Advertisement

ಆಮ್ಲಜನಕ ಪೂರೈಕೆ ವ್ಯತ್ಯಯ : 30 ಮಕ್ಕಳು ಸಾವು ?

08:13 PM Aug 11, 2017 | Karthik A |

ಗೋರಖ್‌ಪುರ: ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯಲ್ಲಿರುವ ಸರಕಾರಿ ಪ್ರಾಯೋಜಿತ ಆಸ್ಪತ್ರೆಯೊಂದರಲ್ಲಿ ಆಮ್ಲಜನಕ ಪೂರೈಕೆ ವ್ಯತ್ಯಯಗೊಂಡ ಕಾರಣದಿಂದ ಕಳೆದ 48 ಗಂಟೆಗಳಲ್ಲಿ 30 ಮಕ್ಕಳು ಅಸುನೀಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

Advertisement

ಈ ಘಟನೆಯನ್ನು ಗೋರಖ್‌ ಪುರ ಜಿಲ್ಲಾಧಿಕಾರಿ ರಾಜೀವ ರೌಟಾಲ ಅವರು ಖಚಿತಪಡಿಸಿದ್ದಾರೆ. ಇತ್ತ ಆಸ್ಪತ್ರೆಯ ಸಿಬ್ಬಂದಿಗಳು ಈ ದುರಂತಕ್ಕೆ ಆಮ್ಲಜನಕ ಪೂರೈಕೆದಾರರನ್ನು ದೂಷಿಸಿದ್ದಾರೆ. ಕಳೆದ ರಾತ್ರಿ ಆಮ್ಲಜನಕ ಪೂರೈಸುತ್ತಿದ್ದ ಏಜೆನ್ಸಿಯವರು ಇದ್ದಕ್ಕಿದ್ದಂತೆ ಪೂರೈಕೆಯನ್ನು ನಿಲ್ಲಿಸಿದ ಕಾರಣ ಈ ಅವಘಡ ಸಂಭವಿಸಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸಾವಿಗೀಡಾದ ಮಕ್ಕಳು ಆಸ್ಪತ್ರೆಯ ಮೂರು ವಾರ್ಡ್‌ ಗಳಲ್ಲಿ ದಾಖಲಾಗಿದ್ದರು.

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಆಸ್ಪತ್ರೆಗೆ ಭೇಟಿ ನೀಡಿ ಇಲ್ಲಿನ ಕಾರ್ಯವೈಖರಿಯನ್ನು ಪರಿಶೀಲಿಸಿ ತೆರಳಿದ್ದ ಎರಡು ದಿನಗಳ ಬಳಿಕ ಈ ದುರ್ಘ‌ಟನೆ ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next