Advertisement

ಮೋಕ್ಷಗಿರಿ: ವಿ.ಹಿಂ.ಪ ಭಜರಂಗದಳ ನೇತೃತ್ವದಲ್ಲಿ ಸಾರ್ವಜನಿಕ ಗೋಪೂಜೆ

12:44 PM Nov 06, 2021 | Team Udayavani |

ಕಟಪಾಡಿ: ಮಣಿಪುರ ಕುಂತಳನಗರದ ಮೋಕ್ಷಗಿರಿ ಪುಣ್ಯಕ್ಷೇತ್ರದಲ್ಲಿ ಸಾಮೂಹಿಕ ಗೋಪೂಜೆಯು ವಿಶ್ವಹಿಂದೂ ಪರಿಷತ್‌ ಭಜರಂಗದಳದ ನೇತೃತ್ವದಲ್ಲಿ ಜರಗಿದ್ದು, ಅರ್ಚಕರಾದ ಗಣೇಶ್‌ ಭಟ್‌ ನೆಲ್ಲಿಕಟ್ಟೆ ಪೂಜಾ ವಿಧಾನಗಳನ್ನು ನೆರವೇರಿಸಿದರು.

Advertisement

ಬಿಜೆಪಿ ರಾಜ್ಯ ಕಾರ್ಯಕಾರಿಣಿ, ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ ಮಾತನಾಡಿ, ಸಮಾಜಕ್ಕಾಗಿ ಸಲ್ಲಿಸಿದ ಸೇವೆಯನ್ನು ಸಮಾಜವೇ ಗುರುತಿಸುತ್ತದೆ. ಕಾಲ ನಿರ್ಣಯದಂತೆ ದಿ|ಜಗನ್ನಾಥ ಶೆಟ್ಟಿ ಅವರ ಕನಸಿನ ಮೋಕ್ಷಗಿರಿ ಪುಣ್ಯಕ್ಷೇತ್ರವು ಅವರ ಮಕ್ಕಳ ಮೂಲಕ ಮತ್ತೆ ಪುಣ್ಯಕ್ಷೇತ್ರವಾಗಿಯೇ ರಾರಾಜಿಸಲಿದ್ದು, ಅಂದು ಭಿತ್ತಿದ ಬೀಜ ಮತ್ತೆ ಸಾಕಾರಗೊಂಡು ಮತ್ತಷ್ಟು ಧಾರ್ಮಿಕ ಚಟುವಟಿಕೆಗಳ ಮೂಲಕ ಶಕ್ತಿಯುತ ಪುಣ್ಯ ಕ್ಷೇತ್ರವಾಗಲಿದೆ ಎಂದರು.

ಬಿಜೆಪಿ ಮುಖಂಡ, ಸಮಾಜ ಸೇವಕ ಸುರೇಶ್‌ ಶೆಟ್ಟಿ ಗುರ್ಮೆ ಮಾತನಾಡಿ, ನಮ್ಮ ಹಬ್ಬ ಹರಿ ದಿನಗಳು ಪ್ರಕೃತಿಯೊಂದಿಗೆ ಬೆಸೆದಿದೆ. ಕಾಲದ ಸವಾಲುಗಳನ್ನು ಅನವರತವೂ ಎದುರಿಸಿ ಜನಜಾಗೃತರಾಗುತ್ತಿರುವ ಪರ್ವ ಕಾಲದಲ್ಲಿ ಮೋಕ್ಷಗಿರಿ ಪುಣ್ಯ ಕ್ಷೇತ್ರದಲ್ಲಿ ಸಂಪ್ರದಾಯ ಬದ್ಧ ಗೋಪೂಜೆ ನೆರವೇರಿದೆ. ನಮ್ಮ ಧರ್ಮ, ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳ ಘನತೆ ಗೌರವವನ್ನು  ನಮ್ಮ ಮುಂದಿನ ಪೀಳಿಗೆಗೆ ತಿಳಿಸಬೇಕಿದೆ ಎಂದರು

ಈ ಸಂದರ್ಭ ಭಜರಂಗದಳದ ರಾಜ್ಯ ಸಂಚಾಲಕ ಸುನಿಲ್‌ ಕೆ.ಆರ್‌, ವಿಶ್ವ ಹಿಂದೂ ಪರಿಷತ್‌ ಶಿರ್ವವಲಯಾಧ್ಯಕ್ಷ ವಿಖ್ಯಾತ್‌ ಭಟ್‌, ದುಬೈ ಉದ್ಯಮಿ, ಮೋಕ್ಷಗಿರಿ ಪುಣ್ಯಕ್ಷೇತ್ರದ ಪ್ರಸಾದ್‌ ಶೆಟ್ಟಿ ಕುಂತಳನಗರ,  ಅಶೋಕ್‌ ಶೆಟ್ಟಿ ಕುಂತಳನಗರ, ಮಣಿಪುರ ಗ್ರಾ.ಪಂ. ಸದಸ್ಯರುಗಳಾದ ಸಂತೋಷ್‌ ಶೆಟ್ಟಿ, ಪ್ರಜ್ವಲ್‌ ಹೆಗ್ಡೆ ಮರ್ಣೆ, ಆಶಾ ಶೇಖರ್‌, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಸುವರ್ಣ, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಶ್ರೀಕಾಂತ್‌ ನಾಯಕ್‌ ಅಲೆವೂರು, ದೆಂದೂರು ತೋಟದಮನೆ ಅಶೋಕ್‌ ಶೆಟ್ಟಿ, ಹಿರಿಯರಾದ ಗೋಪು ಪೂಜಾರಿ, ವಿ.ಹಿಂ.ಪ ಭಜರಂಗದಳದ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next