ಬೇಡಿಕೆ ಇದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಮುಂಬಯಿ ಸಾಹಿತಿಗಳು ತುಂಬಾ ಹೆಸರು ಗಳಿಸಿದ್ದಾರೆ. ಇಂದು ಅನೇಕ ಕೃತಿಗಳು ದಾನಿಗಳ ನೆರವಿನಿಂದ ಪ್ರಕಟಿಸಲ್ಪಡುತ್ತವೆ. 60ರ ದಶಕದಲ್ಲಿ ಆರ್‌. ಎಸ್‌. ರಾಜಾರಾಮ ಅವರು ಬ್ರಿಗೇಡ್‌ ರಸ್ತೆಯಲ್ಲಿ ನಿಂತು ಪುಸ್ತಕದ ಕೆಲ ಮುಖ್ಯ ಅಂಶಗಳನ್ನು ತುಂಬಾ ಜೋರಾಗಿ ಓದಿ ಜನರ ಗಮನ ಸೆಳೆದು ಮಾರಾಟ ಮಾಡುತ್ತಿದ್ದುದನ್ನು ನೆನಪಿಸಿಕೊಟ್ಟರು.

ಇನ್ನೊಬ್ಬರು ನಮ್ಮ ಕೃತಿ ಓದಲಿಲ್ಲ ಎಂದು ಗೊಣಗುವುದಕ್ಕಿಂತ ಓದುಗರ ಜೊತೆ ಲೇಖಕರ ಸಮಯ ಯಾವ ರೀತಿ ಸದುಪಯೋಗವಾಗಬಲ್ಲದು ಎಂಬುದರ ಬಗ್ಗೆ ನಾವೇ ಯೋಚಿಸಬೇಕು ಎಂದರು.

Advertisement

ಅಧ್ಯಕ್ಷೀಯ ಭಾಷಣದಲ್ಲಿ ಪುಸ್ತಕದ ಗುಣಮಟ್ಟ ಅರಿತುಕೊಂಡು ಪುಸ್ತಕ ಪ್ರಕಟಿಸಬೇಕು ಎಂದು ಸಂಘದ ಅಧ್ಯಕ್ಷರಾದ ರಮೇಶ್‌ ಶೆಟ್ಟಿ ಪಯ್ನಾರ್‌ ಅಭಿಪ್ರಾಯಪಟ್ಟರು. ವಿದ್ಯಾದೇಶಪಾಂಡೆ ನಿರೂಪಿಸಿದರು. ಗ್ರಂಥಾಯಣ ಸಮಿತಿಯ ಸಂಚಾಲಕಿ ಶಾಂತಾ ಎನ್‌. ಶೆಟ್ಟಿ  ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next