Advertisement

2016ರಲ್ಲಿ ಭಾರತ ಸಂಜಾತ ಗೂಗಲ್‌ ಸಿಇಓ ಸುಂದರ ಪಿಚೈ ವೇತನ ದುಪ್ಪಟ್ಟು

03:51 PM Apr 29, 2017 | udayavani editorial |

ಹ್ಯೂಸ್ಟನ್‌ : 44ರ ಹರೆಯದ ಭಾರತ ಸಂಜಾತ ಗೂಗಲ್‌ ಸಿಇಓ ಸುಂದರ ಪಿಚೈ ಅವರ ಕಳೆದ ವರ್ಷ ಪಡೆದಿರುವ ವೇತನ 2015ರ ವೇತನಕ್ಕೆ ಹೋಲಿಸಿದರೆ ಸಂಪೂರ್ಣ ದುಪ್ಪಟ್ಟಾಗಿದ್ದು 20 ಕೋಟಿ ಡಾಲರ್‌ ನಷ್ಟು ಹೆಚ್ಚಾಗಿದೆ.

Advertisement

ಪಿಚೈ ಅವರು ಕಳೆದ ವರ್ಷ ಪಡೆದ ವೇತನ 6,50,000 ಡಾಲರ್‌. 2015ರಲ್ಲಿ ಪಿಚೈ ಪಡೆದಿದ್ದ ವೇತನ 6,52,500 ಡಾಲರ್‌. ಹಾಗಿದ್ದರೂ ದೀರ್ಘಾವಧಿಯ ಗೂಗಲ್‌ ಉದ್ಯೋಗಿಯಾಗಿದ್ದು, 2015ರ ಆಗಸ್ಟ್‌ನಲ್ಲಿ ಕಂಪೆನಿಯು ಮರು ನೋಂದಾವಣೆಗೊಂಡಾಗ ಸಿಇಓ ಹುದ್ದೆಗೇರಿದ ಪಿಚೈಗೆ 2016ರಲ್ಲಿ 19.87 ಕೋಟಿ ಡಾಲರ್‌  ಮೌಲ್ಯದ ತನ್ನ ಶೇರುಗಳನ್ನು ಕಂಪೆನಿ ನೀಡಿತು. 2015ರಲ್ಲಿ ಪಿಚೈ ಹೊಂದಿದ್ದ 9.98 ಕೋಟಿ ಡಾಲರ್‌ ಮೌಲ್ಯದ ಶೇರುಗಳು ಈ ಮೂಲಕ ದುಪ್ಪಟ್ಟು ಆಯಿತು. 

ಸುಂದರ ಪಿಚೈ ಗೆ ನೀಡಿರುವ ಈ ಭಾರೀ ಮೊತ್ತದ ವೇತನವನ್ನು ಕಂಪೆನಿಯ ವೇತನ ಸಮಿತಿಯು ಸಮರ್ಥಿಸಿಕೊಂಡಿದೆ. ಸಿಇಓ ಆಗಿ ಪಿಚೈ ಅನೇಕ ಯಶಸ್ವೀ ಉತ್ಪನ್ನಗಳನ್ನು ಬಿಡುಗಡೆ ಮಾಡಿರುವುದರಿಂದ ಅವರಿಗೆ ಇಷ್ಟೊಂದು ದೊಡ್ಡ  ಮೊತ್ತದ ವೇತನ ನೀಡುವುದು ಸಮರ್ಥನೀಯವಾಗಿದೆ ಎಂದು ಕಂಪೆನಿ ಹೇಳಿದೆ. 

ಪಿಚೈ ನೇತೃತ್ವದಲ್ಲಿ ಗೂಗಲ್‌ ತನ್ನ ಮೂಲ ಜಾಹೀರಾತು ಮಾರಾಟವನ್ನು ಗಮನಾರ್ಹ ಪ್ರಮಾಣದಲ್ಲಿ ವೃದ್ಧಿಸಿಕೊಂಡಿದೆ ಮಾತ್ರವಲ್ಲ ಯೂ ಟ್ಯೂಬ್‌ ವಹಿವಾಟನ್ನು ಪರ್ಯಾಪ್ತವಾಗಿ ಹೆಚ್ಚಿಸಿಕೊಂಡಿದೆ. ಇದೇ ವೇಳೆ ಗೂಗಲ್‌, ಯಂತ್ರ ಕಲಿಗೆ, ಹಾರ್ಡ್‌ ವೇರ್‌ ಮತ್ತು cloud ಕಂಪ್ಯೂಟಿಂಗ್‌ ನಲ್ಲೂ ಗಮನಾರ್ಹವಾದ ಬಂಡವಾಳವನ್ನು ಹೂಡಿದೆ ಎಂದು ಕಂಪೆನಿ ಹೇಳಿದೆ.   

Advertisement

Udayavani is now on Telegram. Click here to join our channel and stay updated with the latest news.

Next