Advertisement

Goravanahalli ; ಹೊಸವರ್ಷಾರಂಭದ ದಿನ ಮಹಾಲಕ್ಷ್ಮೀ ದೇವಾಲಯದಲ್ಲಿ ಸಾವಿರಾರು ಭಕ್ತರು

09:30 PM Jan 01, 2024 | Team Udayavani |

ಕೊರಟಗೆರೆ: ಹೊಸವರ್ಷದ ದಿನದಂದು ಪ್ರಸಿದ್ಧ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯಕ್ಕೆ ದಾಖಲೆಯ ಸಾವಿರಾರು ಭಕ್ತಾದಿಗಳು ಸರತಿಯ ಸಾಲಿನಲ್ಲಿ ನಿಂತು ದರ್ಶನ ಪಡೆದರು.

Advertisement

ಪ್ರತಿ ವರ್ಷದಂತೆ ಈ ವರ್ಷವು ಸಹ ಹೊಸವರ್ಷಕ್ಕೆ ಗೊರವನಹಳ್ಳಿ ಮಹಾಲಕ್ಷ್ಮೀ ದೇವಿಯ ದರ್ಶನಕ್ಕೆ ರಾಜ್ಯದ ವಿವಿಧ ಕಡೆಗಳಿಂದ ಸಾವಿರಾರು ಭಕ್ತರು ಅಗಮಿಸಿ ದರ್ಶನ ಪಡೆದರು, ಮದ್ಯಾಹ್ನದ ವೇಳೆಗೆ ವಾಹನಗಳನ್ನು ಎರಡು ಕಿ.ಮೀ ದೂರದಲ್ಲಿ ನಿಲುಗಡೆ ಮಾಡಿ ಬಿಸಿಲಿನಲ್ಲಿ ನಡೆದು ದೇವಾಲಯ ತಲುಪಿ ದರ್ಶನ ಪಡೆದರು, ಸಾವಿರಾರು ಭಕ್ತಾದಿಗಳ ಜನಸಾಗರ ದೇವಾಲಯಕ್ಕೆ ಹರಿದು ಬಂದರೂ ಸರತಿಯ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲದಂತೆ ದರ್ಶನದ ವ್ಯವಸ್ಥೆಯನ್ನು ಹಾಗೂ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಎಲ್ಲಿಯೂ ನಿಲ್ಲಿ ಸದೆ ಸಾವಿರಾರು ಜನರಿಗೆ ಪ್ರಸಾದ ನೀಡುವ ವ್ಯವಸ್ಥೆಯನ್ನು ಶ್ರೀ ಮಹಾಲಕ್ಷ್ಮೀ ಸೇವಾ ಟ್ರಸ್ಟ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.

ವಾಹನ ನಿಲುಗಡೆ ಹಾಗೂ ಭಕ್ತಾದಿಗಳನ್ನು ಪೊಲೀಸರು ಮೊದಲೇ ಯೋಚಿಸಿ ಯಾರಿಗೂ ತೋಂದರೆಯಾಗದಂತೆ ಉತ್ತಮವಾಗಿ ಕಾರ್ಯನಿರ್ವಹಿಸಿದರು,

ಈ ಸಂರ್ಭದಲ್ಲಿ ಶ್ರೀ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಜಿ.ವಾಸುದೇವ್ ಮಾತನಾಡಿ ಪ್ರತಿವರ್ಷವು ಹೊಸ ವರ್ಷಕ್ಕೆ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ ಇದನ್ನು ತಿಳಿದ ಟ್ರಸ್ಟ್ ನ ಸದಸ್ಯರುಗಳು ಭಕ್ತಾದಿಗಳಿಗೆ ತಿಂಡಿ ಮತ್ತು ಊಟದ ವ್ಯವಸ್ಥೆಯನ್ನು ತೋಂದರೆಯಾದಂತೆ ಮಾಡಲಾಗಿದೆ.

ವೃದ್ದರು, ಅಂಗವಿಕಲರು, ಶಾಲಾ ಮಕ್ಕಳಿಗೆ ವಿಷೇಶ ನೇರ ದರ್ಶನವನ್ನು ವ್ಯವಸ್ಥೆಮಾಡಲಾಗಿದೆ ಹಾಗೂ ಭಕ್ತಾದಿಗಳನ್ನು ಕರೆ ತರಲು ಟ್ರಸ್ಟ್ ನಿಂದ ಉಚಿತ ವಾಹನ ವ್ಯವಸ್ಥೆಯನ್ನು ಮಾಡಲಾಗಿದ್ದು ಭಕ್ತಾದಿಗಳಿಗೆ ಎಲ್ಲಾ ರೀತಿಯ ಅನುಕೂಲಗಳನ್ನು ಮಾಡಲಾಗಿದೆ, ಈ ಎಲ್ಲಾ ಕಾರ್ಯಕ್ರಮ ಸುಗಮವಾಗಲು ಸ್ಥಳೀಯ ಪೊಲೀಸರು, ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಮಾಧ್ಯಮದವರು ಸಹಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಮುರಳೀಕೃಷ್ಣ, ಖಜಾಂಚಿ ಜಗದೀಶ್, ಧರ್ಮದರ್ಶಿಗಳಾದ ಶ್ರೀಪ್ರಸಾದ್, ಮಂಜುನಾಥ್, ರವಿರಾಜಅರಸ್, ಚಿಕ್ಕನರಸಯ್ಯ, ಲಕ್ಷ್ಮೀಕಾಂತ್, ನಟರಾಜು, ಓಂಕಾರೇಶ್, ಬಾಲಕೃಷ್ಣ, ನರಸರಾಜು, ನಾಗರಾಜು, ಲಕ್ಷ್ಮೀನರಸಯ್ಯ, ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next