Advertisement

ಗೋರೆಗಾಂವ್‌ ಕರ್ನಾಟಕ ಸಂಘ: ದತ್ತಿ ಉಪನ್ಯಾಸ ಕಾರ್ಯಕ್ರಮ

08:56 PM Mar 30, 2019 | Team Udayavani |

ಮುಂಬಯಿ: ಗೋರೆಗಾಂವ್‌ ಕರ್ನಾಟಕ ಸಂಘದ ವತಿಯಿಂದ ದಿ| ನಾರಾಯಣ ಶೆಟ್ಟಿ ಮತ್ತು ದಿ| ಪದ್ಮಾವತಿ ದಂಪತಿಯ ಪುತ್ರ ಪ್ರಕಾಶ್‌ ಶೆಟ್ಟಿ ಇವರು ಸ್ಥಾಪಿಸಿದ ದತ್ತಿ ಉಪನ್ಯಾಸ ಕಾರ್ಯಕ್ರಮವು ಮಾ. 16ರಂದು ಗೋರೆಗಾಂವ್‌ ಕರ್ನಾಟಕ ಸಂಘದ ಬಾಕೂìರು ರುಕ್ಮಿಣಿ ಶೆಟ್ಟಿ ಮಿನಿ ಸಭಾಗೃಹದಲ್ಲಿ ನಡೆಯಿತು.

Advertisement

ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರಕಾಶ್‌ ಶೆಟ್ಟಿ ಅವರು ಉಪಸ್ಥಿತರಿದ್ದರು. ಉಪನ್ಯಾಸಕರಾಗಿ ಆಗಮಿಸಿದ ವಾಣಿ ಎಸ್‌. ಶೆಟ್ಟಿ ಇವರು ಜಾಗತೀಕರಣದಲ್ಲಿ ಹಳ್ಳಿಯ ಮಹಿಳೆಯರ ಪಾತ್ರ ಎಂಬ ವಿಷಯ ಮೇಲೆ ಉಪನ್ಯಾಸ ನೀಡಿ, ಜನಪದ
ದಿಂದ ಜಾನಪದವು ವಿವಿಧ ರೀತಿ ಯಲ್ಲಿ ಬೆಳೆದು ಜಾಗತಿಕ ರಂಗದಲ್ಲಿ ವಿಶೇಷ ಸ್ಥಾನವನ್ನು ಪಡೆಯುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ದೇಶದ ವಿವಿಧೆಡೆಗಳಲ್ಲಿ ಇದರ ಬೆಳವಣಿಗೆ ವಿವಿಧ ವಿಷಯಗಳಲ್ಲಿ ಬೆಳೆದು ಕರ್ನಾಟಕದಲ್ಲಿ ಅದರಲ್ಲೂ ತುಳುನಾಡಿನಲ್ಲಿ ಇದರ ಪ್ರತಿಭೆ ಮಹತ್ವದ್ದಾಗಿದೆ. ಇದು ಹಳ್ಳಿಯಲ್ಲಿ ಪ್ರಾರಂಭವಾಗಿ, ಹಳ್ಳಿಯಲ್ಲಿಯೇ ಬೆಳೆದು ಸಮಾಜದ ಜೀವನ ಕ್ರಮದಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ ಎಂದರು.

ಮಾಜಿ ಕಾರ್ಯದರ್ಶಿ ವೇದಾ ಸುವರ್ಣ ಅವರ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಪ್ರಾರಂಭ ಗೊಂಡಿತು. ಸಂಘದ ಉಪಾಧ್ಯಕ್ಷ ನಾರಾಯಣ ಆರ್‌. ಮೆಂಡನ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಿನಿಧಿ ಸ್ಥಾಪಕ ಪ್ರಕಾಶ್‌ ಶೆಟ್ಟಿ ಅವರನ್ನು ಸುಗುಣಾ ಬಂಗೇರ ಅವರು ಪರಿಚಯಿಸಿದರು.

