Advertisement

ಅಸುನೀಗಿದ ಮಕ್ಕಳ ಸಂಖ್ಯೆ ಒಂದು ಸಾವಿರ

07:00 AM Aug 31, 2017 | Team Udayavani |

ಗೋರಖ್‌ಪುರ: ಶಿಶುಗಳ ಸಾವಿನಿಂದ ಸುದ್ದಿಯಾಗಿ ರುವ ಉತ್ತರ ಪ್ರದೇಶದ ಗೋರಖ್‌ಪುರದ ಬಿ.ಆರ್‌. ಡಿ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹಾಲಿ ವರ್ಷವೇ 1,256 ಶಿಶುಗಳು ಅಸುನೀಗಿವೆ. ಇದು ಯಾವುದೋ ಸಂಸ್ಥೆಯ ಅಂಕಿ ಅಂಶವಲ್ಲ. ಬದಲಾಗಿ ಕಾಲೇಜಿನ ಪ್ರಾಂಶುಪಾಲ ಪಿ.ಕೆ.ಸಿಂಗ್‌ ನೀಡಿರುವ ಮಾಹಿತಿ ಇದು. ಇನ್ನೂ ಆಘಾತದ ವಿಚಾರವೇನೆಂದರೆ ಹಾಲಿ ತಿಂಗಳಲ್ಲಿ ಒಟ್ಟು 296 ಮಕ್ಕಳು ಜೀವ ಕಳೆದುಕೊಂಡಿದ್ದಾರೆ.

Advertisement

ಜನವರಿಯಲ್ಲಿ 152, ಫೆಬ್ರವರಿಯಲ್ಲಿ 122, ಮಾರ್ಚ್‌ ನಲ್ಲಿ 159, ಎಪ್ರಿಲ್‌ನಲ್ಲಿ 123, ಮೇಯಲ್ಲಿ 139, ಜೂನ್‌ನಲ್ಲಿ 137 ಮತ್ತು ಜುಲೈಯಲ್ಲಿ 128 ಮಕ್ಕಳು ಅಸು ನೀಗಿವೆ. 

ಇದರ ಜತೆಗೆ ಕಳೆದ 24 ಗಂಟೆಗಳಲ್ಲಿ ಮೆದುಳು ಜ್ವರದಿಂದಾಗಿ 17 ಮಂದಿ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ.  ಈ ಪೈಕಿ ಇಬ್ಬರು ಚಿಕಿತ್ಸೆ ವೇಳೆ ಕೊನೆಯುಸಿರೆಳೆದಿದ್ದಾರೆ ಎಂದರು. ಅದಕ್ಕೆ ಹಲವು ಕಾರಣಗಳನ್ನು ನೀಡಿರುವ ಅವರು ಅವಧಿ ಪೂರ್ವ ಪ್ರಸವ, ಕಾಮಾಲೆ, ನ್ಯುಮೋನಿಯಾ ಕೂಡ ಕಾರಣ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next