Advertisement

ಗೋರೆಗಾಂವ್‌ ಕರ್ನಾಟಕ ಸಂಘ ವಾರ್ಷಿಕ ತುಳು ದಿನಾಚರಣೆ

05:36 PM Apr 28, 2019 | Team Udayavani |

ಮುಂಬಯಿ: ವಿಶ್ವದಲ್ಲಿರುವ ಹಲವು ಭಾಷೆಗಳಲ್ಲಿ ಕರ್ನಾಟಕದ ಕರಾವಳಿಯಲ್ಲಿರುವ ತುಳು ಭಾಷೆಯೂ ಒಂದು. ಅತೀ ಪ್ರಾಚೀನ ಭಾಷೆಗಳಲ್ಲೊಂದಾದ ತುಳುವಿಗೆ ತನ್ನದೇ ಆದ ಲಿಪಿ ಹಾಗೂ ಅಸ್ತಿತ್ವವಿದೆ. ಸಂಸ್ಕೃತಿ, ಸಂಸ್ಕಾರ, ಧರ್ಮ, ಪರಂಪರೆ ಮತ್ತು ಮೂಲ ನಂಬಿಕೆಗಳನ್ನು ಕ್ರಮಪ್ರಕಾರ ಪಾಲಿಸಿಕೊಂಡು ಬಂದ ಕಾರಣ, ಈ ಭಾಷೆಯು ಇನ್ನೂ ಮಾಸದೆ ಉಳಿದಿದೆ.

Advertisement

ಪಾಶ್ಚಾತ್ಯ ಭಾಷೆ ಹಾಗೂ ಸಂಸ್ಕೃತಿಯ ಒಲವು ಹೆಚ್ಚಾದ ಪ್ರಯುಕ್ತ ತುಳುಭಾಷೆಯ ಬೆಳವಣಿಗೆ ಕುಂಠಿತವಾಯಿತು. ಈ ನಿಟ್ಟಿನಲ್ಲಿ ಇದನ್ನು ಹತೋಟಿಯಲ್ಲಿ ಇಡಲು ನಾವೆಲ್ಲರೂ ಪ್ರಯತ್ನ ಮಾಡಬೇಕು ಎಂದು ರಂಗಕರ್ಮಿ, ಸಾಹಿತಿ ನಂದಳಿಕೆ ನಾರಾಯಣ ಶೆಟ್ಟಿ ಅವರು ನುಡಿದರು.

ಎ. 14ರಂದು ಗೋರೆಗಾಂವ್‌ ಕರ್ನಾಟಕ ಸಂಘದ ಬಾಕೂìರು ರುಕ್ಮಿಣಿ ಶೆಟ್ಟಿ ಸ್ಮಾರಕ ಮಿನಿ ಸಭಾಗೃಹದಲ್ಲಿ ನಡೆದ ತುಳು ದಿನಾಚರಣೆಯ ಸಂದರ್ಭದಲ್ಲಿ ಸುಧಾಕರ ಶೆಟ್ಟಿ ಮತ್ತು ಎಸ್‌. ಜೆ. ಶೆಟ್ಟಿ ಅವರು ಸ್ಥಾಪಿಸಿದ ದತ್ತಿನಿಧಿಯ ನಿಮಿತ್ತ ಉಪನ್ಯಾಸ ನೀಡಿದ ಅವರು, ತಾನೂ ಸಹ ಅಂತಹ ಸಂಸ್ಕೃತಿ, ಸಂಸ್ಕಾರ, ಧರ್ಮ, ಕಲೆ, ಪರಂಪರೆಗಳನ್ನು ಶಿಸ್ತುಬದ್ಧವಾಗಿ ಆಚರಿಸಿಕೊಂಡು ಬಂದಿರು
ವುದು ತನಗೆ ತೃಪ್ತಿ ಮತ್ತು ಸಂತೋಷನೀಡಿದೆ ಎಂದು ನುಡಿದು ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ತುಳುನಾಡಿನ ಸಾಂಸ್ಕೃತಿಕ ಪದ್ಧತಿಯಂತೆ ಅತಿಥಿಗಳನ್ನು ಬೆಲ್ಲ- ನೀರು ಕೊಟ್ಟು ಸ್ವಾಗತಿಸ ಲಾಯಿತು. ಕಾರ್ಯಕ್ರಮವು ಸಂಘದ ಮಾಜಿ ಕಾರ್ಯದರ್ಶಿ ವೇದಾ ಸುವರ್ಣ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭ ಗೊಂಡಿತು. ಸಂಘದ ಸದಸ್ಯೆ ಸುಜಾತಾ ಯು. ಶೆಟ್ಟಿ ಅವರು ರಚಿಸಿದ ಸಾದಿ ತೋಜುಜಿ ಕಿರು ನಾಟಕ ಪ್ರದರ್ಶನಗೊಂಡಿತು. ಸುಮತಿ ಶೆಟ್ಟಿ ಮತ್ತು ಜಯಕರ ಡಿ. ಪೂಜಾರಿ ಅವರು ಕವನ ವಾಚಿಸಿದರು.
ಗೋರೆಗಾಂವ್‌ ಕರ್ನಾಟಕ ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷರಾದ ರಮೇಶ್‌ ಶೆಟ್ಟಿ ಪಯ್ನಾರು, ಸಂಘದ ಉಪಾಧ್ಯಕ್ಷ ನಾರಾಯಣ ಆರ್‌. ಮೆಂಡನ್‌, ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಜಯಕರ ಡಿ. ಪೂಜಾರಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ನಾರಾಯಣ ಆರ್‌. ಮೆಂಡನ್‌ ಅವರು ಸ್ವಾಗತಿಸಿ, ನಿಟ್ಟೆ ಸುಧಾಕರ ಶೆಟ್ಟಿ ಮತ್ತು ಎಸ್‌. ಜೆ. ಶೆಟ್ಟಿ ಅವರು ಸ್ಥಾಪಿಸಿದ ದತ್ತಿನಿಧಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘದ ವಜ್ರಮಹೋತ್ಸವ ಸಮಾರೋಪ ಸಮಾರಂಭಕ್ಕೆ ದೇಣಿಗೆ ನೀಡಿ ಸಹಕರಿಸಿದ ಎಲ್ಲ ಸದಸ್ಯರನ್ನು ಅಧ್ಯಕ್ಷರು ಮತ್ತು ಅತಿಥಿಗಳು ಸ್ಮರಣಿಕೆಯೊಂದಿಗೆ ಗೌರವಿಸಿದರು.

