ಲಕ್ನೋ: ಉತ್ತರ ಪ್ರದೇಶದ ಗೋರಖ್‌ನಾಥ ಪುರ ದೇಗುಲದ ಸಿಬ್ಬಂದಿ ಮೇಲೆ ಕಳೆದ ವರ್ಷ ಮಾರಣಾಂತಿಕ ಹಲ್ಲೆ ನಡೆಸಿದ್ದ ಹಾಗೂ ಉಗ್ರಸಂಘಟನೆಗಳ ಜತೆಗೆ ನಂಟು ಹೊಂದಿದ್ದ ಅಹ್ಮದ್ ಮುರ್ಜಾಜ್ ಅಬ್ಟಾಸಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ಮರಣದಂಡನೆ ಶಿಕ್ಷೆಗೆ ಗುರಿಪಡಿಸಿದೆ.
Advertisement
ಉತ್ತರ ಪ್ರದೇಶ ಪೊಲೀಸರ ಪ್ರಕಾರ ಇಸ್ಲಾಮಿಕ್ ಸ್ಟೇಟ್ ಉಗ್ರಸಂಘಟನೆಯ ಆದೇಶದಂತೆ ಅಬ್ಟಾಸಿ ದೇಗುಲ ಧ್ವಂಸಕ್ಕೆ ಮುಂದಾಗಿದ್ದನು ಎನ್ನಲಾಗಿದೆ.
ಅಲ್ಲದೇ, ದೇಶದಲ್ಲಿ ಉಗ್ರಸಂಘಟನೆಯ ಕಾರ್ಯಾಚರಣೆಗಳಿಗೆ ಹಣಕಾಸು ನೆರವನ್ನೂ ಒದಗಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.