Advertisement
ಡಿಸೆಂಬರ್ 20ಕ್ಕೆ ಅವರು ಪೂರ್ಣಕಾಲಿಕ ಕ್ರಿಕೆಟ್ ಸ್ಕೋರರ್, ಅಂಕಿ-ಅಂಶ ತಜ್ಞರಾಗಿ ಒಟ್ಟಾರೆ 50 ವರ್ಷವನ್ನು ಪೂರೈಸಿದರು. ದಕ್ಷಿಣ ವಲಯ – ಆಸ್ಟ್ರೇಲಿಯನ್ಸ್ ನಡುವೆ 1969ರಲ್ಲಿ ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯ ನಡೆದಿತ್ತು. ಈ ವೇಳೆ ಸ್ಕೋರರ್ ಆಗಿ ಗೋಪಾಲಕೃಷ್ಣ ಪಾದಾ ರ್ಪಣೆ ಮಾಡಿದ್ದರು. ಅಂದಿನಿಂದ ಇಂದಿನವರೆಗೆ ಗೋಪಾಲಕೃಷ್ಣ ಅವರು ರಣಜಿ, ದುಲೀಪ್ ಟ್ರೋಫಿ, ಇರಾನಿ ಟ್ರೋಫಿ, ದೇವಧರ್ ಟ್ರೋಫಿ, ವಿಲ್ಸ್ ಟ್ರೋಫಿ ಸೇರಿದಂತೆ ಅನೇಕ ಕ್ರಿಕೆಟ್ ಕೂಟಗಳಿಗೆ ಅಂಕಿ-ಅಂಶ ತಜ್ಞರಾಗಿ ಕೆಲಸ ಮಾಡಿದ್ದಾರೆ. ಒಟ್ಟಾರೆ ಅವರು 98 ಅಂತಾರಾಷ್ಟ್ರೀಯ ಪಂದ್ಯ, 37 ಟೆಸ್ಟ್, 56 ಏಕದಿನ ಹಾಗೂ 5 ಟಿ20 ಪಂದ್ಯಕ್ಕೆ ತಜ್ಞರಾಗಿ ಕೆಲಸ ಮಾಡಿದ್ದಾರೆ. ಇವರು ಪ್ರತಿಷ್ಠಿತ ದಸರಾ ಕ್ರೀಡಾ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿದ್ದಾರೆ. Advertisement
ಕ್ರಿಕೆಟ್ ತಜ್ಞರಾಗಿ 50 ವರ್ಷಕ್ಕೆ ಕಾಲಿಟ್ಟ ಗೋಪಾಲಕೃಷ್ಣ
10:20 AM Dec 28, 2017 | |
Advertisement
Udayavani is now on Telegram. Click here to join our channel and stay updated with the latest news.