Advertisement

ಗೋರಖನಾಥ ದೇಗುಲದ ಮೇಲೆ ದಾಳಿ ನಡೆಸಿದದಾತ ಐಸಿಸ್ ಸಂಪರ್ಕದಲ್ಲಿದ್ದ!

09:41 AM May 01, 2022 | Team Udayavani |

ಲಕ್ನೋ: ಗೋರಖನಾಥ ದೇಗುಲ ದಾಳಿ ಪ್ರಕರಣದ ಆರೋಪಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಸಿಸ್) ನ ಹೋರಾಟಗಾರರು ಮತ್ತು ಅವರ ಸಂಪರ್ಕ ಹೊಂದಿರುವವರ ಜೊತೆ ಸಂಪರ್ಕದಲ್ಲಿದ್ದರು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಹೇಳಿದ್ದಾರೆ.

Advertisement

ಎಪ್ರಿಲ್ 3ರಂದು ಅಹಮದ್ ಮುರ್ತಜಾ ಅಬ್ಬಾಸಿ ಎಂಬಾತ ಗೋರಖಪುರ ದೇವಸ್ಥಾನದ ಪ್ರಾಂಗಣಕ್ಕೆ ನುಗ್ಗಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದ.

ಆರೋಪಿಯು ಆಯುಧ ಕಸಿದುಕೊಂಡು ದೊಡ್ಡ ಕಾರ್ಯಾಚರಣೆ ನಡೆಸುವ ಉದ್ದೇಶ ಹೊಂದಿದ್ದರು ಎಂದು ಕುಮಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಕೆಲಸಕ್ಕೆ ಸೇರಿದ ಮೊದಲ ದಿನವೇ ಮಹಿಳೆ ಶವವಾಗಿ ಪತ್ತೆ: ಅತ್ಯಾಚಾರ ಆರೋಪ!

ಗೋರಖನಾಥ ದೇವಾಲಯದ ದಕ್ಷಿಣ ದ್ವಾರದಲ್ಲಿ ಮಾರಣಾಂತಿಕ ದಾಳಿ ನಡೆಸಿ ಕರ್ತವ್ಯ ನಿರತ ಭದ್ರತಾ ಅಧಿಕಾರಿಗಳ ರೈಫಲ್ ಕಸಿದುಕೊಳ್ಳಲು ಯತ್ನಿಸಿದ್ದ. ಆಯುಧ ಕಸಿದುಕೊಂಡು ದೊಡ್ಡ ಕಾರ್ಯಾಚರಣೆ ನಡೆಸುವುದು ಆತನ ಉದ್ದೇಶವಾಗಿತ್ತು ಎಂದಿದ್ದಾರೆ.

Advertisement

“ಆರೋಪಿ ಅಹ್ಮದ್ ಮುರ್ತಾಜಾ ಅಬ್ಬಾಸಿಯನ್ನು ಯುಪಿ ಎಟಿಎಸ್ ತನಿಖೆ ನಡೆಸಿದ ನಂತರ, ಅವನ ಹಲವು ಇ-ಸಾಧನಗಳು, ಜಿಮೇಲ್, ಟ್ವಿಟರ್, ಫೇಸ್‌ಬುಕ್ ಮತ್ತು ಇ-ವ್ಯಾಲೆಟ್‌ಗಳಂತಹ ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳ ಡೇಟಾ ವಿಶ್ಲೇಷಣೆ ನಡೆಸಲಾಯಿತು” ಎಂದು ಪೊಲೀಸ್ ಅಧಿಕಾರಿ ಹೇಳಿದರು.

“ಆರೋಪಿಯು ತನ್ನ ಬ್ಯಾಂಕ್ ಖಾತೆಗಳ ಮೂಲಕ, ಯುರೋಪ್ ಮತ್ತು ಅಮೆರಿಕದ ವಿವಿಧ ದೇಶಗಳಲ್ಲಿ ಐಸಿಸ್ ಬೆಂಬಲಿಗರಿಗೆ ಸಂಬಂಧಿಸಿದ ಸಂಸ್ಥೆಗಳ ಮೂಲಕ ಐಸಿಸ್ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸಲು ಸುಮಾರು 8.5 ಲಕ್ಷ ರೂಪಾಯಿಗಳನ್ನು ಕಳುಹಿಸಿದ್ದ. AK47, M4 ಕಾರ್ಬೈನ್ ಸೇರಿ ವಿವಿಧ ಶಸ್ತ್ರಾಸ್ತ್ರಗಳನ್ನು ಕಳುಹಿಸಿದ್ದ” ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next