ಕಾರ್ಯಕ್ರಮದಲ್ಲಿ ಲಘು ಉಪಾಹಾರದ ವ್ಯವಸ್ಥೆಯನ್ನು ಮಾಡಿದ ಸಂಘದ ಮಹಿಳಾ ಸದಸ್ಯೆಯರನ್ನು ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ದೇವಲ್ಕುಂದ ಭಾಸ್ಕರ ಶೆಟ್ಟಿ ಅವರು ಮಾತನಾಡಿ, ಇಂದಿನ ತುಳು ದಿನಾಚರಣೆಯ ಸುಸಂದರ್ಭದಲ್ಲಿ ಸಾಹಿತಿ, ರಂಗಕರ್ಮಿ ನಾರಾಯಣ ಶೆಟ್ಟಿ ನಂದಳಿಕೆ
ಅವರು ಉತ್ತಮ ಉಪನ್ಯಾಸ ನೀಡಿ ದ್ದಾರೆ. ಅವರ ಹೆಸರು ಎಂದ
ಕೂಡಲೆ ನೆನಪಾಗುವುದು ನಂದಳಿಕೆ ಮುದ್ದಣ್ಣ ಮನೋರಮೆಯ ಸರಸಸಲ್ಲಾಪ ಕೃತಿ ಬರೆದ ನಂದಳಿಕೆ ಮದ್ದಣ್ಣನವರು. ಅಂತಹ ಅಭಿಮಾನದ ಸ್ಥಳದ ಹೆಸರನ್ನು ಈಗ ಪ್ರಸಿದ್ಧಗೊಳಿಸಿದ ನಂದಳಿಕೆ ನಾರಾಯಣ ಶೆಟ್ಟಿ ಅವರು ತನ್ನ ಉಪನ್ಯಾಸದಲ್ಲಿ ತಿಳಿಸಿದಂತೆ ತುಳು ಭಾಷೆ ಇದ್ದರೆ ತುಳು ಸಂಸ್ಕೃತಿ, ಸಾಹಿತ್ಯ, ಕಲೆ ಉಳಿಯುತ್ತದೆ. ಆ ನಿಟ್ಟಿನಲ್ಲಿ ಸಂಘವು ನೆರವೇರಿಸುತ್ತಿರುವ ತುಳು ದಿನಾಚರಣೆ ಗಮನಾರ್ಹಎಂದರು.
ಕಾರ್ಯಕ್ರಮವನ್ನು ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಜಯಕರ ಡಿ. ಶೆಟ್ಟಿ ಅವರು ತುಳು ವಿನಲ್ಲಿ ಅರ್ಥಬದ್ಧವಾಗಿ ನಿರೂಪಿಸಿ
ದರು. ಜತೆ ಕಾರ್ಯದರ್ಶಿ ಶಿವಾನಂದಶೆಟ್ಟಿ ವಂದಿಸಿದರು. ಸಂಘದ ಪದಾಧಿ ಕಾರಿಗಳು, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next