Advertisement

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ

11:40 AM Mar 14, 2020 | Naveen |

ಗೊರೇಬಾಳ: ಗ್ರಾಮೀಣ ಭಾಗದ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕು ಎಂದು ಕಾಡಾ ಅಧ್ಯಕ್ಷ ಆರ್‌.ಬಸನಗೌಡ ತುರ್ವಿಹಾಳ ಹೇಳಿದರು.

Advertisement

ಸಿಂಧನೂರು ತಾಲೂಕಿನ ಚಿಕ್ಕಬೇರಿಗಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ನೂತನ ಶಾಲಾ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಯಡಿಯೂರಪ್ಪನವರ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ವಿಶೇಷವಾಗಿ ಈ ಬಾರಿ ಬಜೆಟ್‌ನಲ್ಲಿ ಮಕ್ಕಳಿಗೂ ಅನುದಾನ ಮೀಸಲಿಟ್ಟಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಕ್ಕು ದೇಶದ ಪ್ರಗತಿಗೆ ತಮ್ಮದೇ ಕೊಡುಗೆ ನೀಡುವಂತಾಗಲಿ. ಅತ್ಯಂತ ಹಿಂದುಳಿದ ಈ ಪ್ರದೇಶದಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿರುವುದು ಸಂತೋಷದ ವಿಷಯ ಎಂದರು.

ಪತ್ರಕರ್ತ ಶರಣು ಪಾ. ಹಿರೇಮಠ ಮಾತನಾಡಿ, ತಾಲೂಕಿನ ಕೊನೆ ಭಾಗದ ಹಳ್ಳಿ ಚಿಕ್ಕಬೇರ್ಗಿಯ ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಕೊಡುತ್ತಿರುವ ಶಿಕ್ಷಕರ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳಿಗೆ ಕೂಡಲು ಜಾಗವಿಲ್ಲದ ಸ್ಥಿತಿಯಲ್ಲಿದ್ದ ಈ ಊರಿನ ಶಾಲೆಗೆ ಸರಕಾರದಿಂದ 5 ಎಕರೆ 12 ಗುಂಟೆ. ಜಾಗ ಮತ್ತು ಎಸ್‌ಡಿಎಂಸಿ ಪ್ರಯತ್ನದಿಂದ ಹೆಚ್ಚಿನ ಶಾಲಾ ಕೊಠಡಿಗಳು ಇವೆ. ಇದೆಲ್ಲಾ ಈ ಗ್ರಾಮದ ಶಿಕ್ಷಣ ಪ್ರೇಮಿಗಳ ಪ್ರಯತ್ನದಿಂದ ದೊರಕಿದೆ ಎಂದು ಹೇಳಿದರು.

ಇದೇ ವೇಳೆ ಪ್ರಗತಿಪರ ರೈತ ಸತ್ಯರಾಜಪ್ಪ ಅವರನ್ನು ಸನ್ಮಾನಿಸಲಾಯಿತು. ಕಾಂಗ್ರಸ್‌ ಮುಖಂಡ ಮಲ್ಲನಗೌಡ ಗ್ರಂಥಾಲಯ ಉದ್ಘಾಟಿಸಿದರು. ನೌಕರರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಮುಖ್ಯಗುರು ಬಾಲಚಂದ್ರ ದೋಟಿಹಾಳ, ಶಿಕ್ಷಕ ಶಂಕ್ರಪ್ಪ ಮಾತನಾಡಿದರು. ನಿವೃತ್ತ ಎಎಸ್‌ಐ ಮಲ್ಲಿಕಾರ್ಜುನಯ್ಯ ಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಯಂಕಪ್ಪ ಗದ್ದಡ್ಕಿ ,ಎಸ್ಡಿಎಂಸಿ ಮಾಜಿ ಅಧ್ಯಕ್ಷ ಶರಣಪ್ಪ ಕೆ. ಗೋನಾಳ, ಆರ್‌. ಸಿದ್ದನಗೌಡ, ಕಾಂತಯ್ಯಸ್ವಾಮಿ ಹಿರೇಮಠ, ದಯಾನಂದಯ್ಯ ಸ್ವಾಮಿ ಹಿರೇಮಠ, ರಾಮಣ್ಣ ಕುಲಕರ್ಣಿ, ಗ್ರಾಪಂ ಸದಸ್ಯರಾದ ಬಸವರಾಜ ಹಳೆಮನಿ, ರಾಮಣ್ಣ ಬಡಿಗೇರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next