ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ವಿಧಾನಸಭಾ ಕ್ಷೇತ್ರದಿಂದ ಶಾಸಕ ಗೂಳಿಹಟ್ಟಿ ಶೇಖರ್ ಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಹಾರನ ಕಣಿವೆ ರಂಗನಾಥ ಸ್ವಾಮಿ ದೇವಸ್ಥಾನದ ಬಳಿ ಬೆಂಬಲಿಗರ ಸಭೆ ನಡೆಸಿದ್ದಾರೆ.
ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನ್ನ ಟಿಕೆಟ್ ತಪ್ಪಲು ಲಿಂಗಮೂರ್ತಿ, ಯಡಿಯೂರಪ್ಪ, ವಿಜಯೇಂದ್ರನೇ ಕಾರಣ ಮುಖ್ಯವಾಗಿ ನನ್ನ ಟಿಕೆಟ್ ತಪ್ಪಲು ಕಾರಣ. ಸಾಮಾನ್ಯ ಕ್ಷೇತ್ರದಲ್ಲಿ ಟಿಕೆಟ್ ಕೇಳುತ್ತಿರುವುದು ನನ್ನದು ತಪ್ಪಿದೆ. ಎಸ್ಸಿಗಳು ಅವರ ಮೀಸಲು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ನಿಯಮ ಆ ನಿಯಮ ಉಲ್ಲಂಘಿಸಿ ನಾನು ಸಾಮಾನ್ಯ ಕ್ಷೇತ್ರದಲ್ಲಿ ಟಿಕೆಟ್ ಕೇಳಿದ್ದು ನನ್ನದು ತಪ್ಪು.ಆದರೆ ಈ ಬಾರಿ ಟಿಕೆಟ್ ತಪ್ಪಲು ಯಡಿಯೂರಪ್ಪ, ಅವರ ಮಗನೇ ನೇರ ಕಾರಣ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Shivamogga; ಈಶ್ವರಪ್ಪ ನಿವೃತ್ತಿ ವಿರೋಧಿಸಿ, ಪಾಲಿಕೆ ಸದಸ್ಯರಿಂದ ಸಾಮೂಹಿಕ ರಾಜೀನಾಮೆ
ಯಡಿಯೂರಪ್ಪ ಸಿಎಂ ಆಗಲು ನಾನೇ ಕಾರಣ ಎಂದು ಎದೆ ತಟ್ಟಿ ಇವಾಗಲೂ ಹೇಳುತ್ತೇನೆ. ಭೋವಿ ನಿಗಮದ ಹಗರಣ ಸಿಐಡಿಗೆ ಬೊಮ್ಮಯಿ ಸಾಹೇಬ್ರು ಕೊಟ್ಟಿದ್ದಾರೆ. ಸಾಮಾನ್ಯ ಕ್ಷೇತ್ರದಲ್ಲಿ ಎಸ್ಸಿ ಅವರಿಗೆ ಟಿಕೆಟ್ ಕೊಡಬಾರದು ಎಂಬ ಅವರ ಸೈಡ್ ನಿರ್ಣಯ ಸರಿಯಿದೆ. ನನ್ನ ವರ್ಷನ್ ಅಲ್ಲಿ ನಾನು ಕೇಳುವುದು ನನ್ನದು ತಪ್ಪು. ಯಡಿಯೂರಪ್ಪ ಅವರ ಆಪ್ತರಿಗೆ ಒಳ್ಳೆಯ ನಿಗಮ ಕೊಟ್ಟರು ನಮಗೆಲ್ಲ ಭೋವಿ, ವಾಲ್ಮೀಕಿ ಸಣ್ಣ ನಿಗಮ ಕೊಟ್ಟರು. ಅವರ ಬೆಂಬಲಿಗರಿಗೆ ಟೀಂ ಕಟ್ಟುವ ನಿಟ್ಟಿನಲ್ಲಿ ಒಳ್ಳೆಯ ನಿಗಮಗಳನ್ನು ಕೊಟ್ಟರು. ನಮಗೆಲ್ಲಾ ಸಣ್ಣ ನಿಗಮಗಳನ್ನು ಕೊಟ್ಟರು ಎಂದರು.
ಟಿಕೆಟ್ ಹಂಚಿಕೆಯಲ್ಲಿಯೂ ಬಿಎಸ್ ವೈ ಅವರ ಮೇಲುಗೈ ಆಗಿದೆ. ಪಕ್ಷೇತರವಾಗಿ ಸ್ಪರ್ಧಿಸಲು ಮುಂದಾಗಿದ್ದೀನಿ. ಜನಾರ್ದನ ರೆಡ್ಡಿ ಪಾರ್ಟಿಯಲ್ಲಿ ಟಿಕೆಟ್ ಕೊಟ್ಟರೆ ಅಲ್ಲಿ ಸ್ಪರ್ಧೆ ಮಾಡುತ್ತೇನೆ. ಬಿಜೆಪಿ ಸದಸ್ಯತ್ವ ಸ್ಥಾನಕ್ಕೆ ಕೊಡ್ತೇನೆ ಎಂದು ಹೇಳಿದರು.