ಭಾಲ್ಕಿ: ಯಾವುದೇ ತುರ್ತು ಸೇವೆಗೆ 112ಗೆ ಕರೆ ಮಾಡಿದರೆ ತಕ್ಷಣವೇ ಪರಿಹಾರ ಒದಗಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ನೀಲಕಂಠ ಬಿರಾದಾರ ಹೇಳಿದರು.
ತಾಲೂಕಿನ ಕಲವಾಡಿ ಗ್ರಾಮದ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಇಆರ್ ಎಸ್‌ಎಸ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಆರ್‌ಎಸ್ ಎಸ್ ಅಂದರೆ (ಎಮರಜೆನ್ಸಿ, ರೆಸ್ಪಾನ್ಸ್, ಸಪೋರ್ಟಿಂಗ್, ಸಿಸ್ಟಂ), ಯಾವುದೇ ತುರ್ತು ಸೇವೆಗೆ ಎಲ್ಲ ರೀತಿಯಿಂದ ಸ್ಪಂದಿಸುವ ಸೇವೆ. ಈ ಮೊದಲು ಬೇರೆ ಬೇರೆ ಇಲಾಖೆಗಳಿಂದ ತುರ್ತು ಸೇವೆ ಒದಗಿಸಲಾಗುತ್ತಿತ್ತು. ಅದು ತುಂಬಾ ಸಮಯ ತೆಗೆದುಕೊಳ್ಳುತ್ತಿತ್ತು. ಸದ್ಯದಲ್ಲಿಯೂ ಆ ಸೇವೆಗಳು ಮುಂದುವರೆದಿವೆ. ಆದರೆ ಅಪಘಾತ ಸೇರಿದಂತೆ ಇನ್ನಾವುದೇ ತುರ್ತು ಸೇವೆಗಳಿಗೂ ತಕ್ಷಣ ಸ್ಪಂದಿಸುವ ಏಕೈಕ ಸೇವೆ ಇಆರ್‌ಎಸ್‌ಎಸ್ ಎಂದರು.
ವಿದ್ಯಾರ್ಥಿಗಳು ತಮ್ಮ ಎದುರಿಗೆ ಯಾವುದೇ ತುರ್ತು ಘಟನೆ ಸಂಭವಿಸಿದಾಗ ತಕ್ಷಣವೇ 112ಗೆ ಕರೆ ಮಾಡಿದಾಗ ಆಗಬಹುದಾದ ಅನಾಹುತ ತಪ್ಪಿಸಬಹುದು ತಂದು ಮಾಹಿತಿ ನೀಡಿದರು. ಇಆರ್‌ಎಸ್‌ಎಸ್ ಪೊಲೀಸ್ ಅಧಿಕಾರಿ ದತ್ತಾತ್ರಿ ಬಿರಾದಾರ ಮಾತನಾಡಿದರು.
Related Articles
ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿ.ಇ ಬಿ.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳೊಂದಿಗೆ ಶಿಕ್ಷಕರಾದ ಕಿರಣಕುಮಾರ ಭಾಟಸಿಂಗೆ, ನಾಗರಾಜ ಕೋಟೆ, ಶಿವಕುಮಾರ ವಾಡಿಕರ, ಆರತಿ ಥಮಕೆ, ಶಿವರಾಜ ರಾಜಗೀರೆ ಇದ್ದರು.