Advertisement
ಮೊಗೇರಿ ಗೋಪಾಲಕೃಷ್ಣ ಅಡಿಗರು ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನವ್ಯಕಾವ್ಯ ಮತ್ತು ನವ್ಯಸಾಹಿತ್ಯ ಎಂಬ ಹೊಸ ಸಂಪ್ರದಾಯವನ್ನು ಬೆಳೆಸಿ ಅದನ್ನು ಪರಾಕಾಷ್ಠೆಗೆ ಒಯ್ದದ್ದು ಅಡಿಗರ ಹೆಚ್ಚುಗಾರಿಕೆ. ಅವರು, ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ದಕ್ಕಲು ಕಾರಣರಾದವರು. ಇದೇ ಕಾರಣಕ್ಕೆ ಅವರನ್ನು ಯುಗಪ್ರವರ್ತಕ ಕವಿ, ಒಂದು ಜನಾಂಗದ ಕಣ್ಣು ತೆರೆಸಿದ ಕವಿ ಎಂದೆಲ್ಲಾ ಕರೆಯಲಾಯಿತು. ಕಾವ್ಯದಲ್ಲಿ ಅವರು ಮಾಡಿದ ಕ್ರಾಂತಿಕಾರಿ ಪರಿವರ್ತನೆ ಕಥೆ, ಕಾದಂಬರಿ, ನಾಟಕ, ವಿಮರ್ಶೆ ಮುಂತಾದ ಇತರೆ ಸಾಹಿತ್ಯ ಪ್ರಕಾರಗಳ ಮೇಲೂ ಪ್ರಭಾವ ಬೀರಿ, ಸಮಗ್ರ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿತು. ವಿಮಶಾì ಕ್ಷೇತ್ರದಲ್ಲೂ ಪ್ರಬುದ್ಧತೆ ತಂದ ಅಡಿಗರು, “ಸಾಕ್ಷಿ’ ಎಂಬ, ಸಾಹಿತ್ಯಿಕ ಬರಹಗಳಿಗೇ ಮೀಸಲಾಗಿದ್ದ ಪತ್ರಿಕೆಯನ್ನು ಸುಮಾರು 20 ವರ್ಷಗಳ ಕಾಲ ನಡೆಸಿದರು. ಆ ಪತ್ರಿಕೆಯ ಮೂಲಕ ಹೊಸ ಸಂವೇದನೆಯನ್ನು, ಹೊಸ ಲೇಖಕರನ್ನು ಪೋ›ತ್ಸಾಹಿಸಿದರು.
Related Articles
Advertisement
ಇದು ಅಡಿಗರ ಜನ್ಮಶತಮಾನೋತ್ಸವದ ವರ್ಷ. ಈ ನೆಪದಲ್ಲಿ, ಕನ್ನಡ ಸಾಹಿತ್ಯ ಪರಿಷತ್‌ನ ಶ್ರೀಕಷ್ಣರಾಜ ಪರಿಷನ್ಮಂದಿರದಲ್ಲಿ ಫೆ. 18ರ ಶನಿವಾರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಅಡಿಗರ ಸ್ಮರಣೆಯ ಕಾರ್ಯಕ್ರಮ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯುವ ಈ ಕಾರ್ಯಕ್ರಮವನ್ನು ಹೆಸರಾಂತ ಕವಿ, ನಾಡೋಜ ನಿಸಾರ್ ಅಹಮದ್ ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮನು ಬಳಿಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಹಿರಿಯ ಕವಿ ಲಕ್ಷಿ¾àನಾರಾಯಣ ಭಟ್ಟ ಭಾಗವಹಿಸಲಿದ್ದಾರೆ.
ಅಂದು ಮಧ್ಯಾಹ್ನ 12ರಿಂದ 1.30ರವರೆಗೆ ಅಡಿಗರ ಗದ್ಯ ಸಾಹಿತ್ಯ ಕುರಿತು ಸಂವಾದ ಗೋಷ್ಠಿ ಇದೆ. ಎಸ್. ದಿವಾಕರ್, ಎಚ್. ದಂಡಪ್ಪ, ಎಚ್.ಎಸ್.ಎಂ. ಪ್ರಕಾಶ್ ಹಾಗೂ ಕೆ. ಸತ್ಯನಾರಾಯಣ ಭಾಗವಸುವ ಈ ಸಂವಾದದ ನಿರ್ವಹಣೆ ಶೂದ್ರ ಶ್ರೀನಿವಾಸ ಅವರದು. ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಕವಿ ಸುಮತೀಂದ್ರ ನಾಡಿಗ ವಹಿಸಲಿದ್ದಾರೆ.
ಮಧ್ಯಾಹ್ನ 2.45ರಿಂದ ಅಡಿಗರ ಕಾವ್ಯ ಕುರಿತ ಸಂವಾದವಿದೆ. ಪ್ರಸಿದ್ಧ ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದು, ಪೊ›. ಅಬ್ದುಲ್ ಬಷೀರ್, ಎಂ.ಎಸ್. ಆಶಾದೇ, ವಿಕ್ರಂ ಹತ್ವಾರ್ ಹಾಗೂ ಚಿತ್ತಯ್ಯ ಪೂಜಾರ್ ಸಂವಾದದಲ್ಲಿ ಭಾಗವಹಿಸಲಿದ್ದಾರೆ.
ಸಂಜೆ 4.15ರಿಂದ 5.15ರವರೆಗೆ ಉಪಾಸನಾ ಮೋಹನ್ ಮತ್ತು ತಂಡದವರಿಂದ ಗೋಪಾಲಕೃಷ್ಣ ಅಡಿಗರ ಭಾವಗೀತೆಗಳ ಗಾಯನವೂ ಇದೆ. ಇದೇ ಸಂದರ್ಭದಲ್ಲಿ “ಅಂಕಿತ ಪುಸ್ತಕ’ ಪ್ರಕಟಿಸಿರುವ “ಗೋಪಾಲಕೃಷ್ಣ ಅಡಿಗ ಕವಿ-ಕಾವ್ಯ ಪರಿಚಯ’ ಕೃತಿಯೂ ಬಿಡುಗಡೆಯಾಗಲಿದೆ.