ಅಫಜಲಪುರ: ರಾಜ್ಯದ ಐತಿಹಾಸಿಕ ಯಾತ್ರಾ ಸ್ಥಳ ತಾಲೂಕಿನ ದೇವಲಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ರವಿವಾರ ಗೋಪಾಳ ಕಾಳ(ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ) ಸಂಭ್ರಮದಿಂದ ನಡೆಯಿತು.
ಸೀಮಾಂಧ್ರ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ದೇಶದ ನಾನಾ ಮೂಲೆಗಳಿಂದ ಆಗಮಿಸಿದ ಭಕ್ತರು ದತ್ತಾತ್ರೇಯ ದೇವರ ದರ್ಶನ ಪಡೆದರು.
ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ನಂತರ ದತ್ತ ಮಹಾರಾಜರ ಪಲ್ಲಕ್ಕಿ ಉತ್ಸವ ಸಕಲ ವಾದ್ಯ-ಮೇಳ, ಬಾಜಾ
ಭಜಂತ್ರಿಯೊಂದಿಗೆ ನಡೆಯಿತು. ರುದ್ರಪಾದ ತೀರ್ಥದವರೆಗೂ ತೆರಳಿ ಪೂಜೆ ಸಲ್ಲಿಸಿ ಉತ್ಸವ ಪುನಃ ದೇವಸ್ಥಾನಕ್ಕೆ ಬಂದು ತಲುಪಿತು ಎಂದು ದೇವಸ್ಥಾನದ ಅರ್ಚಕರಾದ ಕೃಷ್ಣಂಭಟ್ ಪೂಜಾರಿ, ನಾಗೇಶ ಪೂಜಾರಿ, ನಂದಕುಮಾರ ಪೂಜಾರಿ ಹೇಳಿದರು.
ದೇವಲ ಗಾಣಗಾಪುರ ಪಿಎಸ್‌ಐ ಕೃಷ್ಣಕುಮಾರ, ಎಎಸ್‌ಐ ಭೀಮಾಶಂಕರ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು ಎಂದು ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಜಿ. ಬಿರಾದಾರ ಹೇಳಿದರು.
ಗ್ರಾಪಂ ಅಧ್ಯಕ್ಷ ಮಹೇಶ ಗುತ್ತೇದಾರ, ಸದಸ್ಯರು, ಜಿಪಂ ಉಪಾಧ್ಯಕ್ಷೆ ಶೋಭಾ ಶಿರಸಗಿ, ಸದಸ್ಯ ಅರುಣಕುಮಾರ ಪಾಟೀಲ, ತಾಪಂ ಅಧ್ಯಕ್ಷೆ ರುಕ್ಮಿàಣಿ ಜಮಾದಾರ, ಸದಸ್ಯ ಬಲವಂತ ಜಕಬಾ, ಮುಖಂಡ ಮಹಾದೇವ ಗುತ್ತೇದಾರ
ಇದ್ದರು.