Advertisement

ಕ್ವಾರಂಟೈನ್‌ ಕೇಂದ್ರ, ಸರ್ಕಾರಿ ಆಸ್ಪತ್ರೆಗೆ ಗೋಪಾಲಯ್ಯ ಭೇಟಿ

06:43 AM Jun 10, 2020 | Lakshmi GovindaRaj |

ಚನ್ನರಾಯಪಟ್ಟಣ: ತಾಲೂಕು ಕ್ರೀಡಾಂಗಣದ ಸಮೀಪದ ವಸತಿ ನಿಲಯದಲ್ಲಿ ಜಿಲ್ಲಾಡಳಿತದಿಂದ ತೆರೆಯಲಾಗಿರುವ ಕ್ವಾರಂಟೈನ್‌ ಕೇಂದ್ರ ಹಾಗೂ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಮಂತ್ರಿ ಕೆ.ಗೋಪಾಲಯ್ಯ ಮಂಗಳವಾರ ಭೇಟಿ ನೀಡಿ  ರೋಗಿಗಳ ಆರೋಗ್ಯ ವಿಚಾರಣೆ ಮಾಡಿದರು. ಲಾಕ್‌ಡೌನ್‌ ಸಡಿಲ ವಾಗಿದೆ ಎಂದು ಹೊರ ರಾಜ್ಯದಿಂದ ಬಂದವರ ಕ್ವಾರಂಟೈನ್‌ ಮಾಡು ವುದು ನಿಲ್ಲಬಾರದು.

Advertisement

ಅವರಿಗೆ ಗುಣಮಟ್ಟದ ಆಹಾರ ನೀಡಬೇಕು ಎಂದರು. ಜಿಲ್ಲಾಧಿಕಾರಿ ಗಿರೀಶ್‌  ಮಾತನಾಡಿ, ಕ್ವಾರಂಟೈನ್‌ ಮುಗಿಸಿದವರು ಅವರ ಊರುಗಳಿಗೆ ತೆರಳಲು ಕೆಎಸ್‌ಆರ್‌ ಟಿಸಿಯಿಂದ ಪ್ರತ್ಯೇಕ ಬಸ್‌ ವ್ಯವಸ್ಥೆ ಮಾಡಲಾಗಿದೆ. ಎರಡು ಮೊಬೈಲ್‌ ಆ್ಯಂಬುಲೆನ್ಸ್‌ ಮಾಡಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ  ಎಂದರು.  ಶಾಸಕ ಸಿ.ಎನ್‌.ಬಾಲಕೃಷ್ಣ ಮಾತ ನಾಡಿ, ಹಿರೀಸಾವೆಗೆ ಆ್ಯಂಬುಲೆನ್ಸ್‌ ಅಗತ್ಯ ವಿದೆ,

ತಾಲೂಕಿನ ಎರಡು ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರ ಸಮಸ್ಯೆ ಇದೆ, ಚಾಮಡಿಹಳ್ಳಿ ಗೇಟ್‌ನಲ್ಲಿ ಆಯುರ್ವೇದ ಆಸ್ಪತ್ರೆ ಇದೆ.  ಇಲ್ಲಿಗೆ ಹೆಚ್ಚು ಮಂದಿ ತೆರಳಲು ಸಾಧ್ಯವಾಗುತ್ತಿಲ್ಲ. ಪಟ್ಟಣಕ್ಕೆ ಆಯುರ್ವೇದ ಆಸ್ಪತ್ರೆ ನೀಡಬೇಕು ಎಂದು ಮನವಿ ಮಾಡಿದರು. ಪೊಲೀಸರು ಸಂಚಾರ ಮಾಡುವ ವಾಹನಗಳು ಹಳೆಯದಾಗಿವೆ ಅವು ಗಳನ್ನು ಬದಲಾಯಿಸಬೇಕು ಎಂದು ಹೇಳಿದರು.

ಸಚಿವ ಗೋಪಾಲಯ್ಯ ಮಾತ ನಾಡಿ ಶಾಸಕರೇ ನಿಮ್ಮ ಸರ್ಕಾರ ಇದ್ದಾಗ ಏಕೆ ಪೊಲೀಸ್‌ ಇಲಾಖೆಗೆ ವಾಹನ ನೀಡಲಿಲ್ಲ ಎಂದು ಪ್ರಶ್ನಿಸಿದರು. ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಆರೋಗ್ಯ ವಿಚಾರಿಸಿದರು. ಡಯಾಲಿಸಿಸ್‌ ಕೇಂದ್ರ, ತೀವ್ರನಿಗಾಘಟಕವನ್ನು ಸಚಿವರು ಪರಿಶೀಲಿಸಿದರು. ಜಿಪಂ ಸಿಇಒ ಪರಮೇಶ್‌, ಎಸಿ ನವೀನ್‌ಭಟ್‌, ತಹಶೀಲ್ದಾರ್‌ ಜೆ.ಬಿ. ಮಾರುತಿ, ಡಿಎಚ್‌ಒ ಸತೀಶ್‌, ಡಾ. ಮಹೇಶ, ಮುಖಂಡ  ಅಣತಿ ಆನಂದ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next