Advertisement
ಮಂಗಳವಾರ ಬೆಳಗ್ಗೆ ಮಾತೃಶ್ರೀ ಗುಲಾಬಿ ಸಿ. ಶೆಟ್ಟಿ ಅವರ ಆಶೀರ್ವಾದ ಪಡೆದ ಹಾಲಿ ಸಂಸದ ಗೋಪಾಲ್ ಶೆಟ್ಟಿ ಅವರು ಬೊರಿವಿಲಿ ಪಶ್ಚಿಮದ ಎಸ್. ವಿ. ರಸ್ತೆಯ ಸರ್ಕಲ್‌ಗೆ ಆಗಮಿಸಿ ಉಪಸ್ಥಿತರಿದ್ದ ರಾಜ್ಯ ಶಿಕ್ಷಣ ಸಚಿವ ವಿನೋದ್ ತಾಬ್ಡೆ, ದಹಿಸರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಮನೀಷಾ ಚೌಧರಿ, ಶಾಸಕರಾದ ಶಿವಸೇನೆಯ ಪ್ರಕಾಶ್ ಸುರ್ವೆ, ಬಿಜೆಪಿಯ ಅತುಲ್ ಭಟ್‌ಖಳ್ಕರ್ ಅವರನ್ನೊಳಗೊಂಡು ಸ್ವರ್ಗೀಯ ಡಾ| ಶಾಮ ಪ್ರಸಾದ್ ಮುಖರ್ಜಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಂಡು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದಲ್ಲಿ ಗುಜರಾತಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದು, ಕನ್ನಡಿಗ ಗೋಪಾಲ್ ಶೆಟ್ಟಿ ಅವರ ರಾಜಕೀಯ ಗುರು ಎಂದೇ ಬಿಂಬಿತಗೊಂಡಿರುವ 1999 ರ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಐದನೇ ಬಾರಿ ಸ್ಪರ್ಧಿಸಿದ್ದ ರಾಮ್ ನಾಯ್ಕ ಸುಮಾರು 5,17,941 ಮತಗಳನ್ನು ಪಡೆದು ವಿಜೇತರಾಗಿದ್ದರು. ಆ ಮೂಲಕ ಸೋಲಿಲ್ಲದ ಸರದಾರ ಎಂದೇ ಪ್ರಸಿದ್ಧರಾಗಿದ್ದ ನಾಯ್ಕ 2004 ರಲ್ಲಿ ಆರನೇ ಬಾರಿ ಸ್ಪರ್ಧಿಸಿ ಎದುರಾಳಿ ಸ್ಪರ್ಧಿ ಬಾಲಿವುಡ್ ನಟ ಗೋವಿಂದ ಅವರಿಂದ ಸುಮಾರು 41,822 ಮತಗಳಿಂದ ಸೋಲುಂಡಿದ್ದರು. 2009ರಲ್ಲೂ ಏಳನೇ ಬಾರಿ ಸ್ಪರ್ಧಿಸಿದ್ದ ರಾಮ್ ನಾಯ್ಕ 5,779 ಮತಗಳಿಂದ ಸೋಲು ಅನುಭವಿಸಿದ್ದರು.
Related Articles
Advertisement
ಅಂದು ಹನ್ನೆರಡು ಪಕ್ಷಗಳು ಮತ್ತು ಎಂಟು ಪಕ್ಷೇತರರು2014ರಲ್ಲಿ ಈ ಕ್ಷೇತ್ರದಿಂದ ಬಿಜೆಪಿ (ಶಿವಸೇನೆ ಬಿಂಬಲಿತ), ಕಾಂಗ್ರೆಸ್ (ಐ), ಆಮ್ ಆದ್ಮಿ ಪಾರ್ಟಿ, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಎಐಪಿ, ಬಿಬಿಎಂ, ಎಂಪಿಎಸ್ (ಟಿ), ಬಿಎಂಪಿ, ಫಾರ್ವರ್ಡ್ ಬ್ಲಾಕ್, ಪ್ರಬುದ್ಧನ್ ರಿಪಬ್ಲಿಕನ್ ಪಾರ್ಟಿ, ಎಸ್‌ವಿಪಿಪಿ, ಪಿಪಿಐ (ಎಸ್) ಸುಮಾರು 12ಪಕ್ಷಗಳು ಸೇರಿದಂತೆ 8-ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸಾಮರಸ್ಯದ ದ್ಯೋತಕರಾದ ಶಿಸ್ತಿನ ಶಿಪಾಯಿ ಗೋಪಾಲ ಶೆಟ್ಟಿ ಅವರನ್ನು ಕ್ಷೇತ್ರದ ಮತದಾರರು ಲಕ್ಷಾಂತರ ಮತಗಳ ಅಂತರದಿಂದ ತಮ್ಮ ಪ್ರತಿನಿಧಿಯನ್ನಾಗಿಸಿ ಲೋಕಸಭೆಗೆ ಕಳುಹಿಸಿದ್ದರು.