ನವದೆಹಲಿ: ಅಂತರ್ಜಾಲದ ಪ್ರಭಾವವನ್ನರಿತಿರುವ ತಂತ್ರಜ್ಞಾನ ನಿಪುಣರು ದಿನಕ್ಕೊಂದು ಮೊಬೈಲ್ ಆ್ಯಪ್ ಗಳನ್ನು ಬಿಡುತ್ತಲೇ ಇದ್ದಾರೆ. ವಿಷಯವೇನು ಗೊತ್ತಾ?
ಗೂಗಲ್‌ನ ಪ್ಲೇಸ್ಟೋರ್ ಮತ್ತು ಆ್ಯಪಲ್‌ನ ಆ್ಯಪ್ ಸ್ಟೋರ್‌ಗಳಲ್ಲಿ ಸದ್ಯ 50 ಲಕ್ಷಕ್ಕೂ ಅಧಿಕ ಆ್ಯಪ್ ಗಳಿವೆ.
ಅದರಲ್ಲಿ 8.13 ಲಕ್ಷ ಆ್ಯಪ್ ಗಳಿಗೆ ವಂಚಿಸುವುದೇ ಕೆಲಸ! ಅವು ತಾವೇನು ಹೇಳುತ್ತವೋ ಅದನ್ನು ಮಾಡುವುದೇ ಇಲ್ಲ. ಇದನ್ನು ಪಿಕ್ಸಲೇಟ್ ಎಂಬ ಸಂಸ್ಥೆ ಪತ್ತೆ ಹಚ್ಚಿದೆ.
ಇದರಿಂದ ಎಚ್ಚೆತ್ತಿರುವ ಗೂಗಲ್ ಮತ್ತು ಆ್ಯಪಲ್‌ಗಳು ಈ ಆ್ಯಪ್ ಗಳನ್ನು ತೆಗೆದುಹಾಕಿವೆ. ಇಷ್ಟರಲ್ಲಾಗಲೇ ಈ ಆ್ಯಪ್‌ಗಳು ಪ್ಲೇಸ್ಟೋರ್ ಮುಖಾಂತರ 900 ಕೋಟಿ ಬಾರಿ, ಆ್ಯಪ್ ಸ್ಟೋರ್ ಮುಖಾಂತರ 2.1 ಕೋಟಿ ಬಾರಿ ಇನ್‌ಸ್ಟಾಲ್ ಆಗಿವೆ!
ಇದನ್ನೂ ಓದಿ:ನ್ಯಾಯಾಲಯಗಳಲ್ಲಿ ಕನ್ನಡದ ಬಳಕೆ ಹೆಚ್ಚಾಗಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