ಅಧ್ಯಕ್ಷತೆ ವಹಿಸಿದ್ದ ದೇವಲ್ಕುಂದ ಭಾಸ್ಕರ್‌ ಶೆಟ್ಟಿ ಮತ್ತು ಪ್ರಕಾಶ್‌ ಶೆಟ್ಟಿ ಅವರು ದಿವಂಗತರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಕಾಶ್‌ ಶೆಟ್ಟಿ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಉಪನ್ಯಾಸಕಿ ವಾಣಿ ಶೆಟ್ಟಿ ಅವರನ್ನು ಜತೆ ಕೋಶಾಧಿಕಾರಿ ಸುಮಿತ್ರಾ ಕುಂದರ್‌ ಪರಿಚಯಿಸಿದರು. ಸಂಘದ ವತಿಯಿಂದ ವಾಣಿ ಶೆಟ್ಟಿ ಅವರನ್ನು ಗೌರವಿಸಲಾಯಿತು. ಸಂಘದ ಪಾರುಪತ್ಯಗಾರ ರಮೇಶ್‌ ಶೆಟ್ಟಿ ಮತ್ತು ಗೌರವ ಪ್ರಧಾನ ಕಾರ್ಯದರ್ಶಿ ಮೀನಾ ಕಾಳಾವರ ಅವರು ಸಂದಭೋìಚಿತವಾಗಿ ಮಾತನಾಡಿದರು.

ದೇವಲ್ಕುಂದ ಭಾಸ್ಕರ್‌ ಶೆಟ್ಟಿ ಅವರು ಮಾತನಾಡಿ, ಆಧುನಿಕ ಸಾಮಾಜಿಕ ರಂಗದಲ್ಲಿ ತಾಂತ್ರಿಕ ಜೀವನದ ಪರಿಣಾಮವಾಗಿ ಸಂಸಾರದಲ್ಲಿ ತಂದೆ-ತಾಯಿಯನ್ನೇ ಗೌರವದಿಂದ ನೋಡದಂತಹ ಮಕ್ಕಳಿರುವ ಸಮಯದಲ್ಲಿ ಪ್ರಕಾಶ್‌ ಶೆಟ್ಟಿ ಅವರಂಥವರು ತನ್ನ ತಂದೆ-ತಾಯಿಯ ಸಂಸ್ಮರಣೆಯಲ್ಲಿ ದತ್ತಿನಿಧಿಯನ್ನು ಸ್ಥಾಪಿಸಿರು ವುದು ಅಭಿನಂದನೀಯ. ಜಾಗತೀ ಕರಣದಲ್ಲಿ ಹಳ್ಳಿಯ ಮಹಿಳೆಯರ ಪಾತ್ರ ಮಹತ್ತರವಾಗಿದೆ. ಜಾಗತೀಕರಣದಿಂದ ನಮ್ಮ
ಮೂಲ ಸಂಸ್ಕೃತಿ ಮರೆಯಾಗ ಬಾರದು. ಮೂಲ ಸಂಸ್ಕೃತಿ ಮರೆಯಾದಾಗ ಸಂಸ್ಕೃತಿ, ಸಂಸ್ಕಾರಗಳು ನಾಶವಾಗುತ್ತದೆ. ಗೋರೆಗಾಂವ್‌ ಕರ್ನಾಟಕ ಸಂಘವು ಇಂತಹ ದತ್ತಿನಿಧಿಗಳನ್ನು ಸ್ಥಾಪಿಸಿರುವುದರಿಂದ ತುಳು-ಕನ್ನಡಿಗರಿಗೆ ಉತ್ತಮ ಮಾಹಿತಿಗಳು ಲಭಿಸುತ್ತಿವೆ. ಸಂಘದ ಇಂತಹ ಕಾರ್ಯಕ್ರಮಗಳಲ್ಲಿ ತುಳು-ಕನ್ನಡಿಗರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ಕರೆ ನೀಡಿದರು.

Advertisement

ಗೌರವ ಪ್ರಧಾನ ಕಾರ್ಯದರ್ಶಿ ಜಯಕರ ಪೂಜಾರಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಇನ್ನಿತರ ಉಪಸಮಿತಿಗಳ ಪದಾಧಿಕಾರಿಗಳು, ಸದಸ್ಯ-ಸದಸ್ಯೆಯರು ಪಾಲ್ಗೊಂಡು ಸಹಕರಿಸಿದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪ್ರತಿನಿಧಿಗಳು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next