Advertisement

ಗೋರಖನಾಥ್ ದೇಗುಲ ದಾಳಿ ಹಿಂದೆ ಉಗ್ರ ಲಿಂಕ್; ಹನಿ ಟ್ರ್ಯಾಪ್ ಆಗಿದ್ದ ಆರೋಪಿ!

11:53 AM Apr 08, 2022 | Team Udayavani |

ಲಕ್ನೋ: ಇತ್ತೀಚೆಗೆ ಉತ್ತರ ಪ್ರದೇಶದ ಗೋರಖನಾಥ್ ದೇವಸ್ಥಾನದ ಮೇಲೆ ದಾಳಿ ನಡೆಸಿದ ಆರೋಪಿಯನ್ನು ಹನಿ ಟ್ರ್ಯಾಪ್ ಮೂಲಕ ಬಲೆಗೆ ಬೀಳಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಉತ್ತರ ಪ್ರದೇಶ ಪೊಲೀಸರು ಬಹಿರಂಗ ಪಡಿಸಿದ್ದಾರೆ.

Advertisement

ಗೋರಖನಾಥ್ ದೇವಾಲಯ ದಾಳಿಯ ಆರೋಪಿ ಅಹಮದ್ ಮುರ್ತಜಾ ಅಬ್ಬಾಸಿಯನ್ನು ಇಸ್ಲಾಮಿಕ್ ಸ್ಟೇಟ್ಸ್ ನಿಂದ ಹನಿ ಟ್ರ್ಯಾಪ್ ಮಾಡಿಸಲಾಗಿತ್ತು. ಆ ಮೂಲಕವೇ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಹಮದ್ ಅಬ್ಬಾಸಿಗೆ ಮೊದಲು ಇಸ್ಲಾಮಿಕ್ ಸ್ಟೇಟ್ಸ್ ನ ಮಹಿಳೆಯಿಂದ ಇ ಮೇಲ್ ಬಂದಿತ್ತು. ತಾನು ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಕ್ಯಾಂಪ್ ನಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಳು. ತನ್ನ ಫೋಟೊವನ್ನು ಕಳುಹಿಸಿಕೊಂಡಿದ್ದಳು. ಹೀಗಾಗಿ ಅಬ್ಬಾಸಿ 40 ಸಾವಿರ ರೂ ಕಳುಹಿಸಿದ್ದ. ತಾನು ಭಾರತಕ್ಕೆ ಬಂದಾಗ ಭೇಟಿಯಾಗುತ್ತೇನೆ ಎಂದು ಮಹಿಳೆ ಅಬ್ಬಾಸಿಗೆ ಹೇಳಿದ್ದಳು.

ನಂತರ ಸತತ ಮೇಲ್ ಸಂದೇಶಗಳ ರವಾನೆಯ ಬಳಿಕ ಅಬ್ಬಾಸಿ ಉಗ್ರ ಸಂಘಟನೆ ಸೇರಲು ತಯಾರಿ ನಡೆಸಿದ್ದ. ಮಹಿಳೆಗೆ ಮೂರು ಬಾರಿ ಹಣವನ್ನು ಅಬ್ಬಾಸಿ ಕಳುಹಿಸಿದ್ದ.

ಇದನ್ನೂ ಓದಿ:ರೆಪೋ, ರಿವರ್ಸ್ ರೆಪೋ ದರ ಯಥಾಸ್ಥಿತಿ ಮುಂದುವರಿಕೆ; ಶೇ.7.2 ಜಿಡಿಪಿ ನಿರೀಕ್ಷೆ: ಆರ್ ಬಿಐ

Advertisement

ಐಐಟಿ ಪದವೀಧರನಾಗಿರುವ ಅಹಮದ್ ಅಬ್ಬಾಸಿ ಏಪ್ರಿಲ್ 3ರಂದು ಗೋರಖಪುರದಲ್ಲಿರುವ ಗೋರಖನಾಥ ದೇವಸ್ಥಾನದಲ್ಲಿ ದಾಳಿ ನಡೆಸಿದ್ದ. ಈ ವೇಳೆ ಇಬ್ಬರು ಕಾನ್ಸ್ಟೇಬಲ್ ಗಳು ಗಾಯಗೊಂಡಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಗೋರಖನಾಥ ದೇವಾಲಯದ ಮುಖ್ಯ ಅರ್ಚಕರಾಗಿದ್ದಾರೆ.

ಉತ್ತರ ಪ್ರದೇಶ ಪೊಲೀಸರ ಪ್ರಕಾರ, ಅಬ್ಬಾಸಿ ತನ್ನ ತಪ್ಪೊಪ್ಪಿಗೆಯಲ್ಲಿ, ಮುಸ್ಲಿಮರ ವಿರುದ್ಧ ನಡೆದ ಆಪಾದಿತ ದೌರ್ಜನ್ಯದಿಂದ ತನ್ನ ದ್ವೇಷವು ಹುಟ್ಟಿಕೊಂಡಿದೆ ಎಂದು ಹೇಳಿದ್ದಾನೆ. ಪೌರತ್ವ (ತಿದ್ದುಪಡಿ) ಕಾಯ್ದೆಯೂ ತಪ್ಪು ಎಂದು ಹೇಳಿಕೊಂಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next